ಬೆಂಗಳೂರು:ಫಾರೂಖಿ ಬಳಿಕ ಸ್ಟ್ಯಾಂಡ್-ಅಪ್ ಕಮೆಡಿಯನ್ ಕುನಾಲ್ ಕಾಮ್ರಾ ಶೋ ರದ್ದು
ಬೆಂಗಳೂರು, ಡಿಸೆಂಬರ್ 02: ಕಮೆಡಿಯನ್ ಮುನಾವರ್ ಫಾರೂಖಿ ನಂತರ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕುನಾಲ್ ಕಾಮ್ರಾ ಅವರ ಕಾರ್ಯಕ್ರಮವೂ ರದ್ದುಗೊಂಡಿದೆ.
ಬೆಂಗಳೂರಿನಲ್ಲಿ ನಡೆಯಬೇಕಿದ್ದ ತಮ್ಮ ಮುಂಬರುವ ಸ್ಟ್ಯಾಂಡ್-ಅಪ್ ಕಾರ್ಯಕ್ರಮಗಳ ಸಂಘಟಕರಿಗೆ ಬೆದರಿಕೆ ಬಂದ ಹಿನ್ನಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಕಾಮ್ರಾ ಹೇಳಿದ್ದಾರೆ.
ಮುನಾವರ್ ಫಾರೂಖಿ ಅವರಿಗೆ ನಗರದಲ್ಲಿ ಪ್ರದರ್ಶನ ನೀಡಲು ಅನುಮತಿ ನಿರಾಕರಿಸಿದ ಕೆಲವೇ ದಿನಗಳಲ್ಲಿ ಕಾಮ್ರಾ ಅವರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಈ ಹಿಂದೆ ಹಲವು ವಿಷಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿರುವ ಕಾಮ್ರಾ, ನಗರದಲ್ಲಿ ನಡೆಯಲಿದ್ದ ತನ್ನ ಕಾರ್ಯಕ್ರಮಗಳನ್ನು ರದ್ದುಪಡಿಸುವ ಬಗ್ಗೆ ತನ್ನ ಅನುಯಾಯಿಗಳು ಮತ್ತು ವಿರೋಧಿಗಳಿಗೆ ತಿಳಿಸಲು ಟ್ವಿಟ್ಟರ್‌ನಲ್ಲಿ ವ್ಯಂಗ್ಯಾತ್ಮಕವಾಗಿ ಪೋಸ್ಟ್ ಮಾಡಿದ್ದರು.

ಬೆಂಗಳೂರಿಗರಿಗೆ ನಮಸ್ಕಾರಗಳು, ಮುಂದಿನ 20 ದಿನಗಳಲ್ಲಿ ಬೆಂಗಳೂರಲ್ಲಿ ನಡೆಯಬೇಕಿದ್ದ ನನ್ನ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ಬಹಳ ಸಂತೋಷವಾಗಿದೆ. ಎರಡು ಕಾರಣಗಳಿಗಾಗಿ ಅವುಗಳನ್ನು ರದ್ದುಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆ ಎರಡು ಕಾರಣ ಏನೆಂಬುದನ್ನು ಬಹಳ ವ್ಯಂಗ್ಯವಾಗಿ ಹೇಳಿರುವ ಅವರು, ಹೆಚ್ಚು ಕುಳಿತುಕೊಳ್ಳಬಹುದಾದ ಸ್ಥಳದಲ್ಲಿ 45 ಜನರನ್ನು ಕೂರಿಸಲು ನಾವು ವಿಶೇಷ ಅನುಮತಿಯನ್ನು ಪಡೆದಿಲ್ಲ. ಎರಡನೆಯದಾಗಿ ಅಲ್ಲಿ ಪ್ರದರ್ಶನ ನೀಡಬೇಡಿ ಎಂದು ಬೆದರಿಕೆ ಹಾಕಲಾಗಿದೆ.
ಇದು ಸಹ ಕೋವಿಡ್‌ನ ಭಾಗವಾಗಿದೆ ಎಂದು ಭಾವಿಸಲಾಗುವುದು, ಕೋವಿಡ್ ಪ್ರೋಟೊಕಾಲ್ ಹಾಗೂ ನೂತನ ಮಾರ್ಗಸೂಚಿಯನ್ನು ವೈರಸ್‌ನ ರೂಪಾಂತರದಂತೆ ನೋಡುತ್ತಿರುವುದಾಗಿ ವ್ಯಂಗ್ಯ ಮಾಡಿದ್ದಾರೆ.
ಪ್ರಸಿದ್ಧ ಸ್ಟ್ಯಾಂಟ್ ಅಪ್ ಕಮೆಡಿಯನ್ ವೀರ್‌ದಾಸ್ ಅವರು ಕೂಡ ಇತ್ತೀಚೆಗೆ ಹಿಂದುತ್ವವಾದಿಗಳ ವಿರೋಧ ಎದುರಿಸಿದ್ದರು. ಅವರು ಅಮೆರಿಕದಲ್ಲಿ ನೀಡಿದ ಕಾರ್ಯಕ್ರಮದಲ್ಲಿ ಎರಡು ರೀತಿಯ ಭಾರತದ ಅಸ್ತಿತ್ವದ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಕ್ಕೆ ವಿರೋಧ ವ್ಯಕ್ತವಾಗಿತ್ತು.
Recommended Video
ಈ ಕಾರ್ಯತಂತ್ರವನ್ನು ನಿಮಗಾಗದ ಯಾವುದೇ ಕಲಾವಿದನ ವಿರುದ್ಧವೂ ಪ್ರಯೋಗಿಸಬಹುದು ಎಂದು ಕುನಾಲ್ ತನ್ನ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications