ಯುವಕನಿಗೆ ಲೈಂಗಿಕ ಕಿರುಕುಳ ಕೊಟ್ಟ ಚಾಲಾಕಿ ಮಹಿಳೆಯರು
ಬೆಂಗಳೂರು, ಜನವರಿ 27: ಬಸ್ಸು ಕಾಯುತ್ತಾ ನಿಂತಿದ್ದ ಯುವಕನನ್ನು ಮಹಿಳೆಯರು ಎಳೆದೊಯ್ದು ದರೋಡೆ ಮಾಡಿದ ಘಟನೆ ನಿನ್ನೆ (ಜ.26) ತಡರಾತ್ರಿ 12-15ಕ್ಕೆ ನಡೆದಿದೆ.
ಮಣಿಕಂಠ ಎಂಬ ಯುವಕನ ಮೇಲೆ ಕೆಎಸ್ಆರ್ ಟಿಸಿ ಟರ್ಮಿನಲ್ ಬಳಿ ಇಬ್ಬರು ಚಾಲಾಕಿ ಮಹಿಳೆಯರು ದೌರ್ಜನ್ಯ ಎಸಗಿದ್ದಾರೆ.
ಮಣಿಕಂಠನಿಗೆ 500 ರೂ. ಕೊಟ್ಟು ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ ಇಬ್ಬರು ಮಹಿಳೆಯರು ಬಲವಂತವಾಗಿ ಆತನನ್ನು ಆಟೋದಲ್ಲಿ ಕೂರಿಸಿ, ನಂತರ ಆತನ ಹಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಮಣಿಕಂಠ ವಿರೋಧಿಸಿದ್ದಕ್ಕೆ ಮಹಿಳೆಯರೇ, ಕಿರುಚಿ ಅತ್ಯಾಚಾರ ಮಾಡ್ತಿದ್ದಾನೆ ಎಂದು ಹೇಳುತ್ತೇವೆಂದು ಬೆದರಿಸಿ ಹಣ ವಸೂಲಿ ಮಾಡಿ ಎಸ್ಕೇಪ್ ಆಗಿದ್ದಾರೆ.

ಇದರಿಂದ ನೊಂದ ಮಣಿಕಂಠ ಕಿಡಿಗೇಡಿ ಮಹಿಳೆಯರ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.












Click it and Unblock the Notifications