ದೈವಾರಾಧನೆಗೆ ಅವಮಾನ ಮಾಡಿದ ಆರೋಪ: ತೇಜಸ್ವಿ ಸೂರ್ಯ ವಿರುದ್ಧ ಆಕ್ರೋಶ
ಬೆಂಗಳೂರು ಡಿಸೆಂಬರ್ 5: ಕಾಂತಾರಾ ಸಿನಿಮಾ ಹಿಟ್ ಆದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೈವಾರಾಧನೆಯ ಬಗ್ಗೆ ಜನರಲ್ಲಿ ಕುತೂಹಲ ಹೆಚ್ಚಾಗುತ್ತಿದೆ. ಈ ನಡುವೆ ಶೂ ಹಾಕಿಕೊಂಡು ಸಂಸದ ತೇಜಸ್ವಿ ಸೂರ್ಯ ದೈವಕ್ಕೆ ಅವಮಾನ ಮಾಡಿದ್ದಾರೆ ಎಂದು ಆರೋಪಗಳು ಕೇಳಿ ಬಂದಿವೆ.
Bengaluru Traffic : ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಮ್ಮಿಯಾಗುತ್ತಿರುವುದು ಹೇಗೆ? ಇಲ್ಲಿದೆ ವಿಸ್ತೃತ ವರದಿ
ಕಳೆದ ದಿನ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೋತ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವಾರಾಧನೆ ಮಾಡಲಾಗುತ್ತಿತ್ತು. ಈ ವೇಳೆ ಸಂಸದ ತೇಜಸ್ವಿ ಸೂರ್ಯ ಶೂ ಹಾಕಿಕೊಂಡೇ ವೇದಿಕೆ ಮೇಲೆ ತೆರಳಿದ್ದಾರೆ. ಮಾತ್ರವಲ್ಲದೆ ಶೂ ಧರಿಸಿಯೇ ದೈವದ ದೀವಟಿಕೆ ಹಿಡಿದು ಫೋಟೋ ಫೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ತೇಜಸ್ವಿ ಸೂರ್ಯ ದೈವಾರಾಧನೆಗೆ ಅವಮಾನ ಮಾಡಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಇದರಿಂದಾಗಿ ಸಂಸದರು ಫೋಟೋವನ್ನು ಸಾಮಾಜಿಕ ಜಾಲತಾಣದಿಂದ ಡಿಲಿಟ್ ಕೂಡ ಮಾಡಿದ್ದಾರೆ.
ಕಾಂತಾರ ಚಿತ್ರದ ಮೂಲಕ ತುಳುನಾಡಿನ ಹೆಮ್ಮೆಯ ಆಚರಣೆ ಭೂತ ಕೋಲ ಇದೀಗ ಜಗತ್ ಪ್ರಸಿದ್ಧಿಯಾಗಿದೆ. ದೇಶ ಮಾತ್ರವಲ್ಲದೇ ವಿದೇಶಗಳಲ್ಲೂ ಕಾಂತಾರ ಚಿತ್ರ ವೀಕ್ಷಿಸಿದ ವಿದೇಶಿಗರು ಭೂತ ಕೋಲ ಆಚರಣೆಯ ಕುರಿತ ಮಾತುಗಳನ್ನಾಡುತ್ತಿದ್ದಾರೆ. ಭೂತ ಕೋಲ ಆಚರಣೆಗೆ ಶತಮಾನಗಳ ಇತಿಹಾಸ ಇದ್ದು ಅದರ ಆಚರಣೆಯ ಬಗ್ಗೆ ಕುತೂಹಲಗಳು ಹೆಚ್ಚಾಗಿವೆ.
ಕರ್ನಾಟಕದ ಕರಾವಳಿ ಭಾಗಗಳಲ್ಲಿ ಭೂತ ಕೋಲ ಆಚರಣೆಗೆ ವಿಶೇಷ ಮಹತ್ವವಿದ್ದು ಪೂಜಾ ಭಾವನೆಯಿಂದ, ಭಕ್ತಿಯಿಂದ ಗೌರವಿಸಲಾಗುತ್ತದೆ. ಮಾತ್ರವಲ್ಲದೆ ಹಳ್ಳಿಗರು ಮತ್ತು ಅವರ ಪೂರ್ವಜರು ಕೆಲವು ದೇವರುಗಳು ತಮ್ಮ ಭೂಮಿಯನ್ನು ರಕ್ಷಿಸುತ್ತಾರೆ ಮತ್ತು ಇಂದಿಗೂ ತಮ್ಮ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ ಎಂದು ನಂಬುತ್ತಾರೆ. ದೇವರುಗಳು ಈ ಗ್ರಾಮಗಳನ್ನು ಸಮಸ್ಯೆಗಳಿಂದ ಮತ್ತು ಕುಖ್ಯಾತ ದುಷ್ಟ ಘಟನೆಗಳಿಂದ ರಕ್ಷಿಸುವುದರಿಂದ, ಗ್ರಾಮಸ್ಥರು ಕೋಲಗಳಂತಹ ಹಬ್ಬಗಳಲ್ಲಿ ಒಟ್ಟಾಗಿ ಪ್ರಾರ್ಥಿಸುತ್ತಾರೆ ಮತ್ತು ಈ ದೇವತೆಗಳ ಆಶೀರ್ವಾದ, ಅನುಗ್ರಹ ಮತ್ತು ಸಮೃದ್ಧಿಯನ್ನು ಬಯಸುತ್ತಾರೆ.
ಹೀಗಿರುವಾಗ ತೇಜಸ್ವಿ ಸೂರ್ಯ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಿದ್ದಾರೆನ್ನುವ ಆರೋಪಗಳು ಕೇಳಿ ಬಂದಿವೆ.