Breaking: ಸ್ವಾಮೀಜಿ ವೇಷತೊಟ್ಟಿದ್ದ ಆಸಿಡ್ ಪ್ರಕರಣದ ಆರೋಪಿ ನಾಗೇಶ್ ಬಂಧನ
ಬೆಂಗಳೂರು, ಮೇ13: ಬೆಂಗಳೂರಿನಲ್ಲಿ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿ ಅಡಗಿ ಕುಳಿತಿದ್ದ ಆರೋಪಿ ನಾಗೇಶ್ ನನ್ನು ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಾಮೀಜಿಯ ವೇಷವನ್ನು ತೊಟ್ಟಿದ್ದ ನಾಗೇಶ್ ಬಾಬು ಅಲಿಯಾಸ್ ನಾಗೇಶ್ ಏಪ್ರಿಲ್ 28 ಕಾಮಾಕ್ಷಿ ಪಾಳ್ಯದಲ್ಲಿ ಮುತ್ತೂಟ್ ಫಿನ್ ಕಾರ್ಪ್ ಬಳಿ ಆಸಿಡ್ ಎರಚಿ ಪರಾರಿಯಾಗಿದ್ದ. ಪರಾರಿಯಾಗಿದ್ದ ನಾಗೇಶ್ ನನ್ನು ಹುಡುಕುವ ಸಲುವಾಗಿ ಪೊಲೀಸರ ನಿರಂತರವಾದ ಕಾರ್ಯಾಚರಣೆಯನ್ನು ಮಾಡುತ್ತಿದ್ದರು. ಮೊಬೈಲ್ ಎಟಿಎಂ ಏನನ್ನು ಬಳಸದ ನಾಗೇಶ್ ನನ್ನು ಪತ್ತೆಹಚ್ಚೋದು ಪೊಲೀಸರಿಗೆ ತುಂಬ ಕಷ್ಟವಾಗಿತ್ತು. ಆತನನ್ನು ಹೋಲುವ ವ್ಯಕ್ತಿ ತಿರುವಣ್ಣಾಮಲೈನಲ್ಲಿರುವ ಬಗ್ಗೆ ಕಾಮಾಕ್ಷಿಪಾಳ್ಯದ ಪೊಲೀಸರಿಗೆ ಲಭ್ಯವಾಗಿತ್ತು.

ತಿರುವಣ್ಣಾಮಲೈಗೆ ತೆರಳಿದ ಪೊಲೀರಿಗೆ ಸ್ವಾಮೀಜಿಯ ಪೋಷಕು ತೊಟ್ಟ ನಾಗೇಶ್ ಅಲಿಯಾಸ್ ನಾಗೇಶ್ ಬಾಬು ಅಲಿಯಾಸ್ ಆಸಿಡ್ ನಾಗ ಪತ್ತೆಯಾಗಿದ್ದಾನೆ. ತಕ್ಷಣವೇ ಆಸಿಡ್ ನಾಗನನ್ನು ಬಂಧಿಸಿದ ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ.