Get Updates
Get notified of breaking news, exclusive insights, and must-see stories!

Aero India 2023: ಬೆಂಗಳೂರು ಯಲಹಂಕದಲ್ಲಿ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಕೆಗೆ ಸೂಚನೆ

ಬೆಂಗಳೂರಿನ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರುವರಿಯಲ್ಲಿ 'ಏರ್ ಶೋ-2023' ನಡೆಯಲಿದೆ. ಈ ಪ್ರಯುಕ್ತ ಯಲಹಂಕದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಅಳವಡಿಸಲಾದ ಕ್ರೇನ್ ಎತ್ತರ ತಗ್ಗಿಸಲು ಬಿಬಿಎಂಪಿ ಸೂಚನೆ ನೀಡಿದೆ.

ಬೆಂಗಳೂರು, ಜನವರಿ 31: ಬೆಂಗಳೂರಿನ ಯಲಹಂಕ ವಾಯುಸೇನಾ ನೆಲೆಯಲ್ಲಿ ಫೆಬ್ರುವರಿಯಲ್ಲಿ 'ಏರ್ ಶೋ-2023' ನಡೆಯಲಿದೆ. ಈ ಪ್ರಯುಕ್ತ ವಾಯುಸೇನಾ ನೆಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಅಳವಡಿಸಲಾದ ಕ್ರೇನ್ ಎತ್ತರವನ್ನು ತಗ್ಗಿಸುವಂತೆ ಬಿಬಿಎಂಪಿ ಸೂಚನೆ ನೀಡಿದೆ.

ಸಿಲಿಕಾನ್ ಸಿಟಿ, ಐಟಿ ಕೇಂದ್ರ ವಾಗಿರುವ ಬೆಂಗಳೂರು ಯಲಹಂಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವೈಮಾನಿಕ ಪ್ರದರ್ಶನ 2023 (Air show 2023) ಇದೇ ಫೆಬ್ರವರಿ 13ರಿಂದ 17ರವರೆಗೆ ನಡೆಯಲಿದೆ. ಈ ವೇಳೆ ಅನೇಕ ಯುದ್ಧ ವಿಮಾನಗಳು ಕಡಿಮೆ ಎತ್ತರದ ಅಂತರದಲ್ಲಿ ವೈಮಾನಿಕ ಪ್ರದರ್ಶನ ನೀಡುತ್ತವೆ.

ಈ ಸಂಬಂಧ ಯಲಹಂಕ ವಲಯದ ವಾಯುಸೇನಾ ನೆಲೆಯ ಸುತ್ತಮುತ್ತಲಿನ ಐದು ಕಿಲೋ ಮೀಟರ್ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ನಿರ್ಮಾಣ ಹಂತದ ಬೃಹತ್ ಕಟ್ಟಡಗಳ ಮಾಲೀಕರಿಗೆ ಈ ಸೂಚನೆ ನೀಡಲಾಗಿದೆ. ನಿರ್ಮಾಣ ಗೊಳುತ್ತಿರುವ ಕಟ್ಟಡಗಳಲ್ಲಿನ ಕ್ರೇನ್‌ಗಳ ಎತ್ತರವನ್ನು ಫೆಬ್ರುವರಿ 09ರಿಂದ ಫೆಬ್ರುವರಿ 17ರವರೆಗೆ ತಗ್ಗಿಸಲು ಹಾಗೂ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಬಹುಮಹಡಿ ಕಟ್ಟಡಗಳ ಸಂಸ್ಥೆಗಳು/ಮಾಲಿಕರು/ಅಭಿವೃದ್ಧಿದಾರರಿಗೆ ಬಿಬಿಎಂಪಿ ತಿಳಿಸಿದೆ.

Aero India 2023: BBMP instructed under construction building owners Yalahanka reduce cranes height

ಬೃಹತ್ ಬೆಂಗಳೂರು ನಗರ ಪಾಲಿಕೆಯ (BBMP)ಯ ಈ ಆದೇಶ ಉಲ್ಲಂಘಿಸಿದ್ದೇ ಆದಲ್ಲಿ 'ಬಿಬಿಎಂಪಿ ಕಾಯ್ದೆ 2020' ಮತ್ತು 'ಭಾರತೀಯ ಏರ್‌‌ಕ್ರಾಫ್ಟ್ ರೂಲ್ಸ್ 1937ರ ರೂಲ್ 91' ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಯೋಜನೆಯ ಜಂಟಿ ನಿರ್ದೇಶಕರು (ಉತ್ತರ) ಮಂಜೇಶ್ ಅವರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಬಿಬಿಎಂಪಿಯು ವೈಮಾನಿಕ ಪ್ರದರ್ಶನ ಅಂಗವಾಗಿ ಯಲಹಂಕ ವಾಯುನೆಲೆ ವ್ಯಾಪ್ತಿಯಲ್ಲಿ ಜನವರಿ 30ರಿಂದ ಫೆಬ್ರುವರಿ 20ರವರೆಗೆ ಎಲ್ಲ ಬಗೆಯ ಮಾಂಸ ಮಾರಾಟ, ಹೋಟೆಲ್ ರೆಸ್ಟೋರೆಂಟ್‌ಗಳಲ್ಲಿ ಮಾಂಸಾಹಾರ ತಯಾರಿಕೆ ನಿಷೇಧಿಸಿ ಆದೇಶ ಹೊರಡಿತ್ತು.

Aero India 2023: BBMP instructed under construction building owners Yalahanka reduce cranes height

ಬಿಬಿಎಂಪಿ ಸೂಚಿಸಿದ ಅವಧಿಯಲ್ಲಿ ಮಾಂಸ ಮಾರಾಟ, ಮಾಂಸಾಹಾರ ತಯಾರಿಕೆ ನಿಯಮ ಉಲ್ಲಂಘಿಸಿದರೆ ಅಂತವರ ವಿರುದ್ಧ 'ಬಿಬಿಎಂಪಿ ಕಾಯ್ದೆ 2020 ಹಾಗೂ ಭಾರತೀಯ ಏರ್‌ಕ್ರಾಪ್ಟ್ ರೂಲ್ಸ್ 1937ರ ರೂಲ್ 91' ರ ಪ್ರಕಾರ ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+