Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ: ಉಮಾಪತಿ ಹೇಳಿದ್ದೇನು?

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನವೂ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಕೇಸ್‌ ಅಗೆದಷ್ಟು ಆಳಕ್ಕೆ ಹೋಗುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ರನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಅಲ್ಲದೆ ಅವರನ್ನು ವಿಚಾರಣೆ ನಡೆಸಿ, ಕೋರ್ಟ್‌ಗೆ ಹಾಜರು ಪಡಿಸಿದ್ದರು. ಕೋರ್ಟ್‌ 13 ಜನ ಆರೋಪಿಗಳನ್ನು ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ.

ದರ್ಶನ್‌ ಮಂಗಳವಾರದಿಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಇದ್ದಾರೆ. ಅವರಿಗೆ ಅಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ಪೊಲೀಸ್‌ ಠಾಣೆಯ ಸುತ್ತ ಶಾಮಿಯಾನ ಹಾಕಲಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸ್‌ ಠಾಣೆಗೆ ಶಾಮಿಯಾನ ಹಾಕಿದ್ದರ ವಿರುದ್ಧ ಅಪಸ್ವರ ಕೇಳಿ ಬರುತ್ತಿವೆ.

Actor Darshan Renukaswamy Murder Case What Did Umapati Say

144 ಸೆಕ್ಷನ್‌ ಏಕೆ?

ದರ್ಶನ್‌ ಇರುವ ಪೊಲೀಸ್‌ ಠಾಣೆಯ ಸುತ್ತ ಮುತ್ತಲೂ ನಿಷೇದಾಜ್ಷೆಯನ್ನು ಜಾರಿಗೆ ಮಾಡಲಾಗಿದೆ. ಇದರಿಂದಲೂ ಸಹ ಸಾರ್ವಜನಿಕರು ಬೇಸತ್ತಿದ್ದರು. ಅಲ್ಲದೆ ಪೊಲೀಸರು ಬ್ಯಾರಿ ಕೇಡ್‌ಗಳನ್ನು ಹಾಕಿ ರಸ್ತೆಯನ್ನು ಬ್ಲಾಕ್ ಮಾಡಿದ್ದರು. ಇದರಿಂದ ಜನರು ಇಲಾಖೆಯ ವಿರುದ್ಧ ಕಿಡಿ ಕಾರಿದ್ದರು. ಗುರುವಾರ ಬ್ಯಾರಿಕೇಡ್‌ಗಳನ್ನು ತೆರೆಯಲಾಗಿದ್ದು, ಸಾವರ್ಜನಿಕರಿಗೆ ಅವಕಾಶ ನೀಡಲಾಗಿದೆ.

ಶಾಮಿಯಾನ ಹಾಕಿದ್ದು, ಏಕೆ ಪೊಲೀಸ್‌ ಠಾಣೆಯಲ್ಲಿ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆಯೆ ಎಂಬುದನ್ನು ಪ್ರಶ್ನಿಸಿ, ವಕೀಲರಾದ ಸುಧಾ ಕಾಟವಾ, ನರಸಿಂಹಮೂರ್ತಿ, ಉಮಾಪತಿ ಆರ್‌ಟಿ ಐ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಠಾಣೆಯ 48 ಗಂಟೆಗಳ ಸಿಸಿಟಿವಿ ಒದಗಿಸುವಂತೆ ಕೋರಲಾಗಿದೆ.

ಆರ್‌ಟಿಐನಲ್ಲಿ ನಾವು ಮೂರು ವಿಷಯಗಳ ಬಗ್ಗೆ ಸ್ಪಷ್ಟೀಕರಣ ಕೇಳಿದ್ದೇವೆ ಎಂದು ಉಮಾಪತಿ ತಿಳಿಸಿದ್ದಾರೆ. ಠಾಣೆಯಲ್ಲಿ ಶಾಮಿಯಾನ ಹಾಕಿದ್ದು ಏಕೆ?, 144 ಸೆಕ್ಷನ್‌ ಜಾರಿ ಮಾಡಲು ಏನು ಕಾರಣ? ಒಳಗಡೆಯ ಕಂಪ್ಲೀಟ್‌ ಸಿಸಿಟಿವಿ ದೃಶ್ಯಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದಾರೆ.

Actor Darshan Renukaswamy Murder Case What Did Umapati Say

ಈ ಸಂಬಂಧ ವಕೀಲ ಉಮಾಪತಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಈ ಠಾಣೆಯಲ್ಲಿ ದರ್ಶನ್‌ ಹಾಗೂ ಉಳಿದವರಿಗೆ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಪೊಲೀಸ್‌ ಠಾಣೆಯಲ್ಲಿ 48 ಗಂಟೆಗಳಲ್ಲಿ ಏನೆಲ್ಲಾ ನಡೆದಿದೆ ಎಂಬ ದೃಶ್ಯಾವಳಿ ಕೇಳಿದ್ದೇವೆ ಎಂದಿದ್ದಾರೆ. ಸುಪ್ರೀಂ ಕೋರ್ಟ್‌ ಕೋರ್ಟ್‌ ಆದೇಶದಲ್ಲಿ ಎಲ್ಲ ಪೊಲೀಸ್‌ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವುದು ಅವಶ್ಯಕ. ಹೀಗಾಗಿ ಸಿಸಿಟಿವಿ ದೃಶ್ಯಗಳನ್ನು ವಕೀಲರು ಕೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+