• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೊಹಮ್ಮದ್ ನಲಪಾಡ್‌ಗೆ ಜಾಮೀನು ಸಿಗುತ್ತಾ, ಇಲ್ವಾ?

By Manjunatha
|
   ಮೊಹಮ್ಮದ್ ಹ್ಯಾರಿಸ್ ನಲಪಾಡ್ ಹಲ್ಲೆ ಪ್ರಕರಣ : ಜೈಲಾ ಬೇಲಾ? | Oneindia kannada

   ಬೆಂಗಳೂರು, ಫೆಬ್ರವರಿ 21: ವಿದ್ವತ್‌ ಎಂಬ ಯುವಕನ ಮೇಲೆ ಯುಬಿ ಸಿಟಿ ಬಳಿ ಹಲ್ಲೆ ಮಾಡಿ ಈಗ ಪೊಲೀಸರ ವಶದಲ್ಲಿರುವ ಮೊಹಮ್ಮದ್ ನಲಪಾದ್ ಹ್ಯಾರಿಸ್‌ನನ್ನು ಇಂದು ಸೆಷನ್ಸ್‌ ಕೋರ್ಟ್‌ಗೆ ಹಾಜರು ಪಡಿಸುತ್ತಿದ್ದು ಆತನಿಗೆ ಜಾಮೀನು ಸಿಗುತ್ತದೆಯೊ ಇಲ್ಲವೊ ಎಂಬುದು ಚರ್ಚೆಯ ವಿಷಯವಾಗಿದೆ.

   ಪೊಲೀಸರು ಮೊಹಮ್ಮದ್ ನಲಪಾಡ್ ಹಾಗೂ ಆತನ ಸಹಚರರ ಮೇಲೆ 307(ಕೊಲೆ ಯತ್ನ) ಸೇರಿದಂತೆ ಹಲವು ಕೇಸುಗಳನ್ನು ದಾಖಲಿಸಿದ್ದು ಆತ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.

   ಯುಬಿಸಿಟಿಯಲ್ಲಿ ನಡೆದದ್ದು ಪಕ್ಷಾತೀತ ರಂಗೀನ್ ಪಾರ್ಟಿ, ಆದ್ರೆ ಈಗ?

   ಮೊಹಮ್ಮದ್ ಪರ ವಕೀಲರು ಹೇಳುವ ಪ್ರಕಾರ 'ಪೊಲೀಸರು ರಾಜಕೀಯ ಪ್ರೇರಿತವಾಗಿ 307 ಕೇಸು ದಾಖಲಿಸಿದ್ದಾರೆ, ಇದು ಉದ್ದೇಶಪೂರ್ವಕವಾದ ಕಾರಣ 307 ಕೇಸು ದಾಖಲಿಸಲು ತಡ ಮಾಡಿದ್ದಾರೆ ಹಾಗಾಗಿ ಜಾಮೀನು ದೊರಕುವ ವಿಶ್ವಾಸ ಇದೆ' ಎಂದಿದ್ದಾರೆ.

   ಹ್ಯಾರಿಸ್ ಪುತ್ರನ ವಿರುದ್ಧ ಆರೋಪ: ವೈರಲ್ ಆಯ್ತು ಈ ವಿಡಿಯೋ

   ಆದರೆ 307 ಕೇಸು ತಡವಾಗಿ ದಾಖಲಿಸಿದ್ದರೂ ವಿದ್ವತ್‌ಗೆ ಆಗಿರುವ ಗಂಭೀರ ಗಾಯಗಳು ಮತ್ತು ಮೊಹಮ್ಮದ್ ನಲಪಾಡ್‌ ಈ ಮುಂಚೆಯೂ ಕೂಡ ಇದೇ ರೀತಿಯ ಕೆಲವು ಗಲಾಟೆಗಳಲ್ಲಿ ಭಾಗಿಯಾಗಿರುವ ಕಾರಣ ಅವರಿಗೆ ಜಾಮೀನು ದೊರಕುವುದು ದುರ್ಲಭ ಎನ್ನಲಾಗಿದೆ.

   ಬಾಟಲಿಯಿಂದ ಹಲ್ಲೆ

   ಬಾಟಲಿಯಿಂದ ಹಲ್ಲೆ

   ಮೊಹಮ್ಮದ್ ಹಾಗೂ ಸಹಚರರು ಯಾವುದೇ ಆಯುಧ ಬಳಸಿ ವಿದ್ವತ್‌ ಮೇಲೆ ಹಲ್ಲೆ ಮಾಡಿಲ್ಲ, ಹಾಗೂ ಮೊಹಮ್ಮದ್‌ಗೆ ಕೊಲೆ ಉದ್ದೇಶ ಇರಲಿಲ್ಲ, ವಿದ್ವತ್‌ ಹಾಗೂ ಮೊಹಮ್ಮದ್‌ ಇಬ್ಬರೂ ಮೊದಲ ಬಾರಿ ಭೇಟಿ ಆಗಿದ್ದಾರೆ ಹಾಗಾಗಿ ಕೊಲೆ ಯತ್ನ (307) ಅನ್ನು ತೆಗೆದುಹಾಕಬೇಕೆಂದು ಮೊಹಮ್ಮದ್ ಪರ ವಕೀಲರು ವಾದಿಸುವ ಸಾಧ್ಯತೆ ಇದೆ ಹಾಗೂ ಇದೇ ಆಧಾರದಲ್ಲಿ ಜಾಮೀನಿಗೆ ಒತ್ತಾಯಿಸುತ್ತಾರೆ ಎನ್ನಲಾಗಿದೆ.

   ಹಿಂಬಾಲಿಸಿಕೊಂಡು ಬಂದು ಹಲ್ಲೆ

   ಹಿಂಬಾಲಿಸಿಕೊಂಡು ಬಂದು ಹಲ್ಲೆ

   ಹಲ್ಲೆಗೆ ಗುರಿಯಾದ ವಿದ್ವತ್‌ಗೆ ಒಟ್ಟು 14 ಗಂಭೀರ ಗಾಯಗಳಾಗಿದ್ದು, ಹಲವು ಒಳಾಂಗದ ಗಾಯಗಳಾಗಿವೆ. ಪ್ರತ್ಯೇಕ ಆಯುಧಗಳನ್ನು ಬಳಸಿ ಹಲ್ಲೆ ನಡೆಸಿಲ್ಲವಾದರೂ, ಬಾಟಲಿಯಿಂದ ಮುಖಕ್ಕೆ ಹೊಡೆದುದರ ಬಗ್ಗೆ ಪೊಲೀಸರ ಬಳಿ ಮೊಹಮ್ಮದ್ ಒಪ್ಪಿಕೊಂಡಿದ್ದಾನೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ವಿದ್ವತ್‌ನನ್ನು ಹಿಂಬಾಲಿಸಿಕೊಂಡು ಮಲ್ಯ ಆಸ್ಪತ್ರೆಗೂ ಬಂದು ಅಲ್ಲೂ ಹಲ್ಲೆ ನಡೆಸಲು ಪ್ರಯತ್ನಿಸಿರುವುದು ಮೊಹಮ್ಮದ್‌ನಿಗೆ ವಿದ್ವತ್‌ನ ಮೇಲೆ ದ್ವೇಷ ಇತ್ತು ಹಾಗಾಗಿ ಕೊಲ್ಲುವ ಪ್ರಯತ್ನ ಸಹ ಮಾಡಲಾಗಿದೆ ಎಂಬುದನ್ನು ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಟ್ಟಲ್ಲಿ ಜಾಮೀನು ನಿರಾಕರಣೆಗೆ ಇದು ಪ್ರಮುಖ ಕಾರಣ ಆಗಲಿದೆ.

   ಆದರೂ ಜಾಮೀನು ಕಷ್ಟ

   ಆದರೂ ಜಾಮೀನು ಕಷ್ಟ

   ಪೊಲೀಸರು ಮಾಡಿರುವ ಪ್ರಾಥಮಿಕ ತನಿಖಾ ವರದಿಯಲ್ಲಿ (ಎಫ್‌ಐಆರ್‌) ಸಹ ದುರ್ಬಲವಾಗಿರುವುದರಿಂದ ಆರೋಪಿ ಪರ ವಕೀಲರಿಗೆ ವಾದ ಸುಲಭವಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ತಡವಾಗಿ ದೂರು ದಾಖಲಿಸಿಕೊಂಡಿದ್ದರು ಹಾಗೂ ಆರೋಪಿಗಳು ಒಂದು ದಿನ ತಲೆ ಮರೆಸಿಕೊಂಡಿದ್ದ ಕಾರಣ ಪ್ರಾಥಮಿಕ ತನಿಖೆ ಸೂಕ್ತವಾಗಿ ಆಗಿಲ್ಲವೆಂಬ ವಾದವನ್ನು ಪ್ರತಿವಾದಿ ವಕೀಲರು ಮಂಡಿಸಬಹುದು.

   ಪ್ರಭಾವ ಬಳಸಿ ತಿರುಚುವ ಸಾಧ್ಯತೆ

   ಪ್ರಭಾವ ಬಳಸಿ ತಿರುಚುವ ಸಾಧ್ಯತೆ

   ಎಲ್ಲಕ್ಕಿಂತಲೂ ಮುಖ್ಯವಾಗಿ ವಿದ್ವತ್‌ ಹೇಳಿಕೆಯನ್ನು ಪೊಲೀಸರು ಇನ್ನೂ ಪಡೆಯದ ಕಾರಣ, ಆರೋಪಿಯು ಪ್ರಭಾವಿಯಾಗಿದ್ದು ಆತ ತನ್ನ ಪ್ರಭಾವ ಬಳಸಿ ಸಾಕ್ಷ್ಯಗಳನ್ನು ತಿರುಚುವ ಸಾಧ್ಯತೆ ಇರುವುದರಿಂದ ಆರೋಪಿಗೆ ಜಾಮೀನು ನೀಡಬಾರದೆಂಬುದು ಪ್ರತಿವಾದಿ ವಕೀಲರ ವಾದವಾಗಿರಲಿದೆ.

   ಆರೋಪ ಸಾಬೀತಾದರೆ ಜೀವಾವಧಿ ಸಾಧ್ಯತೆ

   ಆರೋಪ ಸಾಬೀತಾದರೆ ಜೀವಾವಧಿ ಸಾಧ್ಯತೆ

   ಸಿಸಿಟಿವಿ ದೃಶ್ಯಾವಳಿಗಳು, ಎಲ್ಲಾ ಆರೋಪಿಗಳ ಹೇಳಿಕೆಗಳು, ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳು ಮತ್ತು ಆರೋಪಿ ಮೊಹಮ್ಮದ್‌ನ ಅಪರಾಧಿ ಇತಿಹಾಸ ಹಾಗೂ ಆತನ ಪ್ರಭಾವ ಇವೆಲ್ಲವನ್ನೂ ಗಮನದಲ್ಲಿರಿಸಿಕೊಂಡರೆ ಆರೋಪಿ ಮೊಹಮ್ಮದ್‌ಗೆ ಜಾಮೀನು ದೊರಕುವುದು ಅಸಾಧ್ಯ. ಆರೋಪ ಸಾಬೀತಾದರೆ ಪ್ರಮುಖ ಆರೋಪಿ ಮೊಹಮ್ಮದ್‌ಗೆ ಜೀವಾವಾಧಿ ಅಥವಾ 10 ವರ್ಷ ಜೈಲು ಹಾಗೂ ಜುಲ್ಮಾನೆ ತನ ಸಹಚರರಿಗೂ 10 ವರ್ಷ ಜೈಲಾಗುವ ಸಾಧ್ಯತೆ ಇದೆ.

   ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

   English summary
   Mohammed Nalapad the son of Shantinagar Congress MLA N.A.Harris moved the court for bail. 'Can Nalapad gets bail or Not?' is the talk of the town now. Defense is trying hard to get the bail but the circumstances is against the Nalapad.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more