ಮದ್ವೆ ಆಗ್ತೀನಂತ ಹೇಳಿ 3 ಲಕ್ಷ ಹಣ ಪಡೆದು ಪಂಗನಾಮ ಹಾಕಿದ ಅಮೆರಿಕ ವರ

ಬೆಂಗಳೂರು, ನವೆಂಬರ್ 08 : ಜೀವನ್ ಸಾಥಿ ಡಾಟ್ ಕಾಮ್ ನಲ್ಲಿ ವರನಿಗೆ ಹುಡುಕಾಡುತ್ತಿದ್ದ ಕೋರಮಂಗಲ ಹುಡುಗಿಗೆ ಮಹಮ್ಮದ್ ಅಬ್ದುಲ್ ಎಂಬ ಹುಡುಗ ತಲಗಾಕಿಕೊಂಡಿದ್ದಾನೆ.

ತಾನು ಅನಿವಾಸಿ ಭಾರತೀಯ, ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಿರುವುದಾಗಿ ಹೇಳಿರುವ ಮಹಮ್ಮದ್ ಆದಷ್ಟು ಬೇಗ ಭಾರತಕ್ಕೆ ಬರುವುದಾಗಿಯೂ, ಯುವತಿಯನ್ಹನು ಮದುವೆಯಾಗುವುದಾಗಿಯೂ ಹೇಳಿದ್ದಾನೆ.

a NRI cheats Koramangala Young Girl

ಎನ್.ಆರ್.ಐ ಹುಡುಗ ಸಿಕ್ಕ ಆನಂದದಲ್ಲಿದ್ದ ಹುಡುಗಿ ಪ್ರತಿ ದಿನ ಮಹಮ್ಮದ್ ನಿಗೆ ಕರೆ ಮಾಡಿ ಲಲ್ಲೆ ಹೊಡೆಯುತ್ತಾ ಆರಾಮವಾಗಿ ಕಾಲ ಕಳೆದಿದ್ದಾಳೆ.

ಇತ್ತೀಚೆಗೆ ಒಂದು ದಿನ ಮಹಮ್ಮದ್ ಕರೆ ಮಾಡಿ, ಸರ್ಪ್ರೈಸ್ ಗಿಫ್ಟ್ ಕೊಡುವುದಾಗಿ ಹೇಳಿದ್ದಾನೆ. ಮಹಮ್ಮದ್ ಮಾತು ನಂಬಿದ ಯುವತಿ ಗಿಫ್ಟ್ ಗಾಗಿ ಕಾಯುತ್ತಾ ಕೂತಿದ್ದಾಗ. ಯುವತಿಯೊಬ್ಬಳು ಕರೆ ಮಾಡಿ ತಾನು ಕೊರಿಯರ್ ಸಂಸ್ಥೆಯಿಂದ ಕರೆ ಮಾಡುತ್ತಿದ್ದು ತಮ್ಮ ಹೆಸರಿಗೆ 18000 ಯು.ಎಸ್.ಡಾಲರ್ (11 ಲಕ್ಷ ರೂಪಾಯಿ) ಕೊರಿಯರ್ ಬಂದಿದ್ದು, ಮುಂಗಡವಾಗಿ ಜಿ.ಎಸ್.ಟಿ ಕಟ್ಟಿದರೆ ಹಣವನ್ನು ಖಾತೆಗೆ ವರ್ಗಾಯಿಸುವುದಾಗಿ ಹೇಳಿದ್ದಾಳೆ.

ಆಕೆಯ ಮಾತನ್ನು ನಿಜವೆಂದು ನಂಬಿದ ಕೋರಮಂಗಲ ಯುವತಿ ಕೊರಿಯರ್ ಯುವತಿ ನೀಡಿದ ಖಾತೆಗೆ 3 ಲಕ್ಷ ಹಣ ಜಮಾ ಮಾಡಿದ್ದಾಳೆ. ಹಣ ಖಾತೆಗೆ ಬಂದ ಕೂಡಲೆ ಕೊರಿಯರ್ ಯುವತಿ ಹಾಗೂ ಎನ್.ಆರ್.ಐ ವರ ಇಬ್ಬರ ಮೊಬೈಲ್ ಗಳೂ ಸ್ವಿಚ್ ಆಫ್ ಆಗಿವೆ. ಎನ್.ಆರ್.ಐ ವರ ತನ್ನ ಫೇಸ್ ಬುಕ್ ಮತ್ತು ಜೀವನ್ ಸಾಥಿ ಡಾಟ್ ಕಾಮ್ ನಲ್ಲಿದ್ದ ತನ್ನ ಪ್ರೊಪೈಲ್ ಅನ್ನೂ ಡಿಲೀಟ್ ಮಾಡಿದ್ದಾನೆ.

ವರ, ವರಹ (ಹಣ) ಎರಡನ್ನೂ ಕಳೆದುಕೊಂಡ ಯುವತಿ ಕೋರಮಂಗಲ ಪೊಲೀಸ್ ಠಾಣೆಗೆ ಬಂದು ಅಳಲು ತೋಡಿಕೊಂಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+