ಅಂಬರೀಷ್ ಪ್ರಜ್ಞೆ ತಪ್ಪಿಲ್ಲ, ಆರಾಮವಾಗಿದ್ದಾರೆ: ಸುಮಲತಾ

ಬೆಂಗಳೂರು, ಫೆ.23: ಅಂಬರೀಷ್ ಪ್ರಜ್ಞೆ ತಪ್ಪಿಲ್ಲ, ಬಿಪಿ, ಶುಗರ್ ನಿಯಂತ್ರಣದಲ್ಲಿದೆ, ಕಿಡ್ನಿ ಸರಿಯಾಗಿ ವರ್ಕ್ ಆಗುತ್ತಿದೆ, ಯಾರೂ ಆತಂಕ ಪಡಬೇಕಾಗಿಲ್ಲ ಎಂದು ನಟ, ಸಚಿವ ಅಂಬರೀಷ್ ಅವರ ಆಪ್ತ ವೈದ್ಯ ಡಾ. ಸತೀಶ್ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ನಟ, ವಸತಿ ಸಚಿವ ರೆಬೆಲ್ ಸ್ಟಾರ್ ಅಂಬರೀಷ್ (61) ಅವರು ಶ್ವಾಸಕೋಶದ ಸೋಂಕಿನ ಹಿನ್ನೆಲೆಯಲ್ಲಿ ಶುಕ್ರವಾರದಂದು ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯ ವಿಕ್ರಂ ಆಸ್ಪತ್ರೆಗೆ ಸೇರಿದ್ದರು. ಅಂಬರೀಷ್ ಅವರ ಚಿಕಿತ್ಸೆ, ಆರೋಗ್ಯ ಪರಿಸ್ಥಿತಿ ಬಗ್ಗೆ ಕಾಲಕಾಲಕ್ಕೆ ಮಾಧ್ಯಮಗಳಲ್ಲಿ ಮಾಹಿತಿ ನೀಡಲಾಗುತ್ತಿತ್ತು. ಆದರೂ, ಅವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಅವರ ಅಪಾರ ಅಭಿಮಾನಿ ಬಳಗ ಆತಂಕಕ್ಕೀಡಾಗಿದ್ದರು. ಹೀಗಾಗಿ ವಿಕ್ರಂ ಆಸ್ಪತ್ರೆ ವೈದ್ಯರು ಹಾಗೂ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಮಹತ್ವ ಪಡೆದಿತ್ತು.

ಸುಮಲತಾ ಮನವಿ:' ಅಂಬರೀಷ್ ಅವರು ಚೆನ್ನಾಗಿದ್ದಾರೆ. ಆರೋಗ್ಯ ತುಂಬಾ ಸುಧಾರಿಸಿದೆ. ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸುಮ್ಮನೆ ಸುಳ್ಳು ಹಬ್ಬಿಸಬೇಡಿ. ಇದರಿಂದ ಮುಗ್ಧ ಜನರಿಗೆ ನೋವುಂಟಾಗುತ್ತದೆ. ಮಾಧ್ಯಮಗಳು ದಯವಿಟ್ಟು ಈ ಬಗ್ಗೆ ಸಹಕರಿಸಿ, ಅಭಿಮಾನಿಗಳಿಗೆ ಕಾಲಕಾಲಕ್ಕೆ ಮಾಹಿತಿ ನೀಡಿ ಸಹಕರಿಸಿ. ಅಂಬರೀಷ್ ಅವರ ಕುಟುಂಬಕ್ಕೆ ಸ್ವಲ್ಪಕಾಲ ಖಾಸಗಿ ಸಮಯ ನೀಡಿ' ಎಂದು ಅಂಬರೀಷ್ ಅವರ ಪತ್ನಿ ಸುಮಲತಾ ಅವರು ಮನವಿ ಮಾಡಿದ್ದಾರೆ.

ಇದಕ್ಕೂ ಮುನ್ನ, ಅಂಬರೀಶ್ ಅವರ ಅಣ್ಣನ ಮಗ ಮದನ್ ಅವರು ಮಾತನಾಡಿದರು. ಚಿಕ್ಕಪ್ಪ(ಅಂಬರೀಷ್) ಅವರ ಆರೋಗ್ಯದ ಚೆನ್ನಾಗಿದೆ. ಐದು ನಿಮಿಷದ ಹಿಂದೆಯಷ್ಟೇ ಮಾತನಾಡಿಸಿ ಬಂದಿದ್ದೇನೆ ಎಂದರು.

ಆದರೆ ಅಭಿಮಾನಿಗಳು ಇದಕ್ಕೆ ಒಪ್ಪದೆ ಸುಮಲತಾ ಅವರು ಸುದ್ದಿಗೋಷ್ಠಿ ಬಂದು ಅಂಬಿ ಆರೋಗ್ಯದ ಕುರಿತು ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು. ನಂತರ ಬಂದ ಸುಮಲತ ಅವರು ಅಂಬರೀಶ್ ಅವರ ಆರೋಗ್ಯ ಚನ್ನಾಗಿದೆ ಅವರಿಗೆ ಯಾವುದೇ ತೊಂದರೆ ಇಲ್ಲ. ಸದ್ಯ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದರು.

Actor Ambareesh is stable, say Vikram Hospital doctors
ವಿಕ್ರಂ ಆಸ್ಪತ್ರೆ ಶ್ವಾಸಕೋಶ ತಜ್ಞ ಡಾ. ಸತೀಶ್ ಅವರ ಮಾತುಗಳು:
* ಅಂಬರೀಷ್ ಅವರ ಶ್ವಾಸಕೋಶದಲ್ಲಿ oedema(or dropsy) ಸಾಮಾನ್ಯವಾಗಿ ಹೇಳುವುದಾದರೆ ನೀರು ತುಂಬಿಕೊಂಡಿದೆ. ಇದರಿಂದ ಅವರಿಗೆ ಉಸಿರಾಟಕ್ಕೆ ತೊಂದರೆಯಾಗಿರುವ ಸಾಧ್ಯತೆಯಿದೆ.
* ಶ್ವಾಸಕೋಶ ತೊಂದರೆ ಸಾಮಾನ್ಯವಾಗಿದ್ದು, ಯಾರಿಗಾದರೂ ಬರಬಹುದು. ಇದರಲ್ಲಿ ವಿಶೇಷವೇನಿಲ್ಲ.
* ಅವರಿಗೆ ಸೂಕ್ತ ಚಿಕಿತ್ಸೆ ನೀಡಲು CCCU (ICU ಎನ್ನಬಹುದು) ಘಟಕದಲ್ಲಿ ನಿಗಾವಹಿಸಲೇಬೇಕು. ಆದರೆ, ಈ ಬಗ್ಗೆ ಅತಂಕ ಬೇಡ.
* ಐಸಿಯುನಲ್ಲಿ ಇನ್ನೂ ಎರಡು ದಿನಗಳ ಕಾಲ ಇರಬೇಕಾಗುತ್ತದೆ. ನಂತರ ನಾವು ಮತ್ತೊಮ್ಮೆ ಸುದ್ದಿಗೋಷ್ಠಿ ಕರೆದು ವಿವರಿಸುತ್ತೇವೆ.
* ಅಂಬರೀಷ್ ಅವರಿಗೆ ಮಧುಮೇಹ ಮಾತ್ರ ಇದೆ. ಹೃದಯ, ಕಿಡ್ನಿ ಸಂಬಂಧಿತ ತೊಂದರೆಗಳಿಲ್ಲ. ಶ್ವಾಸಕೋಶದ ಸಮಸ್ಯೆಯನ್ನು ವೈದ್ಯರು ನಿವಾರಿಸಿದ್ದು, plumonologist, cardiologist ಇಬ್ಬರು ಸದಾ ಕಾಲ ಅವರ ನಿಗಾವಹಿಸಿದ್ದಾರೆ.

* ಅಂಬರೀಷ್ ಅವರಿಗೆ ದ್ರವರೂಪದಲ್ಲಿ ಆಹಾರ ನೀಡಲಾಗುತ್ತದೆ.
* ಹತ್ತು ಜನ ವಿಶೇಷ ತಜ್ಞರು ಕಾಲಕಾಲಕ್ಕೆ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
* ಅವರು ದೊಡ್ಡ ವ್ಯಕ್ತಿ ಅವರು ಸ್ನೋಕ್ ಮಾಡ್ತಾ ಇದ್ರು, ಡ್ರಿಂಕ್ಸ್ ಮಾಡ್ತಾ ಇದ್ರು ಎನ್ನುವುದು ಬೇಡ. ಒಳ್ಳೆಯದನ್ನು ಮಾತನಾಡೋಣ
* ಬಿಪಿ ನಾರ್ಮಲ್, ಶುಗರ್ 200ಕ್ಕಿಂತ ಕಡಿಮೆ ಇದೆ.
* ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಪುರಕ್ಕೆ ಹೋಗುವ ಅವಶ್ಯಕತೆ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+