Get Updates
Get notified of breaking news, exclusive insights, and must-see stories!

ವಿಡಿಯೋ: ಕಮಲ್ - ಫ್ಯಾನ್ಸ್ ನೂಕಾಟ ಅಸಲಿಯತ್ತೇನು?

ಬೆಂಗಳೂರು, ನವೆಂಬರ್ 27: ನಟ ಕಮಲ್ ಹಾಸನ್ ಅವರು ಏನು ಮಾಡಿದರೂ ಈಗ ದೊಡ್ಡ ಸುದ್ದಿಯಾಗುತ್ತಿದೆ. ರಾಜಕೀಯ ಪ್ರವೇಶದ ಬಗ್ಗೆ ಇಂಗಿತ ವ್ಯಕ್ತಪಡಿಸಿದ ಬಳಿಕ ಕಮಲ್ ಅವರ ಒಂದೊಂದು ನಡೆ, ನುಡಿಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಳೆದು ತೂಗಲಾಗುತ್ತಿದೆ. ಬೆಂಗಳೂರಿಗೆ ಬಂದಿದ್ದ ಕಮಲ್ ಅವರು ಅಭಿಮಾನಿಯೊಬ್ಬರಿಗೆ ಹೊಡೆದರು ಎಂಬ ಆರೋಪ ಎದುರಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಭಿಮಾನಿಯೊಬ್ಬರನ್ನು ದೂಡಿ, ಕೆನ್ನೆಗೆ ಬಾರಿಸಿದ್ದಾರೆ ಎಂಬ ವಿಡಿಯೋ ವೈರಲ್ ಆಗಿದೆ. ಆದರೆ, ಇದೆಲ್ಲವೂ ಸುಳ್ಳು, ಕಮಲ್ ಅವರು ಆ ವ್ಯಕ್ತಿಯ ಕೆನ್ನೆಗೆ ಬಾರಿಸಿಲ್ಲ ಎಂದು ಕಮಲ್ ಅಭಿಮಾನಿಗಳ ಸಂಘಗಳು ಹೇಳಿವೆ. ಒಟ್ಟಾರೆ, ಪರ ವಿರೋಧ ಚರ್ಚೆ ಜಾರಿಯಲ್ಲಿದೆ.

Actor Kamal Haasan manhandles a fan Is it True? Watch Video

ಶಾಪಿಂಗ್ ಅಂಗಡಿಯೊಂದಕ್ಕೆ ಬಂದಿದ್ದ ನಟ ಕಮಲ್ ಮತ್ತು ನಟ ರಮೇಶ್ ಅರವಿಂದ್ ಅವರು ಅಲ್ಲಿಂದ ಹಿಂತಿರುಗುವಾಗ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇದರಿಂದ ಕಸಿವಿಸಿಗೊಂಡ ರಮೇಶ್ ಅವರು ಮೊದಲಿಗೆ ಅಭಿಮಾನಿಯನ್ನು ಪಕ್ಕಕ್ಕೆ ತಳ್ಳಿದ್ದಾರೆ.


ಪಟ್ಟು ಬಿಡದ ಅಭಿಮಾನಿ ಮತ್ತೊಮ್ಮೆ ಕಮಲ್​ರನ್ನು ಮಾತಾಡಿಸಲು ಯತ್ನಿಸಿ, ಕಾಲಿಗೆ ಬೀಳಲು ಮುಂದಾದಾಗ ಕಮಲ್ ಅವರು ಅಭಿಮಾನಿಯ ಭುಜವನ್ನು ತಳ್ಳಿದ್ದಾರೆ. ಅಷ್ಟರಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ.

ಒಂದು ಬದಿಯಿಂದ ವಿಡಿಯೋ ನೋಡಿದರೆ ಅಭಿಮಾನಿಯನ್ನು ಕಮಲ್ ದೂಡಿದಂತೆ ಕಾಣುತ್ತದೆ. ಇನ್ನೊಂದು ಬದಿಯಿಂದ ನೋಡಿದರೆ ಪಕ್ಕದಲ್ಲಿದ್ದ ಪೊಲೀಸರು ದೂಡಿದಂತೆ ಕಾಣುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+