ಯುವಕನ ಮೇಲೆ ಸ್ನೇಹಿತನಿಂದಲೇ ಮೇಲೆ ಆಸಿಡ್ ದಾಳಿ
ಬೆಂಗಳೂರು, ಮೇ31: ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ಅಟ್ಯಾಕ್ ನಡೆದಿದೆ. ಇಬ್ಬರು ಸ್ನೇಹಿತನ ನಡುವೆ ನಡೆದ ಜಗಳದಲ್ಲಿ ಆಸಿಟ್ ಆಟ್ಯಾಕ್ ನಡೆದಿರುವ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬನ್ ಪೇಟೆಯಲ್ಲಿ ನಡೆದಿದೆ. ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳದಲ್ಲಿ ಡೈಲೂಟೆಡ್ ಸಲ್ಫರಿಕ್ ಆ್ಯಸಿಡ್ ಎರಚಿ ವಿಕೃತಿಯನ್ನು ಮೆರೆಯಲಾಗಿದೆ.
ಸ್ನೇಹಿತನ ಮೇಲೆಯೇ ಆಸಿಡ್ ಪಶ್ಚಿಮ ಬಂಗಾಳ ಮೂಲದ ಜನತಾ ಅದಕ್ ಎಂಬಾತ ಆಸಿಡ್ ದಾಳಿಯನ್ನು ಮಾಡಿದ್ದಾನೆ. ಆಸಿಡ್ ದಾಳಿಗೆ ಒಳಗಾದ ಯುವಕನನ್ನು ವಿಕ್ಟೋರಿಯ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಾಳು ಯುವಕನಿಗೆ ಮುಖ, ಎದೆಗೆ, ಶೇಕಡಾ 30ರಷ್ಟು ಗಾಯವಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.
ಹಲಸೂರು ಗೇಟ್ ಪೊಲೀಸರು ಈಗಾಗಲೇ ಮೈಸೂರು ಬಳಿಯಲ್ಲಿ ಆರೋಪಿ ಜನತಾ ಅದಕ್‌ನನ್ನು ಬಂಧಿಸಲಾಗಿದೆ. ಮೇ 29 ಭಾನುವಾರದಂದು ಸ್ನೇಹಿತನ ಜೊತೆಯಲ್ಲಿ ಕಿರಿಕ್ ಮಾಡಿದ್ದ ಜನತಾ ಅದಕ್. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಡೈಲೂಟೇಡ್ ಸಲ್ಫರಿಕ್ ಆಸಿಡ್ ಅನ್ನು ಎರಚಿ ತಪ್ಪಿಸಿಕೊಳ್ಳಲು ಪ್ರಯತ್ನವನ್ನು ಪಟ್ಟಿದ್ದ. ಆಸಿಡ್ ದಾಳಿಯ ಪ್ರಕರಣವನ್ನು ದಾಖಲಿಸಿಕೊಂಡ ಹಲಸೂರು ಗೇಟ್ ಪೊಲೀಸರು ತಕ್ಷಣಕ್ಕೆ ಕಾರ್ಯಪ್ರವೃತ್ತರಾಗಿ ಆರೋಪಿ ಜನತಾ ಅದಕ್‌ನನ್ನು ಬಂಧಿಸಿದ್ದಾರೆ.

ಡೈಲೂಟೇಡ್ ಸಲ್ಫರಿಕ್ ಆಸಿಡ್ ದಾಳಿ
ಕಬ್ಬನ್ ಪೇಟೆಯಲ್ಲಿ ಕೆಲಸ ಮಾಡುತ್ತಿದ್ದ ಜನತಾ ಅದಕ್ ಮತ್ತು ಗಾಯಾಳು ಸತ್ರ ಕುಡಿದ ಅಮಲಿನಲ್ಲಿ ಗಲಾಟೆಯನ್ನು ಮಾಡಿಕೊಂಡಿದ್ದಾರೆ. ಈ ವೇಳೆ ಮನೆಯಲ್ಲಿ ಕ್ಲೀನಿಂಗ್‌ಗೆ ಬಳಕೆ ಮಾಡುತ್ತಿದ್ದ ಡೈಲೂಟೇಡ್ ಸಲ್ಫರಿಕ್ ಆಸಿಡ್ ಅನ್ನು ಎರಚಲಾಗಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಗಾಯಾಳು ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಪ್ರಾಣಪಾಯದಿಂದ ಪಾರಾಗಿದ್ದಾನೆ ಎಂದು ಕೇಂದ್ರ ವಿಭಾಗ ಪ್ರಭಾರ ಡಿಸಿಪಿ ಶರಣಪ್ಪ ಸ್ಪಷ್ಪಪಡಿಸಿದ್ದಾರೆ.

ಏಪ್ರಿಲ್ 28 ಕಾಮಾಕ್ಷಿಪಾಳ್ಯದಲ್ಲಿ ನಾಗೇಶ್‌ನಿಂದ ಯುವತಿಗೆ ಆಸಿಡ್
ಏಪ್ರಿಲ್ 28 ಕಾಮಾಕ್ಷಿಪಾಳ್ಯದಲ್ಲಿ ನಾಗೇಶ್ ಎಂಬಾತ ಪ್ರೀತಿಸಲು ನಿರಾಕರಿಸಿದ ಯುವತಿಯ ಮೇಲೆ ಆಸಿಡ್ ದಾಳಿಯನ್ನು ನಡೆಸಿದ್ದ. ಆಸಿಡ್ ದಾಳಿಗೆ ಒಳಗಾದ ಯುವತಿ ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ. ಆದರೆ ಆಸಿಡ್ ದಾಳಿ ಮಾಡಿದ ಆರೋಪಿ 16 ದಿನಗಳು ಕಣ್ಮರೆಯಾಗಿದ್ದು. ತಮಿಳು ನಾಡಿನ ತಿರುವನಂತ ಪುರಂನ ಆಶ್ರಮದಲ್ಲಿ ಪತ್ತೆಯಾಗಿದ್ದ. ಆತನನ್ನು ಬಂಧಿಸಿ ಕರೆತರುವ ವೇಳೆ ಮೂತ್ರವಿಸರ್ಜನೆಗೆ ಇಳಿದವ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಪೊಲೀಸರು ನಾಗೇಶ್ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಆಸಿಡ್ ದಾಳಿಯಾಗಿರೋದು ಸಿಲಿಕಾನ್ ಸಿಟಿ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ಬೆಂಗಳೂರಿನಲ್ಲಿ ನಾಲ್ಕನೇ ಕೇಸ್
ಇನ್ನು ಕರ್ನಾಟಕದಲ್ಲಿ ಆಸಿಡ್ ದಾಳಿ ಪ್ರಕರಣಗಳು ಕಣ್ಣ ಮುಂದಿದೆ. ರಾಜ್ಯದಲ್ಲಿ ಆಸಿಡ್ ದಾಳಿಗಳ ಅಂಕಿ ಸಂಖ್ಯೆಗಳಿವೆ.
*1999 ರಿಂದ 2004 ರ ವರೆಗೆ - 35 ಆಸಿಡ್ ದಾಳಿ ಪ್ರಕರಣಗಳು
*2007 ಫೆಬ್ರವರಿ - 8 ಪ್ರಕರಣಗಳನ್ನು
*2010 ರಿಂದ 2015 ರಲ್ಲಿ - 20 ಪ್ರಕರಣಗಳು ವರದಿಯಾಗಿದೆ
*ಬೆಂಗಳೂರಿನಲ್ಲಿ ಇಂದಿನ ಪ್ರಕರಣವೂ ಸೇರಿದಂತೆ 4 ಆಸಿಡ್ ದಾಳಿ ಪ್ರಕರಣಗಳು ದಾಖಲಾಗಿದೆ.
ಆಸಿಡ್ ಅನ್ನು ಬೇರೆ ಬೇರೆ ಕೆಲಸಕ್ಕೆ ಬಳಕೆ ಮಾಡುತ್ತಾರೆ. ಆಸಿಡ್ ನ ಪ್ರಭಾವ ಎಂಥದ್ದು ಎಂಬುದು ತಿಳಿದಿದ್ದು ಕೆಲವು ದುಷ್ಕರ್ಮಿಗಳು ಮನುಷ್ಯರ ಮೇಲೆ ದಾಳಿ ನಡೆಸೋಕೆ ಆಸಿಡ್ ಬಳಕೆ ಮಾಡುತ್ತಿರೋದು ಶೋಚನೀಯ ಸಂಗತಿಯಾಗಿದೆ.

ಆಸಿಡ್ ಖರೀದಿಯ ಸಕಾರಣವೂ ಅಗತ್ಯ
ಆಸಿಡ್ ಅನ್ನು ಖರೀದಿಸಲು ಸಾಕಷ್ಟು ಕಠಿಣ ನಿಯಮಗಳು ರಾಜ್ಯದಲ್ಲಿ ಇಲ್ಲ. ಕೆಲವು ಕ್ಲೀಂನಿಂಗ್ ಕೆಲಸಗಳಿಗೆ ಕಡಿಮೆ ಸಾಮರ್ಥ್ಯ ಆಸಿಡ್ ಗಳನ್ನು ಕೊಡಲಾಗುತ್ತದೆ. ಆಸಿಡ್ ಖರೀದಿಸುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕು ಆದರೆ ಕಾನೂನಾತ್ಮಕವಾಗಿ ನಿಯಮಗಳನ್ನು ಅನುಸರಿಸದೇ ಉಲ್ಲಂಘನೆ ಮಾಡಲಾಗುತ್ತದೆ. ಆಸಿಡ್ ಖರೀದಿಸುವಾಗ ಸಕಾರಣದೊಂದಿಕೆ ಕಂಪನಿಯ ಲೆಟರ್ ಹೆಡ್‌ನಲ್ಲಿ ಎಷ್ಟು ಪ್ರಮಾಣದ ಆಸಿಡ್ ಬೇಕು ಎಂಬದುನ್ನು ಉಲ್ಲೇಖಿಸಬೇಕು. ಆದರೆ ಎಲ್ಲ ಕಾನೂನು ಉಲ್ಲಂಘನೆಯಾಗುತ್ತಿರೋದು ಆಸಿಡ್ ದಾಳಿಗೆ ಅನುವು ಮಾಡಿಕೊಡುತ್ತಿದೆ.
Recommended Video
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications