ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಯೋಧನ ಸಾವಿಗೆ ಕಾರಣನಾದ ಬಿಎಂಟಿಸಿ ಚಾಲಕ

|
Google Oneindia Kannada News

ಬೆಂಗಳೂರು, ನ. 18: ಬಿಎಂಟಿಸಿ ಬಸ್ ಚಾಲಕನೊಬ್ಬ ಸರಿಯಾಗಿ ಬಸ್ ನಿಲ್ಲಿಸದ ಕಾರಣ ಯೋಧರೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಿಎಂಟಿಸಿ ಬಸ್‌ ಅನ್ನು ಎಡಕ್ಕೆ ನಿಲ್ಲಿಸುವ ಬದಲು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿದ ಚಾಲಕನ ಕೃತ್ಯದಿಂದ ಉಂಟಾಗಿದ್ದ ಅಪಘಾತದಲ್ಲಿ ತನ್ನ ಸ್ನೇಹಿತನೊಂದಿಗೆ ಪ್ರಯಾಣಿಸುತ್ತಿದ್ದ ಯೋಧರ ಸಾವಿಗೆ ಕಾರಣವಾಗಿದೆ.

ಮಂಡ್ಯದಲ್ಲಿ ರಸ್ತೆ ಗುಂಡಿಗೆ ಬಲಿಯಾದ ನಿವೃತ್ತ ಯೋಧ, ಮಡುಗಟ್ಟಿದ ಶೋಕಮಂಡ್ಯದಲ್ಲಿ ರಸ್ತೆ ಗುಂಡಿಗೆ ಬಲಿಯಾದ ನಿವೃತ್ತ ಯೋಧ, ಮಡುಗಟ್ಟಿದ ಶೋಕ

ಮೃತರನ್ನು ಕೋಲಾರ ಜಿಲ್ಲೆ ಚಿನ್ನಕೋಟೆ ಗ್ರಾಮದ ನಿವಾಸಿ 22 ವರ್ಷದ ಎಸ್ ಚೇತನ್ ಎಂದು ಗುರುತಿಸಲಾಗಿದೆ. ನ.7 ರಂದು ಸಂಜೆ ಕಾಮಾಕ್ಷಿಪಾಳ್ಯದಲ್ಲಿ ಸಂಭವಿಸಿದ ಬಿಎಂಟಿಸಿ- ಕಾರು ಅಪಘಾತದಲ್ಲಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾರೆ.

A Soldier Dies After BMTC Driver Stops Bus in Middle of road

ಸಂತ್ರಸ್ತರು ಚೆನ್ನೈ ರೆಜಿಮೆಂಟ್‌ಗೆ ಸೇರಿದ್ದು, ಕುಟುಂಬವನ್ನು ಭೇಟಿ ಮಾಡಲು ಮತ್ತು ಸಮಯ ಕಳೆಯಲು ಬೆಂಗಳೂರಿಗೆ ಬಂದಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದ ಚೇತನ್‌ರನ್ನು ಯಲಹಂಕ ಬಳಿಯ ಕಮಾಂಡೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತ ಯೋಧ ಮೂರು ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು.

''ಕಾಮಾಕ್ಷಿಪಾಳ್ಯ ಬಳಿ ಬಿಎಂಟಿಸಿ ಬಸ್ (ಕೆಎ-57-ಎಫ್-2216) ಚಾಲಕ ರಸ್ತೆ ಮಧ್ಯದಲ್ಲಿ ಬಸ್ ನಿಲ್ಲಿಸಿದ್ದಾನೆ. ಇದರಿಂದ ಅಪಘಾತ ಸಂಭವಿಸಿದೆ. ಗಾಯಾಳು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಅವರನ್ನು ಓಲ್ಡ್ ಏರ್‌ಪೋರ್ಟ್ ಟೋಡ್‌ನಲ್ಲಿರುವ ಕಮಾಂಡೋ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು" ಎಂದು ಪೊಲೀಸರು ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.

English summary
BMTC driver stopped the bus in the middle of the road it caused the death of the soldier. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X