ನಾ ಆಡಿದ್ದೇ ಆಟ.. ಸರಿ ತಪ್ಪು ಹೇಳುವವರು ಇಲ್ಲ.. ಅಭಿಮಾನಿಗಳಿಗೆ ತಂದೆಯ ಸ್ಥಾನ
ನಟ ದರ್ಶನ್ ಅವರ ನಟನೆಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಅಭಿಮಾನಿಗಳ ಅಭಿಮಾನ ಕಂಡು ಹಲವು ನಟರು ಹೊಟ್ಟೆ ಕಿಚ್ಚು ಪಟ್ಟುಕೊಂಡಿದ್ದು ಉಂಟು.. ದರ್ಶನ್ ಈ ಎತ್ತರಕ್ಕೆ ಬೆಳೆಯುವಲ್ಲಿ ಫ್ಯಾನ್ಸ್ ಪಾತ್ರ ದೊಡ್ಡದು. ಹೀಗಾಗಿ ದರ್ಶನ್ ತನ್ನ ಅಭಿಮಾನಿಗಳಿಗೆ ಜೀವನದಲ್ಲಿ ದೊಡ್ಡ ಪಾತ್ರವನ್ನು ನೀಡಿದ್ದಾರೆ. ಅಷ್ಟೇ ಏಕೆ ಅಭಿಮಾನಿಗಳೇ ಬಾಸ್ ಎಂದು ಅಚ್ಚೆ ಸಹ ಹಾಕಿಸಿಕೊಂಡಿದ್ದಾರೆ.
ದರ್ಶನ್ ಒಂದು ಪಿಚ್ಚರ್ ರಿಲೀಸ್ ಆದಾಗಲೂ ಅಭಿಮಾನಿಗಳು ಸೆಲೆಬ್ರೇಷನ್ ನೋಡಬೇಕು, ತಾವೇ ಆ ಚಿತ್ರದಲ್ಲಿ ನಟಿಸಿರುವ ರೀತಿ ಖುಷಿ ಪಡುತ್ತಾರೆ. ಬೆಳ್ಳಿ ತೆರೆಯ ಮೇಲೆ ದರ್ಶನ್ ನೈಜ ಅಭಿನಯಕ್ಕೆ, ಅಭಿಮಾನಿಗಳು ಅಭಿಮಾನದ ಆರತಿಯನ್ನು ಮಾಡಿದ್ದಾರೆ. ಹಾಗಿದ್ದರೆ ಅಭಿಮಾನಿಗಳನ್ನು ದರ್ಶನ್ ಎಷ್ಟು ಗೌರವಿಸುತ್ತಾರೆ ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.

ಸಖತ್ ವೈರಲ್ ವಿಡಿಯೋ
ದರ್ಶನ್ ಸದಾ ಫ್ಯಾನ್ ಬೇಸ್ ಆಕ್ಟರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಭಿಮಾನಿಗಳಿಗೆ ಹಿಡಿಸುವ ಕ್ಯಾರೆಕ್ಟರ್ ಮಾಡಿ ಸೈ ಎನಿಸಿಕೊಂಡವರು. ಸಿಕ್ಕ ಅವಕಾಶ, ದೊಡ್ಡ ವೇದಿಕೆಗಳಲ್ಲಿ ಎಲ್ಲ ದರ್ಶನ್ ಫ್ಯಾನ್ಸ್ ನಮ್ಮ ಬಾಸ್ ಎಂದೇ ಹೇಳಿದ್ದಾರೆ. ಅಭಿಮಾನಿಗಳ ಯಜಮಾನನಿಗೆ ಇಷ್ಟೊಂದು ಪ್ರೀತಿ ಹುಟ್ಟಲು ಇನ್ನು ಒಂದು ಕಾರಣ ಇದೆ.
ತಿದ್ದುವವರು ಯಾರು ಇಲ್ಲ
ದರ್ಶನ್ ಅವರ ಹಳೆಯ ಸಂದರ್ಶನ ಒಂದು ಈಗ ಸಖತ್ ವೈರಲ್ ಆಗುತ್ತಿದೆ. ಮುದ್ದು ಮುದ್ದಾದ ಮುಖದ ಯುವಕನ ಮಾತು, ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸಂದರ್ಶನದಲ್ಲಿ ದರ್ಶನ್ ತಂದೆ ಇಲ್ಲದ ನೋವನ್ನು ತೋಡಿಕೊಂಡಿದ್ದಾರೆ. ಅಲ್ಲದೆ ತನ್ನ ತಂದೆ ಇದ್ದಿದ್ದರೆ ತನ್ನನ್ನು ಕೈ ಹಿಡಿದು ನಡೆಸುತ್ತಿದ್ದರು. ಆದರೆ ಈಗ ಅವರು ಇಲ್ಲ. ನಾನು ಆಡಿದ್ದೇ ಆಟ ಆಗಿ ಬಿಟ್ಟಿದೆ. ಚಿತ್ರರಂಗವನ್ನು ಹತ್ತಿರದಿಂದ ಅವರು ನೋಡಿದ್ದರಿಂದ, ತಪ್ಪು ಒಪ್ಪುಗಳ ಬಗ್ಗೆಯೂ ನನಗೆ ಸಲಹೇ ನೀಡ್ತಾ ಇದ್ದರು. ಆದರೆ, ಈಗ ನನ್ನ ತಪ್ಪುಗಳನ್ನು ತೋರಿಸುವವರು ಯಾರು ಇಲ್ಲ.

ನನ್ನ ಅಭಿಮಾನಿಗಳು ನನ್ನನ್ನು ತಿದ್ದುವ ಕೆಲಸ ಮಾಡುತ್ತಾ ಇದ್ದಾರೆ. ನಾನು ಮಾಡಿದ ತಪ್ಪುಗಳನ್ನು ನನ್ನ ಅಭಿಮಾನಿಗಳು ತಿದ್ದುವ ಕೆಲಸ ಮಾಡುತ್ತಾ ಇದ್ದಾರೆ. ಈಗಲೂ ಈ ಸಂದರ್ಶನ ಮುಗಿದ ಬಳಿಕ, ಅಣ್ಣಾ ನೀವು ಹೀಗೆ ಮಾತನಾಡಬೇಕಿತ್ತು ಎಂದು ಹೇಳುತ್ತಾರೆ. ಇವರು ನೀಡುವ ಸಲಹೆಗಳಿಂದ ನಾನು ತಿದ್ದಿಕೊಳ್ಳುತ್ತೇನೆ' ಎಂದು ನಟ ದರ್ಶನ್ ತಿಳಿಸಿದ್ದರು.
ಫ್ಯಾನ್ಸ್ ಏನ್ ಮಾಡಬೇಕಿತ್ತು?
ಆದರೆ ಈಗ ಕಾಲ ಬದಲಾಗಿದೆ. ದರ್ಶನ್ ಫ್ಯಾನ್ಸ್ ಅವರಿಗೆ ತಪ್ಪು ಒಪ್ಪಿನ ಬಗ್ಗೆ ಕಿವಿ ಮಾತು ಹೇಳುವುದನ್ನು ಮಾಡುತ್ತಿಲ್ಲ. ಅವರು ಮಾಡಿದ್ದೇ ಸರಿ ಎಂದು ಮಂಡುವಾದ ಮಂಡಿಸುತ್ತಿದ್ದಾರೆ. ಅಷ್ಟೇ ಏಕೆ ಪೊಲೀಸ್ ಠಾಣೆಯ ಎದುರು ತಮ್ಮ ನೆಚ್ಚಿನ ನಟನ ಪರವಾಗಿ ಧ್ವನಿ ಎತ್ತಿರುವುದನ್ನು ಸಹ ನೋಡಿದ್ದೇವೆ. ಇದನ್ನೆಲ್ಲಾ ನೋಡಿದ ಮೇಲೆ ಫ್ಯಾನ್ಸ್ ಎಡವಿದ್ದು ಎಲ್ಲಿ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ದರ್ಶನ್ ದಶಕದ ಹಿಂದೆ ಪತ್ನಿಯ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋಗಿ ಬಂದಿದ್ದರು. ಅಲ್ಲದೆ ಹಲವು ಬಾರಿ ಬೇರೆಯವರ ಜೊತೆ ಕಿರಿಕಿರಿ ಸಹ ಮಾಡಿಕೊಂಡಿದ್ದರು. ಈ ಎಲ್ಲ ಪ್ರಕರಣಗಳಲ್ಲಿ ಫ್ಯಾನ್ಸ್ ಮುಂದೆ ಬಂದು ಬಾಸ್ ನೀವು ಮಾಡಿದ್ದು ತಪ್ಪು ಎಂದು ಹೇಳಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ. ಹೀಗಾಗಿ ದರ್ಶನ್ ಈಗ ತಾನು ಮಾಡಿದ್ದೇ ಆಟ ಎನ್ನುವ ಹಾಗೆ ಆಗಿ ಈ ಪರಿಸ್ಥಿತಿಗೆ ಬಂದು ನಿಂತಿದೆ.












Click it and Unblock the Notifications