• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆ ಪಾಪಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆಯಾಗಲಿ, ನನ್ನಂತೆ ಅವನು ನರಳಲಿ: ಸಂತ್ರಸ್ತೆ ಆಕ್ರೋಶ

|
Google Oneindia Kannada News

ಬೆಂಗಳೂರು: ಪ್ರೀತಿಸಲು ಒಪ್ಪದ ಯುವತಿಯ ಮುಖಕ್ಕೆ ಆಸಿಡ್​ ಎರಚಿ ಪರಾರಾಗಿಯಾಗಿದ್ದ ನಾಗೇಶ್‌ ಶುಕ್ರವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವಿಷಯವನ್ನು ತಿಳಿಯುತ್ತಿದ್ದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ಅವನು ಅರೆಸ್ಟ್‌ ಆಗಿದ್ದಾನಲ್ವಾ? ಅವನಿಗೆ ನನ್ನ ಕಣ್ಣ ಮುಂದೆಯೇ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಯುವತಿ ಮೇಲೆ ಆಸಿಡ್ ದಾಳಿ ಮಾಡಿ ಮಾಡಿದ ಆರೋಪಿ ನಾಗನ ಟ್ರಾವೆಲ್ ಹಿಸ್ಟರಿಯುವತಿ ಮೇಲೆ ಆಸಿಡ್ ದಾಳಿ ಮಾಡಿ ಮಾಡಿದ ಆರೋಪಿ ನಾಗನ ಟ್ರಾವೆಲ್ ಹಿಸ್ಟರಿ

ನಾಗೇಶ್‌ ಏಪ್ರಿಲ್ 28ರಂದು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಂಕದ ಕಟ್ಟೆಯ ಮುತ್ತೂಟ್ ಫೈನಾನ್ಸ್ ಬಳಿ ಯುವತಿಗೆ ಆಸಿಡ್​ ಹಾಕಿ ಪರಾಗಿಯಾಗಿದೆ. 16 ದಿನಗಳ ಕಾಲ ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿದ್ದ ಖತರ್ನಾಕ್‌ ಕೊನೆಗೂ ತಮಿಳುನಾಡಿನಲ್ಲಿ ಶುಕ್ರವಾರ ಸ್ವಾಮೀಜಿ ವೇಶದಲ್ಲಿ ಸಿಕ್ಕಿಬಿದ್ದಿದ್ದ. ಬೆಂಗಳೂರಿಗೆ ಕರೆತರುವ ದಾರಿಯಲ್ಲಿ ಮತ್ತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ನನ್ನ ಕಣ್ಮುಂದೆ ಶಿಕ್ಷೆಯಾಗಬೇಕು
ನಾಗೇಶ್‌ನನ್ನು ಬಂಧಿಸಿರುವ ವಿಷಯವನ್ನು ತಿಳಿದ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಯುವತಿ, ಆರ ಕಿರಾತಕನಿಗೆ ಶಿಕ್ಷೆಯಾಗಬೇಕು, ನಾನು ನರಳುತ್ತಿರುವಂತೆ ಆತನು ಚಿತ್ರಹಿಂಸೆಯಿಂದ ನರಳಾಡುವಂತಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾಳೆ. ತನ್ನ ಆರೋಗ್ಯ ವಿಚಾರಿಸಲು ಬಂದಿದ್ದ ಪೊಲೀಸ್ ಕಮಿಷನರ್‌ ಕಮಲ್ ಪಂತ್ ಎದುರು ಕೂಡ ಸರ್ ಅವಿನಿಗೆ ನನ್ನ ಕಣ್ಮುಂದೆಯೇ ಶಿಕ್ಷೆ ಆಗಬೇಕು ಎಂದ ಮನವಿ ಮಾಡಿಕೊಂಡಿದ್ದಾಳೆ ಎಂದು ಕುಟುಂಬಸ್ಥರು ಮಾಧ್ಯಮಕ್ಕೆ ತಿಳಿಸಿದ್ದಾರೆ

Acid Attack Victim Demands Punishment For Accused Nagesh

ಮಹಿಷಾಸುರನ ಕೊಂದ ರೀತಿ ಕೊಲ್ಲಬೇಕು
ತಮ್ಮ ಮಗಳು ಆಸ್ಪತ್ರೆಯಲ್ಲಿ ನರಳುತ್ತಿರುವುದನ್ನು ನೋಡಿ ಮನನೊಂದಿರುವ ಪೋಷಕರು ನಾಗೇಶ ನರಳಿ ನರಳಿ ಸಾಯುವಂತ ಶಿಕ್ಷೆಯನ್ನು ನೀಡಬೇಕು ಎಂದು ಶಪಿಸಿದ್ದಾರೆ. ಯುವತಿಯ ದೊಡ್ಡಮ್ಮ ಮಾತನಾಡಿ " ಚಾಮುಂಡಿ ಮಹಿಷಾಸುರನ ಕೊಂದ ಹಾಗೆ ಆ್ಯಸಿಡ್ ನಾಗನನ್ನ ಕೊಲ್ಲಬೇಕು. ಆ ಪಾಪಿಯನ್ನು ಒಂದೇ ಸಲ ಸಾಯಿಸಬೇಡಿ. ನಮ್ಮ ಮಗಳ ನೋವು ಅವನಿಗೂ ಗೊತ್ತಾಗಬೇಕು. ಅವನಿಗೆ ಕ್ರೂರ ಶಿಕ್ಷೆ ನೀಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

   ನನ್ನ ಟಚ್ ಮಾಡಿದಕ್ಕೆ ಡಿಕೆಶಿಗೆ ಶೇಪ್ ಔಟ್: ರಮ್ಯಾvs ಡಿಕೆಶಿ ಬಗ್ಗೆ ಅಶ್ವತ್ಥ್ ನಾರಾಯಣ್ ಮಾತು | Oneindia Kannada

   ನಾಗನನ್ನು ಬಂದಿಸಿದ ಪೊಲೀಸರಿಗೆ 5 ಲಕ್ಷ ಬಹುಮಾನ
   ಯುವತಿಯ ಆಸಿಡ್ ಎರಚಿ ಪರಾರಿಯಾಗಿದ್ದ ನಾಗೇಶ್‌ ಒಂದೂ ಸಾಕ್ಷಿ ಬಿಟ್ಟುಕೊಡದೇ 16 ದಿನಗಳ ಕಾಲ ಪೊಲೀಸರನ್ನು ಸತಾಯಿಸಿದ್ದ. ಈತನ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟೀಸ್‌ ಜಾರಿ ಮಾಡಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಆರೋಪಿ ರಮಣರ್ ಆಶ್ರಮದಲ್ಲಿ ಇರುವುದಾಗಿ ಮಾಹಿತಿ ನೀಡಿದ ಮೇಲೆ ಪೊಲೀಸರು ಮಾರುವೇಷದಲ್ಲಿ ಹೋಗಿ ಧ್ಯಾನಕ್ಕೆ ಕುಳಿದಿದ್ದ ನಾಗನನ್ನು ಬಂಧಿಸಿದ್ದರು. ಪೊಲೀಸರ ಕಾರ್ಯಕ್ಷಮತೆಯನ್ನು ಮೆಚ್ಚಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ತಂಡಗಳಿಗೆ ಒಟ್ಟು 5 ಲಕ್ಷ ರೂ.ಗಳನ್ನು ಬಹುಮಾನ ನೀಡುವುದಾಗಿ ಕಮಲ್ ಪಂತ್ ತಿಳಿಸಿದ್ದಾರೆ.

   English summary
   Acid Attack Victim and her parents urge to police department to punish to Nagesh in front of them. they want to see the accused suffering from punishment.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X