15 ವರ್ಷಗಳ ಹೋರಾಟದ ನಂತರ ತುರಹಳ್ಳಿ ಅರಣ್ಯ ಪ್ರದೇಶ ವಶ

ಬೆಂಗಳೂರು, ಸೆಪ್ಟೆಂಬರ್‌ 05: 15 ವರ್ಷಗಳ ಹೋರಾಟದ ನಂತರ ಅರಣ್ಯಾಧಿಕಾರಿಗಳು ಗೋಪಾಲನ್ ಎಂಟರ್‌ಪ್ರೈಸಸ್‌ನಿಂದ ಸಿಸಿಸಿ ಮೀಸಲು ಅರಣ್ಯದಲ್ಲಿ ಮೂರು ಎಕರೆಯನ್ನು ವಶಪಡಿಸಿಕೊಂಡಿದ್ದಾರೆ.

ತುರಹಳ್ಳಿ ಮೈನರ್ ಫಾರೆಸ್ಟ್ ಅನ್ನು ಆಗಸ್ಟ್ 1934ರಲ್ಲಿ ಅಂದಿನ ಮೈಸೂರು ಮಹಾರಾಜರು ಹೊರಡಿಸಿದ ಅಧಿಸೂಚನೆಯ ಆಧಾರದ ಮೇಲೆ ರಚಿಸಲಾಗಿತ್ತು. ತುರಹಳ್ಳಿ (ಸರ್ವೆ ನಂ 41 ಮತ್ತು 42) ಮತ್ತು ಉತ್ತರಹಳ್ಳಿ ಹೋಬಳಿಯ ಭಾಗಗಳಿಂದ ಒಟ್ಟು 597 ಎಕರೆ ಮತ್ತು 19 ಗುಂಟಾಗಳು ತುರಹಳ್ಳಿ ಕಿರು ಅರಣ್ಯವನ್ನು ರಚಿಸಿದ್ದವು.

ಮೀಸಲು ಅರಣ್ಯದಪಕ್ಕದಲ್ಲೇ ಗೋಪಾಲನ್ ಎಂಟರ್‌ಪ್ರೈಸಸ್ ಆಸ್ತಿ ಹೊಂದಿದೆ. ಅರಣ್ಯ ಇಲಾಖೆಯು 2007ರಲ್ಲಿ ಮೊದಲ ಬಾರಿಗೆ ಗೋಪಾಲನ್‌ ಅತಿಕ್ರಮಣದ ವಿರುದ್ಧ ಕ್ರಮಕೈಗೊಂಡಿತು. ಆದರೆ, ಆ ಸಮಯದಲ್ಲಿ ಅಧಿಕಾರಿಗಳು ಕೇವಲ ಐದು ಗುಂಟೆಗಳನ್ನು ಅತಿಕ್ರಮಿಸಿರುವುದನ್ನು ಗಮನಿಸಿದ್ದರು. ಗೋಪಾಲನ್‌ ಎಂಟರ್‌ಪ್ರೈಸಸ್‌ 2011ರಲ್ಲಿ ನೋಟಿಸ್ ವಿರುದ್ಧ ಮೇಲ್ಮನವಿಯನ್ನು ಅರ್ಜಿಯಿಂದ ನಿರಾಸೆಯಾಗಿದ್ದರು.

ಆದರೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಅರಣ್ಯ ಅತಿಕ್ರಮಣದ ವ್ಯಾಪಕ ಸಮಸ್ಯೆಯನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದಾಗ ಉನ್ನತ ಮಟ್ಟದ ಸಮಿತಿಯ ಮಾರ್ಗದರ್ಶನದಲ್ಲಿ ವಿಶೇಷ ತಂಡದಿಂದ ವಿಸ್ತೃತ ಸಮೀಕ್ಷೆ ನಡೆಸಲಾಯಿತು. ಹೊಸ ಸಮೀಕ್ಷೆಯಲ್ಲಿ ಅರಣ್ಯ ಪ್ರದೇಶದಲ್ಲಿ ಒಟ್ಟು 7 ಎಕರೆ 23 ಗುಂಟೆ ಒತ್ತುವರಿ ಮಾಡಲಾಗಿದ್ದು, ಅದರಲ್ಲಿ ಎರಡು ಎಕರೆ 39 ಗುಂಟೆಗಳನ್ನು ಗೋಪಾಲ್ ಎಂಟರ್ ಪ್ರೈಸಸ್ ಒತ್ತುವರಿ ಮಾಡಿಕೊಂಡಿದೆ ಎಂದು ಹೇಳಲಾಯಿತು. ಆಗ ಕಂಪನಿಯ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿತು. ಮತ್ತು 2017 ರಲ್ಲಿ ಹೊಸ ನೋಟಿಸ್ ನೀಡಲಾಯಿತು.

ಗೋಪಾಲ್ ಎಂಟರ್‌ಪ್ರೈಸಸ್‌ನಿಂದ ನಕಲಿ ದಾಖಲೆ

ಗೋಪಾಲ್ ಎಂಟರ್‌ಪ್ರೈಸಸ್‌ನಿಂದ ನಕಲಿ ದಾಖಲೆ

2018ರಲ್ಲಿ ಸಲ್ಲಿಸಿದ ಕಂಪನಿಯ ಮೇಲ್ಮನವಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (CCF) ಇತ್ತೀಚೆಗೆ ವಜಾಗೊಳಿಸಿದ್ದಾರೆ. ಅವರು ಇತ್ತೀಚಿನ ಸಮೀಕ್ಷೆಯ ದಾಖಲೆಗಳು ತಪ್ಪಾಗಿದೆ ಎಂದು ತೋರಿಸಲು ಯಾವುದೇ ದಾಖಲೆಯನ್ನು ಗೋಪಾಲ್ ಎಂಟರ್‌ಪ್ರೈಸಸ್ ವಿಫಲವಾಗಿದೆ ಎಂದು ಅವರು ಹೇಳಿದರು. ಅಭಿವೃದ್ಧಿ ಮತ್ತು ಅರಣ್ಯ ಸಂರಕ್ಷಣೆಯ ನಡುವಿನ ಸಮತೋಲನವನ್ನು ಕಾಪಾಡಿಕೊಳ್ಳಲು ಅರಣ್ಯ ಭೂಮಿ ಮೇಲಿನ ಅತಿಕ್ರಮಣಗಳನ್ನು ತೆಗೆದುಹಾಕುವುದು ಅಗತ್ಯವಾಗಿದೆ ಎಂದು ಸಿಸಿಎಫ್ ಲಿಂಗರಾಜ ಎಸ್ ಎಸ್ ಹೇಳಿದರು.

ಬಾಕಿ ವಿಷಯಗಳ ತೆರವಿಗೆ ಕ್ರಮ

ಬಾಕಿ ವಿಷಯಗಳ ತೆರವಿಗೆ ಕ್ರಮ

ಭೂಮಿಯನ್ನು ಹಿಂಪಡೆಯುವುದು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. ಏಕೆಂದರೆ ಕಂಪೆನಿ ತಮ್ಮ ಹಕ್ಕುಗಳನ್ನು ಸಮರ್ಥಿಸಿಕೊಳ್ಳಲು ನಾವು ಸಾಕಷ್ಟು ಸಮಯವನ್ನು ನೀಡಬೇಕಾಗಿದೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಆದೇಶವನ್ನು ನೀಡಲಾಗಿದೆ. ನಾವು ಬಾಕಿ ಉಳಿದಿರುವ ವಿಷಯಗಳನ್ನು ತೆರವುಗೊಳಿಸಲು ಮುಂದಾಗುತ್ತೇವೆ ಎಂದು ಅವರು ಹೇಳಿದರು.

ಅರಣ್ಯ ಭೂಮಿಗೆ ಕಾಯಕಲ್ಪ

ಅರಣ್ಯ ಭೂಮಿಗೆ ಕಾಯಕಲ್ಪ

ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್‌ ಎಸ್‌ಎಸ್‌, ಬೆಂಗಳೂರು ದಕ್ಷಿಣ ಎಸಿಎಫ್‌ ಚರಣ್‌ ಜಿ ಎಸ್‌, ರೇಂಜ್‌ ಆಫೀಸರ್‌ ಗೋವಿಂದರಾಜು ಮತ್ತಿತರರ ನೇತೃತ್ವದಲ್ಲಿ ಇಲಾಖೆಯು ಕಾಂಪೌಂಡ್‌ ಗೋಡೆಗಳು ಮತ್ತು ಇತರ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ನಂತರ ಪಾಳು ಬಿದ್ದ ಅರಣ್ಯ ಭೂಮಿಗೆ ಕಾಯಕಲ್ಪ ನೀಡುವ ಕಾರ್ಯವನ್ನು ಇಲಾಖೆ ಭಾನುವಾರ ಕೈಗೆತ್ತಿಕೊಂಡಿದೆ ಎಂದು ಚರಣ್ ತಿಳಿಸಿದರು.

ಅರಣ್ಯ ಜಾಗದಲ್ಲಿ ಕಾಂಕ್ರೀಟ್‌ ಮಿಕ್ಸರ್‌ ಘಟಕ

ಅರಣ್ಯ ಜಾಗದಲ್ಲಿ ಕಾಂಕ್ರೀಟ್‌ ಮಿಕ್ಸರ್‌ ಘಟಕ

ಈ ಪ್ರದೇಶದಲ್ಲಿ ನಾಗರಿಕರೊಂದಿಗೆ ಸೇರಿ ಹಲಸು, ಗೊಂಚಲು ಅಂಜೂರ, ಸೀತಾಫಲ ಮತ್ತಿತರ ಸಸಿಗಳನ್ನು ನೆಟ್ಟಿದ್ದೇವೆ. ಕಂಪನಿಯು ಒತ್ತುವರಿ ಮಾಡಿಕೊಂಡಿರುವ ಜಮೀನಿನಲ್ಲಿ ಕಾಂಕ್ರೀಟ್‌ ಮಿಕ್ಸರ್‌ ಪ್ಲಾಂಟ್‌ ಸ್ಥಾಪಿಸಿದ್ದು, ಅದರಲ್ಲಿ ಒಂದು ಭಾಗವನ್ನು ತೆಗೆಯಲು ಏಳು ದಿನ ಕೋರಿದೆ. ಶೀಘ್ರದಲ್ಲೇ ಹೆಚ್ಚಿನ ಅರಣ್ಯ ನಿರ್ಮಾಣ ಚಟುವಟಿಕೆಗಳನ್ನು ಮಾಡಲು ಅರಣ್ಯ ಇಲಾಖೆ ಕಾರ್ಯೋನ್ಮುಖವಾಗುತ್ತದೆ ಎಂದು ಚರಣ್ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+