ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸ್ತೆಗುಂಡಿ ಮುಚ್ಚಲು ಬಿಬಿಎಂಪಿ ಬಳಿ ಹೊಸ ಬಗೆಯ ಯಂತ್ರ

|
Google Oneindia Kannada News

ಬೆಂಗಳೂರು, ಜನವರಿ 9: ಬಿಬಿಎಂಪಿ ರಸ್ತೆ ಗುಂಡಿಗಳನ್ನು ಮುಚ್ಚುವುದೇ ಒಂದು ಸವಾಲಾಗಿದೆ.

ಒಂದೆಡೆ ಗುಂಡಿ ಮುಚ್ಚುತ್ತಿದ್ದಂತೆ ಇನ್ನೊಂದೆಡೆ ರಸ್ತೆ ಮತ್ತೆ ಬಾಯ್ತೆರೆದುಕೊಳ್ಳುತ್ತಿದೆ. ಹಾಗೂ ಎಲ್ಲಾ ರಸ್ತೆಗುಂಡಿಗಳನ್ನು ಬೇಗ ಮುಚ್ಚಸಲು ಸಾಧ್ಯವಾಗದ ಕಾರಣ ಹೊಸ ಯಂತ್ರವನ್ನು ಬಳಕೆ ಮಾಡುತ್ತಿದೆ.

Rank ಬಂದ ಸರಕಾರಿ ಕಾಲೇಜು ವಿದ್ಯಾರ್ಥಿನಿಗೆ ಬಿಬಿಎಂಪಿ ನೆರವುRank ಬಂದ ಸರಕಾರಿ ಕಾಲೇಜು ವಿದ್ಯಾರ್ಥಿನಿಗೆ ಬಿಬಿಎಂಪಿ ನೆರವು

ಹೈಕೋರ್ಟ್‌ ಛಾಟಿ ಬೀಸಿದ ಬೆನ್ನಲ್ಲೇ ರಸ್ತೆ ಗುಂಡಿ ಮುಚ್ಚಲು ಹೊಸ ಉಪಾಯ ರೂಪಿಸಿದೆ ಅದರಂತೆ ರಸ್ತೆಗುಂಡಿಗಳನ್ನು ಮುಚ್ಚುತ್ತಿದೆ.

 ಹೈಕೋರ್ಟ್ ಕೊಟ್ಟ ಟಾರ್ಗೆಟ್‌ನಲ್ಲಿ ಯಾವ ಕೆಲಸವೂ ಆಗಿಲ್ಲ

ಹೈಕೋರ್ಟ್ ಕೊಟ್ಟ ಟಾರ್ಗೆಟ್‌ನಲ್ಲಿ ಯಾವ ಕೆಲಸವೂ ಆಗಿಲ್ಲ

ರಸ್ತೆ ಗುಂಡಿ ಮುಚ್ಚಲು ಟಾರ್ಗೆಟ್ ಕೊಟ್ಟರು ಸಹ ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಕೊರತೆ, ಕಾರ್ಮಿಕರ ಕೊರತೆ ಸೇರಿದಂತೆ ವಿವಿಧ ಕಾರಣಗಳಿಂದ ನಗರದಲ್ಲಿ ಇನ್ನೂ ಸಾವಿರಾರು ರಸ್ತೆಗಳು ಗುಂಡಿಗಳು ಬಾಯಿ ತೆರೆದು ನಿಂತಿವೆ. ಹೇಗಾದರೂ ಮಾಡಿ ಈ ಸಮಸ್ಯೆ ಪರಿಹರಿಸಬೇಕೆಂದು ಬಿಬಿಎಂಪಿ ವಿವಿಧ ಉಪಾಯಗಳ ಮೊರೆ ಹೋಗುತ್ತಿದೆ.

 ರಸ್ತೆಗುಂಡಿ ಮುಚ್ಚಲು ಜೆಟ್ ಪ್ಯಾಚರ್ ಯಂತ್ರ

ರಸ್ತೆಗುಂಡಿ ಮುಚ್ಚಲು ಜೆಟ್ ಪ್ಯಾಚರ್ ಯಂತ್ರ

ಈ ಹಿಂದೆ ಫೈಥಾನ್ ಯಂತ್ರ ಬಳಸಿ ಗುಂಡಿ ಮುಚ್ಚಲು ಯತ್ನಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ಮುಚ್ಚುವುದಕ್ಕೆ ಸಾಧ್ಯವಾಗಲಿಲ್ಲ.

ಆದರೆ ಮಳೆಗಾಲದಲ್ಲೇ ರಸ್ತೆಗುಂಡಿಗಳ ಸಮಸ್ಯೆ ಹೆಚ್ಚು ಕಾಡುವುದರಿಂದ ಅನುಕೂಲವಾಗುವ ಯಂತ್ರ ಬಳಕೆಗೆ ಬಿಬಿಎಂಪಿ ಚಿಂತನೆ ನಡೆಸಿದೆ. ಹೀಗಾಗಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ರಸ್ತೆ ಗುಂಡಿಗಳನ್ನು ಮುಚ್ಚಲು ಸಿದ್ಧತೆ ನಡೆಸಿದೆ.

 ಎಲ್ಲಾ ಪಾಲಿಕೆ ವ್ಯಾಪ್ತಿಯಲ್ಲೂ ತರಲು ಚಿಂತನೆ

ಎಲ್ಲಾ ಪಾಲಿಕೆ ವ್ಯಾಪ್ತಿಯಲ್ಲೂ ತರಲು ಚಿಂತನೆ

ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಯಶಸ್ವಿಯಾದರೆ ಪಾಲಿಕೆ ವ್ಯಾಪ್ತಿಯಲ್ಲಿ ಅಳವಡಿಸಲು ಚಿಂತಿಸಲಾಗಿದೆ. ಈ ಪ್ರಾಯೋಗಿಕ ಯಂತ್ರ ಬಳಕೆಯ ಕಾಮಗಾರಿಯನ್ನು ಮೇಯರ್ ಗೌತಮ್ ಕುಮಾರ್ ತಪಾಸಣೆ ನಡೆಸಿದರು. ಈ ವೇಳೆ ಉಪಮೇಯರ್ ರಾಮ್ ಮೋಹನ್ ರಾಜು ಹಾಗೂ ಇತರರು ಇದ್ದರು.

 ಜೆಟ್ ಪ್ಯಾಚಾರ್ ಯಂತ್ರ ಪ್ರಾಯೋಗಿಕ ಬಳಕೆ

ಜೆಟ್ ಪ್ಯಾಚಾರ್ ಯಂತ್ರ ಪ್ರಾಯೋಗಿಕ ಬಳಕೆ

ಪ್ರಾಯೋಗಿಕವಾಗಿ ಬುಧವಾರ ದೊಮ್ಮಲೂರು ವಾರ್ಡ್ ವ್ಯಾಪ್ತಿಯ ಇಸ್ರೋ ಕ್ವಾಟ್ರಸ್ ರಸ್ತೆಯಲ್ಲಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ಕೋಲ್ಡ್ ಮಿಕ್ಸ್ ಡಾಂಬರ್ ಬಳಸಿ ಗುಂಡಿಗಳನ್ನು ಮುಚ್ಚಲಾಯಿತು. ಪೈಥಾನ್ ಯಂತ್ರದಲ್ಲಿ ಹಾಟ್ ಮಿಕ್ಸ್ ಡಾಂಬರಿನಿಂದ ಮಾತ್ರ ರಸ್ತೆ ಗುಂಡಿ ಮುಚ್ಚಬಹುದು. ಅಲ್ಲದೆ ಮಳೆಗಾಲದಲ್ಲಿ ಸಾಧ್ಯವಾಗುವುದಿಲ್ಲ. ಆದರೆ ಜೆಟ್ ಪ್ಯಾಚರ್ ಯಂತ್ರದಿಂದ ಕೋಲ್ಡ್ ಮಿಕ್ಸ್ ಡಾಂಬರು ಬಳಸಿ ವರ್ಷವಿಡೀ ಗುಂಡಿಗಳನ್ನು ಮುಚ್ಚಬಹುದಾಗಿದೆ.

 ರಸ್ತೆ ಗುಂಡಿ ಮುಚ್ಚೋದ್ಯಾವಾಗ ಹೈಕೋರ್ಟ್ ತರಾಟೆ

ರಸ್ತೆ ಗುಂಡಿ ಮುಚ್ಚೋದ್ಯಾವಾಗ ಹೈಕೋರ್ಟ್ ತರಾಟೆ

ರಸ್ತೆ ಗುಂಡಿ ಮುಚ್ಚಲು ನೀಡಿದ್ದ ಗಡುವು ಮುಗಿದಿದೆ, ಯಾವಾಗ ರಸ್ತೆಗುಂಡಿ ಮುಚ್ಚೋದು ಎಂದು ಹೈಕೋರ್ಟ್ ಬುಧವಾರ ಮತ್ತೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು.

English summary
BBMP introducing New Type Of Machine To Close Pathole In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X