Bengaluru Weather: ಊಟಿ, ಕೂರ್ಗ್‌ನಂತೆ ಬದಲಾದ ಬೆಂಗಳೂರು, ಡ್ರೋನ್ ವಿಡಿಯೋಗೆ ಬೆರಗಾದ ಜನ
Bengaluru Winter Video: ಬೆಂಗಳೂರು ನಗರ ಬದಲಾದ ಹವಾಮಾನದ ಕಾರಣದಿಂದಾಗಿ ಮಂಜು ಕವಿದ, ಅತೀ ತಂಪಾದ ಪ್ರದೇಶವಾಗಿ ಬದಲಾಗಿದೆ. ಊಟಿ, ಕೂರ್ಗ್‌ನಂತಹ ವಾತಾವರಣ ಇಲ್ಲಿ ನಿರ್ಮಾಣವಾಗಿದೆ. ಗರಿಷ್ಠ ತಾಪಮಾನದಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ. ಸೂರ್ಯನಿಲ್ಲದ ಬೆಂಗಳೂರನ್ನು ಡ್ರೋನ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಈ ವಿಡಿಯೋ ಜನರ ಮನಸ್ಸು ಗೆದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವನ್ನು ನಾಗರಿಕರು ಹಂಚಿಕೊಂಡು, "Bengaluru Right Now', ಬೆಂಗಳೂರು ಹೀಗಿದೆ?', ಬೆಂಗಳೂರು ವಾತಾವರಣ' ಎಂದೆಲ್ಲ ಬರೆದುಕೊಂಡಿದ್ದಾರೆ.
ಬೆಂಗಳೂರಿನ ಚಳಿಗಾಲ ಹೇಗಿರುತ್ತದೆ ಎಂಬುದಕ್ಕೆ ಮತ್ತೊಂದು ವಿಡಿಯೋ ಸಾಕ್ಷಿ ಎಂಬಂತೆ ಆನ್‌ಲೈನ್‌ನಲ್ಲಿ ಹೊಸ ವಿಡಿಯೋ ವೈರಲ್ ಆಗುತ್ತಿದೆ. ಡ್ರೋನ್ ಮೂಲಕ ವೈಮಾನಿಕ ವೀಡಿಯೋ ಸೆರೆ ಹಿಡಿಯಲಾಗಿದೆ. ಬೆಂಗಳೂರಿನಲ್ಲಿನ ಶನಿವಾರದ ಮಂಜು, ಮೋಡ ಕವಿದವಾತಾವರಣ, ತೀವ್ರ ಚಳಿ, ತೇವಾಂಶ ಭರಿತ ಗಾಳಿ ಬೀಸುವಿಕೆಯ ಮಧ್ಯ ನಗರದ ಪ್ರಮುಖ ಬಡಾವಣೆಗಳು ಹೇಗೆ ಕಾಣುತ್ತವೆ ಎಂಬುದನ್ನು ಚಿತ್ರೀಕರಿಸಲಾಗಿದೆ. ವಿಡಿಯೋಗೆ ಬೆಂಗಳೂರು ಮಂದಿ ಫಿದಾ ಆಗಿದ್ದಾರೆ.

ಚಳಿ, ಶೀತ ಅಲೆ, ಮಬ್ಬು ವಾತಾವರಣವೇ ಹೈಲೈಟ್ಸ್
ಚಳಿಗಾಲದಲ್ಲಿ ಬೆಂಗಳೂರು ಶಾಂತವಾಗಿ, ಮಂಜಿನ ಹೊಳಪಿನಲ್ಲಿ ತಣ್ಣಗೆ ಮಲಗಿರುವಂತೆ ಭಾಸವಾಗುತ್ತದೆ. ಮಂಜಿನೊಳಗಿನಿಂದ ಗಗನಚುಂಬಿ ಕಟ್ಟಡಗಳು, ಮೆಟ್ರೋ ಸಂಚಾರ, ಹಸಿರು ಹೊದಿಕೆ ನಿಧಾನವಾಗಿ ತೆರೆದುಕೊಂಡಂತೆ ವಿಡಿಯೋದಲ್ಲಿ ಕಾಣಿಸುತ್ತದೆ. ಈ ವಿಡಿಯೋ ಅನ್ನು ಕಾರ್ತಿಕ್ ಸೂರ್ಯ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, ಅದರಲ್ಲಿ ಜಯನಗರ, ಹುಳಿಮಾವು, ಜೆಪಿನಗರ, ಇಟ್ಟಮಡು ಜಂಕ್ಷನ್, ನೈಸ್ ರಸ್ತೆ, ಸಿಲ್ಕ್ ಬೋರ್ಡ್, ಬನಶಂಕರಿ, ಮಡಿವಾಳ, ಆರ್‌ವಿ ರಸ್ತೆ, ನಮ್ಮ ಮೆಟ್ರೋ ಸಂಚಾರಗಳ ವಿಡಿಯೋ ಪ್ರದರ್ಶನಗೊಂಡಿದ್ದು, ರೋಮಾಂಚನ ಅನುಭವ ನೀಡುತ್ತಿದೆ.
ಚಳಿಗಾಲದಲ್ಲಿ ಬೆಂಗಳೂರು ತನ್ನದೇ ಆದ ಸ್ವರೂಪ ಪಡೆದುಕೊಳ್ಳುತ್ತದೆ. ಚಳಿಗೆ ಹೊದ್ದು ಮಲಗುವ ಜನರು, ಆರೋಗ್ಯ ಕಾಳಜಿ ವಹಿಸುವರು. ಕಳೆದ ಕೆಲವು ದಿನಗಳಿಂದ ನಗರದಲ್ಲಿ ಶೀತ ಅಲೆಯ ವಾತಾವರಣ ಕಂಡು ಬರುತ್ತಿದೆ. ಶನಿವಾರ ಹೆಚ್ಚಿನ ಪ್ರಮಾಣದಲ್ಲಿ ಚಳಿ, ಮಂಜು, ಮೋಡ ಕವಿದ ವಾತಾವರಣ ದಾಖಲಾಯಿತು. ಆಕಾಶದೆತ್ತರದಿಂದ ಡ್ರೋನ್‌ನಲ್ಲಿ ಇದೆಲ್ಲವು ಸೆರೆಯಾಗಿದೆ. ಮೋಡದ ಮರೆಯಲ್ಲಿ ನಗರದ ಸೊಬಗನ್ನು ಕಣ್ತುಂಬಿಕೊಳ್ಳಲಾಗಿದೆ. ಸದ್ಯ ಬೆಂಗಳೂರು ಕೊಡಗು, ಮಡಿಕೇರಿ ಭಾಗದಲ್ಲಿರುವಂತೆ ದಟ್ಟ ಮಂಜು, ಚಳಿಯಿಂದ ಆವರಿಸಿದೆ. ನಿವಾಸಿಗಳಿಗೆ ಬೆಂಗಳೂರು ಕೂರ್ಗ್, ಊಟಿ ರೀತಿಯಲ್ಲಿ ಅನುಭವ ಕೋಡುತ್ತಿದೆ. ಜನ ಮನೆಯಿಂದ ಹೊರ ಬರಲು ಹಿಂದೇಟು ಹಾಕುವಂತಾಗಿದೆ.
ತಾಪಮಾನದಲ್ಲಿ ಭಾರೀ ಇಳಿಕೆ..!
ಇಂದು ಬೆಳಗ್ಗೆ ಜನರು ಶೀತದ ಅಲೆ, ವಿಪರೀತ ಮಬ್ಬು ವಾತಾವರಣದೊಂದಿಗೆ ನಿದ್ರೆಯಿಂದ ಎದ್ದಿದ್ದಾರೆ. ಮಧ್ಯಾಹ್ನವಾದರೂ ಸಹಿತ ಸೂರ್ಯನ ದರ್ಶನವಾಗಿಲ್ಲ. ಶನಿವಾರ ಮತ್ತು ಇಂದು ಗರಿಷ್ಠ ತಾಪಮಾನ 21 ಡಿ.ಸೆ.ಗೆ ಕುಸಿದಿದೆ. ಇದು ಸಾಮಾನ್ಯಕ್ಕಿಂತ ಶೇಕಡಾ 5.8ಡಿ.ಸೆ ಕಡಿಮೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಳಗ್ಗೆ ಚುಮು ಚುಮು ಚಳಿ ಮಧ್ಯೆ ಮಳೆಯ ಸಿಂಚನವಾಗಿಯಿತು. ಸದ್ಯ ಚಳಿ ವಾತಾವರಣವೇ ಇನ್ನು ಕೆಲವು ದಿನ ಮುಂದುವರಿಯುವ ಸಾಧ್ಯತೆ ಇದೆ. ಸದ್ಯ ವಿಡಿಯೋ ನೋಡಿದ ನೆಟ್ಟಿಗರು ತಂಪು ಗಾಳಿ, ಕೊಂಚ ಬೆಳಕು, ಮಂಜು ಕಂಡು ಬೆಂಗಳೂರಿನ ಹವಾಮಾನವನ್ನು ಹೊಗಳಿದ್ದಾರೆ. ನಗರದ ಸೌಂದರ್ಯವನ್ನು ಬದಲಾಯಿಸಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು ಊಟಿಯಾಗಿ ಬದಲಾಗಿದೆ..!
ನೆಟ್ಟಿಗರಲ್ಲಿ ಒಬ್ಬರು "ಈ ವಾತಾವರಣ ಮುಖೇನ ರಾಜಧಾನಿ ಬೆಂಗಳೂರು ನಿಧಾನವಾಗಿ ಊಟಿ, ಕೂರ್ಗ್‌ನಂತೆ ಬದಲಾಗುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ದಶಕಗಳ ಹಿಂದೆ ಬೆಂಗಳೂರು ವರ್ಷವಿಡೀ ಹೀಗೆಯೇ ಇರುತ್ತಿತ್ತು ಎಂದು ಪರಿಗಣಿಸಬಹು' ಎಂದಿದ್ದಾರೆ. ಶೀತ, ಮಬ್ಬು ವಾತಾವರಣದ ಸೌಂದರ್ಯ ಬದಿಗಿಟ್ಟರೆ ನಾನು ನಿತ್ಯವು ಈ ವಾತಾವರಣದಿಂದ ಬಲಹೀನನಾಗುತ್ತಿದ್ದೇನೆ ಎಂದು ಮೂರನೇ ಬಳಕೆದಾರರು ಹೇಳಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಲೈಕ್ ಮಾಡಿದ್ದಾರೆ. ಅನಾರೋಗ್ಯ ಕಾಳಜಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಈ ವೀಡಿಯೋ ಒಂದು ದಿನದಲ್ಲಿ 5.21 ಲಕ್ಷ ಮಂದಿಯಿಂದ ಲೈಕ್ಸ್ ಪಡೆದಿದೆ. ಮಿಲಿಯನ್ ಗಟ್ಟಲೇ ವೀಕ್ಷಣೆ ಪಡೆದಿದೆ. ನೂರಾರು ಕಾಮೆಂಟ್‌ಗಳು ಬಂದಿವೆ.












Click it and Unblock the Notifications