ಬೆಂಗಳೂರಿನಲ್ಲಿ ಕೋವಿಡ್ - 19ನಿಂದ ವ್ಯಕ್ತಿ ಸಾವು, 2025ನೇ ಸಾಲಿನ ಮೊದಲ ಪ್ರಕರಣ!
ಕಳೆದ ಮೂರು ವರ್ಷಗಳಿಂದ ಕಣ್ಮರೆಯಾಗಿದ್ದ ಕೋವಿಡ್ -19 ಮತ್ತೆ ವಕ್ಕರಿಸಿಕೊಂಡಿದೆ. ಬೆಂಗಳೂರು ಸೇರಿದಂತೆ ವಿಶ್ವದಾದ್ಯಂತ ಕೋವಿಡ್ - 19 ಸೋಂಕು ಹೆಚ್ಚಳವಾಗುತ್ತಿದ್ದು. ಬೆಂಗಳೂರಿನಲ್ಲಿ ವಿವಿಧ ಆರೋಗ್ಯ ಸಮಸ್ಯೆಯನ್ನು (Comorbidities) ಎದುರಿಸುತ್ತಿದ್ದ 84 ವರ್ಷದ ವ್ಯಕ್ತಿಯೊಬ್ಬರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದ್ದು. ಕೋವಿಡ್‌ನಿಂದ ಮೃತಪಟ್ಟಿರುವುದು ವರದಿಯಾಗಿದೆ. ಬೆಂಗಳೂರಿನಲ್ಲಿ 2025ನೇ ಸಾಲಿನಲ್ಲಿ ಕೋವಿಡ್‌ನಿಂದ ಮೃತಪಟ್ಟಿರುವ ಮೊದಲ ಪ್ರಕರಣ ಇದಾಗಿದೆ. ದೇಶದಾದ್ಯಂತ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದ್ದು ರಾಜ್ಯದಲ್ಲೂ ಕೋವಿಡ್ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಕಳೆದ ಬಾರಿಯೂ 2024ನೇ ಸಾಲಿನಲ್ಲೂ ಕೋವಿಡ್ ಆತಂಕ ಎದುರಾಗಿತ್ತಾದರೂ, ಇಷ್ಟರ ಮಟ್ಟಿಗೆ ಆತಂಕ ಸೃಷ್ಟಿ ಮಾಡಿರಲಿಲ್ಲ.
ಕೋವಿಡ್ - 19 ರಾಜ್ಯದಲ್ಲಿ ಮತ್ತೆ ಹೆಚ್ಚಳವಾಗುತ್ತಿದ್ದು. ಜನರ ಆತಂಕಕ್ಕೆ ಕಾರಣವಾಗಿದೆ. 2019ನೇ ಸಾಲಿನಲ್ಲಿ ಕೋವಿಡ್ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಈ ಹೆಮ್ಮಾರಿಯಿಂದ ಕೋಟ್ಯಾಂತರ ಜನ ಸಾವನ್ನಪ್ಪಿದ್ದರು. ಕಳೆದ ಆರು ವರ್ಷಗಳಿಂದಲೂ ಕೋವಿಡ್ ಹೆಮ್ಮಾರಿ ಇಡೀ ವಿಶ್ವವನ್ನೇ ನಡುಗಿಸುತ್ತಿದೆ.

ಕೋವಿಡ್‌ನಿಂದ ಇಲ್ಲಿಯ ವರೆಗೂ ಕರ್ನಾಟಕವೂ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಾಂತರ ಜನ ಮೃತಪಟ್ಟಿದ್ದಾರೆ. ಮೊದಲ ಮೂರು ವರ್ಷ ಇಡೀ ವಿಶ್ವದಲ್ಲೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ಇದಾದ ಮೇಲೆ ಕಳೆದ ಮೂರು ವರ್ಷಗಳಿಂದ ಕೋವಿಡ್‌ನ ರೂಪಾಂತರಿ ಕಾಣಿಸಿಕೊಂಡಿದ್ದರೂ. ಅಷ್ಟೊಂದು ಪರಿಣಾಮ ಬೀರಿರಲಿಲ್ಲ. ಆದರೆ, ಈ ಬಾರಿ ಹೇಗಿದೆ ಎನ್ನುವ ಬಗ್ಗೆ ಹೆಚ್ಚು ಚರ್ಚೆ ನಡೆದಿದೆ.
ಬೆಂಗಳೂರಿನಲ್ಲಿ ಮೊದಲ ಸಾವು: ಬೆಂಗಳೂರಿನಲ್ಲಿ 84 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ ಸೋಂಕು ದೃಢಪಟ್ಟು ಸಾವನ್ನಪ್ಪಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ವ್ಯಕ್ತಿಗೆ ಶನಿವಾರ ಕೋವಿಡ್ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಶನಿವಾರ ಅವರನ್ನು ಕೋವಿಡ್ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಿಗೆ ಕೋವಿಡ್ - 19 ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಗಂಭೀರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮೇ 13ಕ್ಕೆ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಪ್ರಮುಖ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮೇ 17 ರಂದು ಮೃತಪಟ್ಟಿದ್ದಾರೆ. ಅವರು ಜೀವಂತವಾಗಿದ್ದಾಗ ನಡೆಸಲಾದ ಕೋವಿಡ್ -19 ಪರೀಕ್ಷೆಯ ಫಲಿತಾಂಶಗಳು ಶನಿವಾರ ಪಾಸಿಟಿವ್ ಬಂದಿದೆ ಎಂದು ಹೇಳಲಾಗಿದೆ. ಇನ್ನು ಕರ್ನಾಟಕ ಆರೋಗ್ಯ ಇಲಾಖೆಯ ಪ್ರಕಾರ, ಬೆಂಗಳೂರಿನಲ್ಲಿ 32 ಕೋವಿಡ್ -19 ಪ್ರಕರಣಗಳು ಸೇರಿದಂತೆ ರಾಜ್ಯದಾದ್ಯಂತ 38 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ ಎಂದು ವರದಿ ಮಾಡಿದೆ.
ಕರ್ನಾಟಕ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ: ಇನ್ನು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಮಕ್ಕಳು, ವಯಸ್ಸಾದವರು ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಜನ ಹೆಚ್ಚಾಗಿರುವ ಪ್ರದೇಶಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸಬೇಕು ಎಂದು ಹೇಳಲಾಗಿದೆ. ಅಲ್ಲದೇ ಎಲ್ಲರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಹೇಳಲಾಗಿದೆ.
ಜಿಎನ್ 1 ಕೋವಿಡ್ ರೂಪಾಂತರಿ: ಇನ್ನು ಈ ಬಾರಿ ಕಾಣಿಸಿಕೊಂಡಿರುವುದು ಕೋವಿಡ್ JN1 ರೂಪಾಂತರಿ ಎಂದು ಹೇಳಲಾಗಿದೆ. ಜಿಎನ್1 ಕೋವಿಡ್ ರೂಪಾಂತರಿ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಭಾರೀ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.












Click it and Unblock the Notifications