Breaking: ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚ ಪ್ರಕರಣ; IAS ಅಧಿಕಾರಿ ಮಂಜುನಾಥ್ ಬಂಧನ
ಬೆಂಗಳೂರು, ಜು.04: ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ ಮಂಜುನಾಥ್‌ರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಾಳಿ ಮಾಡಿ ಲಂಚ ಸ್ವೀಕರಿಸುವಾಗ ಕಚೇರಿಯ ಅಧಿಕಾರಿಗಳನ್ನು ಹಿಡಿದಿದ್ದರು. ಈ ವೇಳೆ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಲಂಚವನ್ನು ಕೊಟ್ಟಿದ್ದೇ ಎಂದು ದೂರುದಾರ ಆರೋಪವನ್ನು ಮಾಡಿದ್ದರು. ಈ ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಿದ್ದ ಮಂಜುನಾಥ್ ರನ್ನು ವಿಚಾರಣೆ ನಡೆಸುತ್ತಿದ್ದರು. ಇದೀಗ ಐಎಎಸ್ ಅಧಿಕಾರಿ ಮಂಜುನಾಥ್‌ರನ್ನು ಎಸಿಬಿ ಬಂಧಿಸಿದೆ.
ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್‌ಗೆ ಕೆಲ ದಿನಗಳ ಹಿಂದೆ ವಿಚಾರಣೆ ಹಾಜರಾಗುವಂತೆ ನೀಡಿದ್ದ ನೊಟೀಸ್ ನೀಡಿದ್ದರು. ಜಿಲ್ಲಾಧಿಕಾರಿಗಳು ಸ್ವತಃ ವಿಚಾರಣೆಗೆ ಹಾಜರಾಗಿ ಎಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ತನಿಖೆಗೆ ಅಗತ್ಯ ಬಿದ್ದರೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಡಿಸಿ ಅವರಿಗೆ ಅಧಿಕಾರಿಗಳು ಸೂಚನೆ ನೀಡಿದ್ದರು. ತನಿಖೆಯ ವೇಳೆಯಲ್ಲಿ ಜಿಲ್ಲಾಧಿಕಾರಿ ಲಂಚದ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಮಂಜುನಾಥ್‌ನನ್ನು ಬಂಧಿಸಿದ್ದಾರೆ.
ಮೇ 21 ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಉಪ ತಹಶೀಲ್ದಾರ್ / ಮ್ಯಾನೇಜರ್ ಮಹೇಶ್ ಗುತ್ತಿಗೆ ನೌಕರ ಚೇತನ್ ಆಲಿಯಾಸ್ ಚಂದ್ರು ದೂರುದಾರರಿಂದ 5 ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಎಸಿಬಿ ಅಧಿಕಾರಿಗಳ ತೋಡಿದ್ದ ಹಳ್ಳಕ್ಕೆ ಸಿಕ್ಕಿಬಿದ್ದಿದ್ದರು. ಈ ವೇಳೆ ಜಿಲ್ಲಾಧಿಕಾರಿ ಪಾತ್ರದ ಬಗ್ಗೆ ಆರೋಪ ಕೇಳಿಬಂದಿತ್ತು.

ಬೇಗೂರಿನ ನಿವಾಸಿ ನೀಡಿದ್ದ ದೂರಿನ್ವಯ ದಾಳಿ
ಬೇಗೂರಿನ ನಿವಾಸಿಯೊಬ್ಬರು ಆನೇಕಲ್‌ನ ಕೂಡ್ಲು ಗ್ರಾಮದಲ್ಲಿ 38 ಗುಂಟೆ ಜಮೀನು ಹೊಂದಿದ್ದರು. ಈ ಸಂಬಂಧ ಡಿಸಿ ಕೋರ್ಟ್ ನಲ್ಲಿ ವ್ಯಾಜ್ಯವಿತ್ತು. ಅರ್ಜಿದಾರರ ಅರ್ಜಿ ಕ್ಲಿಯರ್ ಮಾಡಿಕೊಡಬೇಕಾದರೆ ಆರೋಪಿ ಮಹೇಶ್ ಆರಂಭದಲ್ಲಿ15 ಲಕ್ಷಕ್ಕೆ ಲಂಚಕ್ಕೆ ಬೇಡಿಕೆಯಿಟ್ಟು ನಂತರ 5 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಎಸಿಬಿ ಅಧಿಕಾರಿಗಳು ಬಂಧಿಸಿದ್ದರು. ಜಮೀನು ವಿಚಾರ ಸಂಬಂಧ ದೂರುದಾರರು ಎರಡು ಬಾರಿ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದರು ಎನ್ನಲಾಗಿದೆ.

ಎಸಿಬಿಯ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ನಡೆದಿದ್ದ ದಾಳಿ
ಎಸಿಬಿಯ ಡಿವೈಎಸ್ಪಿ ರವಿಶಂಕರ್ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಗಿತ್ತು. ಆಜಾಂ ಪಾಷ ಎಂದುವವರು ಕೊಟ್ಟ ದೂರಿನ ಮೇರೆಗೆ ಎಸಿಬಿ ಟ್ರಾಪ್ ಮಾಡಿತ್ತು. ಜಮೀನಿಗೆ ಸಂಬಂಧಿಸಿದಂತೆ ಎಸಿ ನ್ಯಾಯಾಲಯ ತೀರ್ಪು ನೀಡಿದ್ದು ಡಿಸಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿರುತ್ತದೆ. ಈ ಕೇಸ್ ಫೈಲ್ ಅನ್ನು ಕ್ಲಿಯರ್ ಮಾಡುವ ಸಲುವಾಗಿ ಹದಿನೈದು ಲಕ್ಷಕ್ಕೆ ಬೇಡಿಕೆ ಇಡಲಾಗಿತ್ತಂತೆ. ಹದಿನೈದು ಲಕ್ಷದ ಪೈಕಿ 5 ಲಕ್ಷವನ್ನು ಲಂಚವಾಗಿ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ಟ್ರಾಪ್ ಮಾಡಿ ನೇರವಾಗಿಯೇ ಹಿಡಿದಿದ್ದರು. ಈ ವೇಳೆ ಮಾನನಾಡಿದ್ದ ಆಜಂ ಪಾಷ ಡಿಸಿ ಮಂಜುನಾಥ್ ಮೇಲೆ ಸಹ ಆರೋಪವನ್ನು ಮಾಡಿದ್ದರು.












Click it and Unblock the Notifications