Darshan Case: ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ: 7 ಜೈಲು ಅಧಿಕಾರಿಗಳು ಅಮಾನತು
ಬೆಂಗಳೂರು, ಆಗಸ್ಟ್ 26: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದ್ದು, ಇದಕ್ಕೆ ಸಂಬಂಧಿಸಿದ ಪೋಟೋಗಳು ವೈರಲ್ ಆಗಿವೆ. ಇದರ ಬೆನ್ನಲ್ಲೆ 07 ಜನ ಜೈಲಾಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ವಿಚಾರಣಧೀನ ಖೈಧಿಯಾಗಿ ನಟ ದರ್ಶನ್ ಜೈಲಿನಲ್ಲಿದ್ದಾರೆ. ಈ ವೇಳೆ ಅವರು ಜೈಲಿನ ಬ್ಯಾರೆಕ್‌ನಿಂದ ಹೊರ ಬಂದು ಟಿಪಾಯಿ ಮುಂದೆ ಚೇರ್ ಮೇಲೆ ಕುಳಿತುಕೊಂಡಿದ್ದಾರೆ. ಒಂದು ಕೈಲಿ ಟಿ ಮಗ್ ಮತ್ತೊಂದು ಕೈಲಿ ಸಿಗರೇಟ್ ಇದ್ದು ಜೊತೆಗೆ ವಿಲ್ಸನ್ ಗಾರ್ಡ್‌ನ್ ನಾಗ, ತಮ್ಮ ಮ್ಯಾನೇಜರ್ ನಾಗರಾಜ್ ಮತ್ತಿತರರ ಜೊಎಗೆ ಆರಾಮಾಗಿ ಕೂತ ಫೋಟೋಗಳು ಭಾನುವಾರ ವೈರಲ್ ಆಗಿವೆ.

ಈ ವಿಚಾರ ರಾಜ್ಯಾದ್ಯಂತ ಪೊಲೀಸ್ ಇಲಾಖೆ ಹಾಗೂ ಜೈಲಿನ ಆಡಳಿತ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಜೈಲಾಧಿಕಾರಿಗಳ ದುರಾಡಳಿತವನ್ನು ಎತ್ತಿ ತೋರಿಸಿದೆ. ಸರ್ಕಾರ ಹಾಗೂ ಗೃಃಹ ಸಚಿವರಿಗೆ ಮುಖಭಂಗ ಆಗುವಂತೆ ಮಾಡಿದೆ.
ಫೋಟೋಗಳು ವೈರಲ್ ಆದ ಬೆನ್ನಲ್ಲೆ ಎಚ್ಚೆತ್ತ ಗೃಹ ಸಚಿವ ಜಿ.ಪರಮೇಶ್ವರ ಅವರು ಏಳು ಮಂದಿ ಜೈಲು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶಿಸಿದ್ದಾರೆ. ಶರಣಬಸವ, ಖಂಡೇವಾಲಾ, ಶ್ರೀಕಾಂತ್, ಸಂಪತ್, ಪುಟ್ಟಸ್ವಾಮಿ, ವೆಂಕಪ್ಪ, ವಾರ್ಡರ್ ಬಸಪ್ಪ ಸೇರಿದಂತೆ ಏಳು ಮಂದಿ ಜೈಲು ಅಧಿಕಾರಿಗಳು ಅಮಾನತುಗೊಂಡಿದ್ದಾರೆ. ಇನ್ನೂ ಈ ಕುರಿತು ತನಿಖೆಗೆ ನಡೆಸಲಾಗುತ್ತಿದೆ.
ಗೃಹ ಸಚಿವ ಕೆಂಡಾಮಂಡಲ
ಮುಂದೆ ಜೈಲಿನಲ್ಲಿ ಇಂಥಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು. ಈ ಘಟನೆಯಲ್ಲಿ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ. ಇದೇ ಘಟನೆಯಲ್ಲಿ ಜೈಲಿನ ಹಿರಿಯ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬಂದರೆ ಅವರನ್ನು ಸಹ ಅಮಾನತು ಮಾಡಲಾಗುವುದು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಒಬ್ಬನನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಇತರ ಆರೋಪಿಗಳಿಗೆ ಜೈಲಿನಲ್ಲಿ ಈ ರೀತಿಯ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳ ಬಗ್ಗೆ ಗೃಹ ಸಚಿವರು ಕೆಂಡಾಮಂಡಲವಾಗಿದ್ದಾರೆ. ಘಟನೆ ಕುರಿತು ತನಿಖೆ ನಡೆಸುವಂತೆ ಅವರು ಸೂಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಜೈಲಿಗೆ ಖುದ್ದು ಗೃಹ ಸಚಿವರ ಭೇಟಿ
ಜೈಲಲ್ಲಿರುವ ನಟ ದರ್ಶನ್ ಫೋಟೋಗಳು ವೈರಲ್ ಆಗುತ್ತಿದ್ದಂತೆ ಇಂದು ಅಧಿಕಾರಿಗಳ ಜೊತೆಗೆ ಪರಪ್ಪನ ಅಗ್ರಹಾರಕ್ಕೆ ಖುದ್ದು ಗೃಹ ಸಚಿವರು ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು, ನೆನ್ನೆ ತಡರಾತ್ರಿ 1 ಗಂಟೆವರೆಗೂ ತನಿಖೆ ಕೈಗೊಂಡಿದ್ದಾರೆ. ತನಿಖೆಯ ಪ್ರಾಥಮಿಕ ವರದಿ ಆಧರಿಸಿ ಏಳು ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಪುನರುಚ್ಚರಿಸಿದರು.
ಫೋಟೋಗಳು ಹೇಗೆ ತೆಗೆಯಲಾಗಿದೆ. ವೈರಲ್ ಆಗಿದ್ದೇಗೆ, ರಾಜಾತಿಥ್ಯ ಕೊಡಲಾಗುತ್ತಿದೆಯೆ ಎಂದು ಘಟನೆ ಕುರಿತು ವರದಿ ಕೇಳಿದ್ದೇನೆ. ಪೊಲೀಸ್ ಮಹಾನಿರ್ದೇಶಕರು ಬೆಳಗ್ಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಆರೋಪಿಗಳಿಗೆ ಅವಕಾಶ ಮಾಡಿಕೊಟ್ಟಿರುವುದು ಎಂಬ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದರೆ, ವರದಿ ಆಧರಿಸಿ ತಕ್ಷಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.












Click it and Unblock the Notifications