ಬೆಡ್ಡು, ಆಂಬ್ಯುಲೆನ್ಸ್ ಇಲ್ದೆ ಜನರ ಸಾವು, ಬಿಜೆಪಿ ಅಧ್ಯಕ್ಷಗಿರಿ ಹಂಚಿಕೆ!
ಬೆಂಗಳೂರು, ಜುಲೈ 27: ರಾಜ್ಯದಲ್ಲಿ ಕೋರೋನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಈ ವಿಚಾರದಲ್ಲಿ ಕರ್ನಾಟಕ 2 ನೇ ಸ್ಥಾನದಲ್ಲಿದೆ. ಜನಸಾಮಾನ್ಯನ ಅಲ್ಲಲ್ಲಿ ಬೆಡ್ಡುಗಳ ಲ್ಲದೆ ಆಂಬ್ಯುಲೆನ್ಸ್ ಗಳು ಸಮಯಕ್ಕೆ ಬಾರದೆ ಸ್ಥಳದಲ್ಲೇ ಅಸುನೀಗುತ್ತಿರುವ ದುಸ್ಥಿತಿಗೆ ಕರ್ನಾಟಕವು ತಲುಪಿದೆ ಎಂದು ಆಮ್ ಆದ್ಮಿ ಪಕ್ಷವು ಆರೋಪಿಸಿದೆ.
Recommended Video
ಇಂತಹ ಆತಂಕದ ಸ್ಥಿತಿಯಲ್ಲೂ ಶಾಸಕರುಗಳಿಗೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷರಾಗಿ ನೇಮಿಸುವ ಜರೂರು ಏನಿತ್ತು ಎಂಬುದೇ ನಮ್ಮ ಪ್ರಶ್ನೆ. ಬಿಜೆಪಿ ಪಕ್ಷದ ಶಾಸಕರುಗಳು ಕುರ್ಚಿಯ ಆಸೆಗೆ ಲಾಭಿ ನಡೆಸುತ್ತಿರುವುದು ಕೆಟ್ಟ ಹಾಗೂ ಕೊಳಕು ರಾಜಕಾರಣಕ್ಕೆ ಸೂಕ್ತ ಉದಾಹರಣೆ.
ಇಂತಹ ಸಂಕಷ್ಟದ ಸಮಯದಲ್ಲಿ ಶಾಸಕರುಗಳಿಗೆ ತಮ್ಮ ತಮ್ಮ ಕ್ಷೇತ್ರದಲ್ಲೇ ಇದ್ದುಕೊಂಡು ಸೋಂಕು ತಡೆಗಟ್ಟಲು ದಿಟ್ಟವಾಗಿ ಹೋರಾಡಿ ಎಂದು ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರು ಕಠಿಣ ಆದೇಶ ನೀಡುವ ಬದಲು ಶಾಸಕರ ಅಡಿಯಾಳಿನಂತೆ ವರ್ತಿಸುತ್ತಿದ್ದಾರೆ. 1 ವರ್ಷ ಪೂರೈಸಿದ ನಶೆಯಲ್ಲಿ ತೇಲುತ್ತಿರುವ ಯಡಿಯೂರಪ್ಪ ಅವರು ತಾವು ಮುಖ್ಯಮಂತ್ರಿಗಳು ಎಂಬುದನ್ನೆ ಮರೆತು ಬಿಟ್ಟಿದ್ದಾರೆ.

ಅಧಿಕಾರಕ್ಕಾಗಿ ಪರಸ್ಪರ ಒಳಜಗಳ, ಕಾಲು ಎಳೆಯುವ ಹಾಗೂ ಹಣ ಮಾಡುವ ಕೆಲಸ ಬಿಟ್ಟು ಬೇರೇನೂ ಸಾಧಿಸಿದ್ದೀರಿ ಎಂದು ಜನರ ಎದುರು ಉತ್ತರಿಸಬೇಕಿದೆ. ಅನೇಕ ಜಿಲ್ಲೆಗಳಲ್ಲಿ ಸೂಕ್ತ ಹಾಗೂ ಜನಪರ ಪ್ರತಿನಿಧಿಗಳು ಇಲ್ಲದೇ ಅಧಿಕಾರಿಗಳು ತಮ್ಮ ಮನಸ್ಸಿಗೆ ಬಂದ ಹಾಗೇ ವರ್ತಿಸುತ್ತಿದ್ದಾರೆ. ಆದರೂ ಸ್ಥಳೀಯ ಬಿಜೆಪಿ ಶಾಸಕರುಗಳಿಗೆ ಸೂಕ್ತ ನಿರ್ದೇಶನ ನೀಡದೇ ರಾಜ್ಯ ವನ್ನು ಸ್ಮಶಾನ ಮಾಡಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ.
ಈ ಕೂಡಲೇ ಬಿಜೆಪಿಯ ಎಲ್ಲಾ ಶಾಸಕರುಗಳ ಸಭೆ ಕರೆದು ಪ್ರತಿ ಜಿಲ್ಲೆಯ ಉಸ್ತುವಾರಿ ಸಚಿವರ ಜತೆಗೆ ಹಾಗೂ ಅಧಿಕಾರಿಗಳ ಜತೆ ಸೋಂಕು ತಡೆಗಟ್ಟಲು ತ್ವರಿತ ಮಾರ್ಗಗಳ ಬಗ್ಗೆ ಗಮನ ಹರಿಸಬೇಕು ಹಾಗೂ ಕೆಲಸ ಮಾಡುವಂತೆ ಶಾಸಕರು ಜನ ಪರವಾದ ಕೆಲಸ ಮಾಡಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸುತ್ತದೆ.












Click it and Unblock the Notifications