ಐದಲ್ಲ, ಹತ್ತಲ್ಲ, ಸ್ವಿಗ್ಗಿಯಲ್ಲಿ ಬರೋಬ್ಬರಿ 16 ಲಕ್ಷ ರೂಪಾಯಿಯ ದಿನಸಿ ಬುಕ್ ಮಾಡಿದ ವ್ಯಕ್ತಿ!
ಬೆಂಗಳೂರು, ಡಿ. 18: ಫುಡ್ ಡೆಲಿವರಿ ಆಪ್‌ಗಳು, ದಿನಸಿ ಡಿಲಿವರಿ ಆಪ್‌ಗಳ ಮೂಲಕ ಕೆಲವರು ಸಾವಿರಾರು ರೂಪಾಯಿಗಳ ಆಹಾರ, ವಸ್ತುಗಳನ್ನು ಆರ್ಡರ್ ಮಾಡುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 16 ಲಕ್ಷ ರೂಪಾಯಿಯ ದಿನಸಿ ಆರ್ಡರ್ ಮಾಡಿದ್ದಾರೆ.
ಹೌದು, ಆಶ್ಚರ್ಯವಾದರೂ ಇದು ಸತ್ಯ. ಈ ವಿಷಯವನ್ನು ಫುಡ್ ಡೆಲಿವರಿ ಆಪ್ ಸ್ವಿಗ್ಗಿಯ ವಾರ್ಷಿಕ ಟ್ರೆಂಡ್‌ಗಳ ವರದಿಯ ಏಳನೇ ಆವೃತ್ತಿ 2022 ತಿಳಿಸಿದೆ. ಬೆಂಗಳೂರಿನ ಗ್ರಾಹಕರೊಬ್ಬರು ಸ್ವಿಗ್ಗಿಯ ಪ್ಲಾಟ್‌ಫಾರ್ಮ್‌ನ ಇನ್‌ಸ್ಟಾಮಾರ್ಟ್‌ನಲ್ಲಿ ದಿನಸಿ ಮತ್ತು ಅಗತ್ಯಗಳಿಗಾಗಿ 16.6 ಲಕ್ಷ ರೂ.ಗಳನ್ನು ಖರ್ಚು ಮಾಡಿದ್ದಾರೆ ಎಂಬುದನ್ನು ವರದಿ ತಿಳಿಸಿದೆ.
ಹಾಗೆಯೇ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನ ಬಳಕೆದಾರರು ಒಂದೇ ಬಾರಿಗೆ ಒಟ್ಟು 75,378 ರೂಪಾಯಿಗಳ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.

ದೆಹಲಿ, ಮುಂಬೈ, ಚೆನ್ನೈಗಿಂತ ಬೆಂಗಳೂರಿಗರಿಂದ ಹೆಚ್ಚು ಆರ್ಡರ್
ವರದಿ ಪ್ರಕಾರ ಮುಂಬೈ, ಚೆನ್ನೈ ಮತ್ತು ದೆಹಲಿಯ ಒಟ್ಟು ಮೊತ್ತಕ್ಕಿಂತ ಬೆಂಗಳೂರು ಹೆಚ್ಚು ಆರ್ಡರ್‌ಗಳನ್ನು ಪಡೆದಿದೆ. ಕೇವಲ 50 ಮೀಟರ್‌ಗಳಷ್ಟು ದೂರದಲ್ಲಿರುವ ಗ್ರಾಹಕರಿಗೆ ಇನ್‌ಸ್ಟಾಮಾರ್ಟ್ ಮೂಲಕ ಅತ್ಯಂತ ವೇಗವಾಗಿ ವಸ್ತುವನ್ನು ಡಿಲಿವರಿ ಮಾಡಲಾಗಿರುವ ಘಟನೆ ಬೆಂಗಳೂರಿನಲ್ಲಿಯೇ ನಡೆದಿದೆ. ನಿಖರವಾಗಿ 1.03 ನಿಮಿಷಗಳಲ್ಲಿ ಆರ್ಡರ್ ಡಿಲಿವರಿ ಮಾಡಲಾಗಿದೆ.
ಇದರ ಜೊತೆಗೆ ಪುಣೆಯ ಇನ್ನೊಬ್ಬ ಬಳಕೆದಾರರು 71,229 ರೂ ಮೌಲ್ಯದ ಬರ್ಗರ್ ಮತ್ತು ಫ್ರೈಗಳಿಗಾಗಿ ಆರ್ಡರ್ ಮಾಡಿದ್ದಾರೆ.

ಇತರ ಪ್ರದೇಶಗಳಿಗಿಂತ ಬೆಂಗಳೂರಿನಲ್ಲಿ ಮಾಂಸದ ಆರ್ಡರ್ ಹೆಚ್ಚು
ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನಲ್ಲಿ ಕೋಳಿ ಮಾಂಸದ ವಿತರಣೆ ಹೆಚ್ಚು ಎಂಬ ಅಂಶವನ್ನು ಸ್ವಿಗ್ಗಿ ಹೇಳಿದೆ. ಮುಂಬೈ, ದೆಹಲಿ/ಎನ್‌ಸಿಆರ್, ಕೋಲ್ಕತ್ತಾ ಮತ್ತು ಕೊಯಮತ್ತೂರು ಸೇರಿದಂತೆ ಇತರ ನಗರಗಳಿಗಿಂತ ಬೆಂಗಳೂರು ಹೆಚ್ಚು ಮಾಂಸವನ್ನು ಆರ್ಡರ್ ಮಾಡಲಾಗಿದೆ ಎಂದು ವರದಿ ತೋರಿಸಿದೆ.
ಸ್ವಿಗ್ಗಿ ಒನ್ ಮೂಲಕ ಅತಿ ಹೆಚ್ಚು ಹಣವನ್ನು ಉಳಿಸಿದ ಹೆಗ್ಗಳಿಕೆಯನ್ನೂ ಬೆಂಗಳೂರು ಸಾಧಿಸಿದೆ. ಇದರ ಮೂಲಕ ಬೆಂಗಳೂರಿನ ಬಳಕೆದಾರರು 100 ಕೋಟಿ ರೂಪಾಯಿ ಉಳಿಸಿದ್ದಾರೆ, ನಂತರ ಮುಂಬೈ, ಹೈದರಾಬಾದ್ ಮತ್ತು ದೆಹಲಿಯ ಬಳಕೆದಾರರು ಪಟ್ಟಿಯಲ್ಲಿದ್ದಾರೆ.

ಕ್ವಿಕ್ ಕ್ಲಬ್ ಪಟ್ಟಿ ಸೇರಿದ ಬೆಂಗಳೂರು, ದೆಹಲಿ ಮತ್ತು ಮುಂಬೈ
ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ನಲ್ಲಿನ ಟ್ರೆಂಡ್‌ಗಳ ಪ್ರಕಾರ, ಬೆಂಗಳೂರು, ದೆಹಲಿ ಮತ್ತು ಮುಂಬೈ ಐದು ಕೋಟಿಗೂ ಹೆಚ್ಚು ಆರ್ಡರ್‌ಗಳ ದಾಖಲೆಯಿಂದಾಗಿ "ಕ್ವಿಕ್ ಕ್ಲಬ್" ನಲ್ಲಿ ಸೇರಿಸಲಾಗಿದೆ. ಇದರ ಜೊತೆಗೆ ಚಹಾದ ಆರ್ಡರ್‌ಗಳಲ್ಲಿ ಶೇಕಡಾ 305.55 ರಷ್ಟು ಮತ್ತು ಕಾಫಿಯ ಆರ್ಡರ್‌ಗಳಲ್ಲಿ ಶೇಕಡಾ 273.67 ರಷ್ಟು ಬೆಳವಣಿಗೆಯಾಗಿದೆ ಎಂದು ವರದಿ ತಿಳಿಸಿದೆ.
ಸಾವಯವ ಬಳಕೆದಾರರಿಂದ 50 ಕಿಲೋಗ್ರಾಂಗಳಷ್ಟು ಸಾವಯವ ಹಣ್ಣುಗಳು ಮತ್ತು ತರಕಾರಿಗಳನ್ನು ಆರ್ಡರ್ ಮಾಡಲಾಗಿದೆ. ಮರಸೇಬು, ಚಕ್ಕೋತ್ತಾ, ಬೆರ್ರಿ ಹಣ್ಣುಗಳು ಮತ್ತು ಡ್ರ್ಯಾಗನ್ ಹಣ್ಣಿನಂತಹ ಹಣ್ಣುಗಳು 17 ಲಕ್ಷ ಕಿಲೋಗ್ರಾಂಗಳಷ್ಟು ಮಾರಾಟವಾಗಿದೆ.

ಪ್ರತಿ ನಿಮಿಷಕ್ಕೆ 137 ಬಿರಿಯಾನಿ ಆರ್ಡರ್ ಪಡೆದ ಸ್ವಿಗ್ಗಿ!
2022ರಲ್ಲಿ ಭಾರತೀಯರು ಜನಪ್ರಿಯ ಆಹಾರವಾಗಿ ಬಿರಿಯಾನಿ ಖ್ಯಾತಿ ಪಡೆದಿದೆ. ಪ್ರತಿ ನಿಮಿಷಕ್ಕೆ 137 ಅಥವಾ ಪ್ರತಿ ಸೆಕೆಂಡಿಗೆ 2.28 ಬಿರಿಯಾನಿ ಆರ್ಡರ್‌ಗಳನ್ನು ಸ್ವಿಗ್ಗಿ ಪಡೆದಿದೆ. ಈ ಮೂಲಕ ಎಲ್ಲಾ ದಾಖಲೆಗಳನ್ನು ಮುರಿದಿದೆ.
ವರದಿಯ ಪ್ರಕಾರ, ಗ್ರಾಹಕರು ಟೀ, ನೀರು ಪಾನಿ, ರೋಟಿ ಮತ್ತು ಪಲ್ಯಗಳಿಂದ ಹಿಡಿದು ಸೋಫಾಗಳು ಮತ್ತು ಹಾಸಿಗೆಗಳಿಗಾಗಿ ಎಲ್ಲವನ್ನೂ ತ್ವರಿತವಾಗಿ ಪಡೆಯಲು ಸ್ವಿಗ್ಗಿಯ ಪ್ಲಾಟ್‌ಫಾರ್ಮ್‌ನ ಇನ್‌ಸ್ಟಾಮಾರ್ಟ್ ಬಳಸಿದ್ದಾರೆ.












Click it and Unblock the Notifications