Pavithra Friend Samatha: ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಭೇಟಿಯಾದ 'ಆ ಮಹಿಳೆ' ಯಾರು?
ಬೆಂಗಳೂರು, ಜುಲೈ 04: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲುಪಾಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನ ಇಂದು ಮುಕ್ತಾಯವಾಗಲಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ದರ್ಶನ್ ನೋಡಲು ಚಿತ್ರರಂಗದ ನಟ ನಟಿಯರು ಸೇರಿದಂತೆ ಅನೇಕರು ಜೈಲಿನತ್ತ ಬರುತ್ತಿದ್ದಾರೆ. ಆದರೆ ದರ್ಶನ್ ಕುಟುಂಬಸ್ಥರನ್ನು ಹೊರತು ಪಡಿಸಿ ಬೇರೆಯಾರನ್ನೂ ಭೇಟಿಯಾಗುತ್ತಿಲ್ಲ. ಈ ಮಧ್ಯ ದರ್ಶನ್ ಮಹಿಳೆಯೊಬ್ಬರನ್ನು ಭೇಟಿಯಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಎರಡು ವಾರ ಕಳೆದಿದ್ದಾರೆ. ಈ ಮಧ್ಯ ಪತ್ನಿ, ಮಗ, ತಾಯಿ, ಸಹೋದರನ್ನು ಬಿಟ್ಟು ರಕ್ಷಿತಾ ಪ್ರೇಮ್ ಹಾಗೂ ವಿನೋದ್ ಪ್ರಭಾಕರ್ ಅವರನ್ನು ಮಾತ್ರ ದರ್ಶನ್ ಭೇಟಿಯಾಗಿದ್ದಾರೆ. ಜೊತೆಗೆ ಮತ್ತೋರ್ವ ಮಹಿಳೆಯನ್ನು ದರ್ಶನ್ ಭೇಟಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಆಪ್ತರು ಹಾಗೂ ಚಿತ್ರರಂಗದ ನಟರು ಅಭಿಮಾನಿಗಳ ಭೇಟಿಯನ್ನು ನಿರಾಕರಿಸಿದ ದರ್ಶನ್ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಆಪ್ತ ಸ್ನೇಹಿತೆಯನ್ನು ದರ್ಶನ್ ಜೈಲಿನಲ್ಲಿ ಭೇಟಿಯಾಗಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ರನ್ನು ಪವಿತ್ರಾ ಗೌಡ ಗೆಳತಿ ಸಮತಾ ಭೇಟಿಯಾಗಿದ್ದಾರೆ. ದರ್ಶನ್ ಭೇಟಿ ವಿವರದ ಜೈಲಿನ ಎಂಟ್ರಿ ಪುಸ್ತಕದಲ್ಲಿ ಸಮತಾ ಎಂಬ ಹೆಸರು ಉಲ್ಲೇಖ ಮಾಡಲಾಗಿದೆ.
ಪವಿತ್ರಾ ಹಾಗೂ ಸಮತಾ ಜೀವದ ಗೆಳತಿಯರಾಗಿದ್ದು, ಕುಟುಂಬದವರು ಹೊರತು ಪಡಿಸಿದರೆ ಪವಿತ್ರಾ ಗೌಡ ಆಪ್ತ ವಲಯದಲ್ಲಿ ಸಮತಾ ಮೊದಲಿಗರು ಎನ್ನಲಾಗಿದೆ. ಹೀಗಾಗಿ ಜೈಲಿನಲ್ಲಿ ಸಮತಾ ಜೊತೆ ಮಾತಾಡಲು ದರ್ಶನ್ ಒಪ್ಪಿಗೆ ಸೂಚಿಸಿದ್ದು, ಇಬ್ಬರ ನಡುವೆ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ. ಆದರೆ ಯಾವ ವಿಚಾರದ ಬಗ್ಗೆ ಚರ್ಚೆ ನಡೆದಿದೆ ಎನ್ನುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಇನ್ನು ಜೈಲಿನಲ್ಲಿ ದರ್ಶನ್ ಭೇಟಿ ವೇಳೆ ಸಮತಾ, ಪವಿತ್ರಾ ಗೌಡ ಜಾಮೀನು ಪ್ರಕ್ರಿಯೆ ಬಗ್ಗೆ ಚರ್ಚೆ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ಇತ್ತ ದರ್ಶನ್ ಬಂಧನವಾಗಿ ತಿಂಗಳು ಸಮೀಪಿಸುತ್ತಿದ್ದು, ಈವರೆಗೂ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಕೆ ಮಾಡಿಲ್ಲ. ಇಂದು ವಿಚಾರಣೆ ನಡೆಯಲಿದ್ದು, ಈ ಬಳಿಕ ಜಾಮೀನು ಅರ್ಜಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications