ಮುಖ್ಯಮಂತ್ರಿ ಪರಿಹಾರ ನಿಧಿಗೆ 5 ಲಕ್ಷ ನೀಡಿದ ದೀಪಿಕಾ ದಾಸ್

ಬೆಂಗಳೂರು, ಮಾರ್ಚ್ 31: ಕನ್ನಡ ಚಿತ್ರರಂಗದ ನಟಿ, 'ಬಿಗ್ ಬಾಸ್ ಕನ್ನಡ 7' ರಿಯಾಲಿಟಿ ಶೋ ಸ್ಪರ್ಧಿ ದೀಪಿಕಾ ದಾಸ್ ಕೊರೊನಾ ನಿಯಂತ್ರಣಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ.

5 ಲಕ್ಷ ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೀಪಿಕಾ ನೀಡಿದ್ದಾರೆ. ಈ ವಿಷಯವನ್ನು ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಸಹ ನಾಗರಿಕರಿಗೆ ಸಹಾಯ ಮಾಡುವ ಸಮಯ ಈಗ ಬಂದಿದೆ ಎಂದಿದ್ದಾರೆ.

''ಮಾನವೀಯತೆಗಾಗಿ, ನಮ್ಮ ದೇಶ ಮತ್ತು ನಮ್ಮ ಸಹ ನಾಗರಿಕರಿಗಾಗಿ ಸಹಾಯ ಮಾಡುವ ಸಮಯ ಈಗ ಬಂದಿದೆ. ಹೀಗಾಗಿ ಅವರಿಗೆ ಸಹಾಯ ಮಾಡೋಣ. ನಾನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋವಿಡ್-19 ತಡೆಗೆ 5 ಲಕ್ಷ ಕೊಡುತ್ತಿದ್ದೇನೆ'' ಎಂದು ತಿಳಿಸಿದ್ದಾರೆ.

Actress Deepika Das Donates 5 Lakh

''ಸಾಗರದ ಪ್ರತಿ ಹನಿಗೂ ಮೌಲ್ಯವಿದೆ. ಆದ್ದರಿಂದ ಕೊವೀಡ್-19 ಪರಿಸ್ಥಿತಿಯ ವಿರುದ್ಧ ಹೋರಾಡಲು ಸಹಾಯ ಮಾಡಬೇಕೆಂದು ನಾನು ನಿಮ್ಮೆಲ್ಲರನ್ನೂ ಕೇಳಿಕೊಳ್ಳುತ್ತೇನೆ. ಇದು ಯಾವ ದೊಡ್ಡಸ್ತಿಕೆ ತೋರುವುದಕ್ಕಲ್ಲ. ನೀವು ಕೂಡ ಈ ಕೆಲಸದಲ್ಲಿ ಭಾಗಿ ಆಗಲಿ ಎಂದು ಹೇಳಿದೆ. ಎಲ್ಲರೂ ಸಹಾಯ ಮಾಡೋಣ'' ಎಂದು ಬರೆದುಕೊಂಡಿದ್ದಾರೆ.

ಇಂದು (ಮಾರ್ಚ್ 31) ನಟ ಪುನೀತ್ ರಾಜ್ ಕುಮಾರ್ ಸಹ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. 50 ಲಕ್ಷ ರೂಪಾಯಿಗಳನ್ನು ಪುನೀತ್ ಕೊಟ್ಟಿದ್ದಾರೆ. ಕನ್ನಡ ಚಿತ್ರರಂಗದ ಕೆಲವು ಕಲಾವಿದರು ಕೊರೊನಾ ತಡೆಗೆ ಹಣ ಸಹಾಯ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+