ಸೆಕ್ಸ್ ಮಾಡಲು ನಿರಾಕರಿಸಿದ ಪತ್ನಿ ಕೊಂದು ಶಿರಾಡಿ ಘಾಟ್‌ಗೆ ಎಸೆದ ಪತಿ
ಬೆಂಗಳೂರು, ಆಗಸ್ಟ್ 17: ಮದುವೆಯಾದಗಿನಿಂದಲೂ ತನ್ನ ಪತ್ನಿ ಸೆಕ್ಸ್ ನಿರಾಕರಿಸುತ್ತಿದ್ದಾಳೆ ಎಂದು 28 ವರ್ಷದ ಪತಿ ಆರೋಪಿಸಿದ್ದಾನೆ. ಆಕೆಯನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋಗಿ ಹಿಂದಿರುಗುವಾಗ ಅವಳನ್ನು ಕೊಲೆ ಮಾಡಿ ಶವವನ್ನು ಶಿರಾಡಿಗೆ ಎಸೆದು ಬಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂಬತ್ತು ತಿಂಗಳ ಹಿಂದೆ ವಿವಾಹವಾದಾಗಿನಿಂದ ತನ್ನ ಪತ್ನಿಯು ತನ್ನೊಂದಿಗೆ ಎಂದಿಗೂ ಸೆಕ್ಸ್ ಮಾಡಲು ಒಪ್ಪುತ್ತಿಲ್ಲ ಎಂದು ಅವನು ತನ್ನ ಹೆಂಡತಿಯ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಆರೋಪಿ ಮಡಿವಾಳದ ಮಾರುತಿ ಲೇಔಟ್ ನಿವಾಸಿ ಪೃಥ್ವಿರಾಜ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಸೀತಾಮರ್ಹಿ ಮೂಲದ ಈ ದಂಪತಿ 15 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸದ್ಯ ಎಲೆಕ್ಟ್ರಾನಿಕ್ಸ್ ವಸ್ತುಗಳ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಪೃಥ್ವಿರಾಜ್ ಆಗಸ್ಟ್ 5 ರಂದು ಮಡಿವಾಳ ಪೊಲೀಸ್ ಠಾಣೆಗೆ ಬಂದು ಆಗಸ್ಟ್ 3 ರಿಂದ ತನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಹೇಳಿದನು. ತಮ್ಮ ಪತ್ನಿ ಜ್ಯೋತಿ ಕುಮಾರಿ ತಮ್ಮ ಹುಟ್ಟೂರಾದ ಸೀತಾಮರ್ಹಿ ಗ್ರಾಮದ ಪಕ್ಕದ ಗ್ರಾಮದವರಾಗಿದ್ದು, ತಾನು ಹಾಗೂ ಆಕೆ ಮದುವೆಯಾಗಿದ್ದೇವೆ. ನಾವು ನಾಲ್ಕು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ಮಾರುತಿ ಲೇಔಟ್‌ನಲ್ಲಿ ಮನೆ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದನು.
just in: ಕಳ್ಳನೆಂದು ತರಕಾರಿ ವ್ಯಾಪಾರಿಯನ್ನು ಹೊಡೆದು ಕೊಂದ ಜನ
ಜ್ಯೋತಿ ಕುಮಾರಿ ಈ ಹಿಂದೆ ಎರಡು ಬಾರಿ ಮನೆಯಿಂದ ಹೊರ ಹೋಗಿದ್ದಳು. ಆದರೆ ಸಂಜೆ ತಾನೇ ವಾಪಸಾಗಿದ್ದಳು. ಕಳೆದ ಕೆಲವು ದಿನಗಳಿಂದ ದೆಹಲಿಗೆ ತೆರಳುವಂತೆ ಆಕೆ ಒತ್ತಾಯಿಸುತ್ತಿದ್ದಳು. ಆದರೆ ಬೆಂಗಳೂರಿನಲ್ಲಿ ತನ್ನ ವ್ಯಾಪಾರ ಇರುವುದರಿಂದ ನಿರಾಕರಿಸಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ಆಗಸ್ಟ್ 3 ರಂದು, ಆಕೆಯ ಫೋನ್ ಸ್ವಿಚ್ ಆಫ್ ಆಗಿದ್ದು, ಮನೆಯಿಂದ ಕಾಣೆಯಾಗಿರುವಂತೆ ಅವನು ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಮನೆಗಳಲ್ಲಿ ಅವಳನ್ನು ಹುಡುಕಿದನು. ಆದರೆ ಅವಳು ಪತ್ತೆಯಾಗಲಿಲ್ಲ ಎಂದು ಅವರ ದೂರಿನಲ್ಲಿ ಹೇಳಲಾಗಿದೆ.

ವಿಚಾರಣೆ ವೇಳೆ ಮಾತು ಬದಲಾಯಿಸುತ್ತಿದ್ದ ಗಂಡ
ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದಾಗ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿತು. ದಂಪತಿ ನಡುವಿನ ಜಗಳಗಳ ಬಗ್ಗೆ ಪೃಥ್ವಿರಾಜನನ್ನು ಕೇಳಿದಾಗ ಹೇಳಿಕೆಯಲ್ಲಿ ಆಗಾಗ್ಗೆ ತನ್ನ ಕಥೆಯನ್ನು ಬದಲಾಯಿಸುತ್ತಿದ್ದನು. ಇದ್ದರಿಂದ ಸಂದೇಹಗೊಂಡ ಪೊಲೀಸರು ಅವನನ್ನು ಬಂಧಿಸಿದರು. ಬಳಿಕ ವಿಚಾರಣೆಯ ಸಮಯದಲ್ಲಿ ಪೃಥ್ವಿರಾಜ್ ಪೊಲೀಸರಿಗೆ ಉದ್ದೇಶಪೂರ್ವಕವಾಗಿ ಸುಳ್ಳು ಹೇಳಿ ತಾನು ಪದವೀಧರೆ ಮದುವೆಯ ಮೊದಲು ತನಗೆ 38 ವರ್ಷ ಇದ್ದರೂ ತನಗೆ 28 ವರ್ಷ ಎಂದು ಸುಳ್ಳು ಹೇಳಿದ್ದಳು. ಆದರೆ ಮದುವೆಯಾದ ನಂತರ ಜ್ಯೋತಿ ಕುಮಾರಿ ಪೃಥ್ವಿರಾಜ್‌ನೊಂದಿಗೆ ದೈಹಿಕ ಸಂಪರ್ಕವನ್ನು ನಿರಾಕರಿಸಿದಳು. ತನ್ನ ವಯಸ್ಸಿನ ಬಗ್ಗೆ ಆಕೆ ಸುಳ್ಳು ಹೇಳಿದ್ದನ್ನು ಕ್ಷಮಿಸಿದ್ದೇನೆ ಎಂದಿದ್ದ

ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಆರೋಪ
ಅಲ್ಲದೆ ಆಕೆ ಸದಾ ಫೋನಿನಲ್ಲಿ ಮಾತನಾಡುತ್ತಿದ್ದಳು. ಇದ್ದರಿಂದ ತಾನು ಬೇಸರಗೊಂಡಿದ್ದೆ ಎಂದು ಪೃಥ್ವಿರಾಜ್ ದೂರಿದ್ದಾನೆ. ಬಳಿಕ ಅವಳು ಬೇರೊಬ್ಬನನ್ನು ಇಷ್ಟಪಟ್ಟಿದ್ದಾಳೆ ಮತ್ತು ಅವನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಅನುಮಾನಿಸಿದ್ದಾನೆ. ಜ್ಯೋತಿ ಕುಮಾರಿಯು ಪೃಥ್ವಿರಾಜ್ ಮತ್ತು ಅವರ ಕುಟುಂಬವನ್ನು ಅವಹೇಳನ ಮಾಡಿ ಕ್ಷುಲ್ಲಕ ನೆಪ ಮಾಡಿಕೊಂಡು ಜಗಳ ಮಾಡುತ್ತಿದ್ದಳು ಎಂದು ದೂರಿದ್ದಾನೆ.

ಮಲ್ಪೆಗೆ ಪ್ರವಾಸಕ್ಕೆ ಹೋಗುವಂತೆ ಕರೆದ
ಇದರಿಂದ ಹತಾಶೆಗೊಂಡ ಪೃಥ್ವಿರಾಜ್ ತನ್ನ ಸ್ನೇಹಿತ ಬಿಹಾರದವನೇ ಆದ ಸಮೀರ್ ಕುಮಾರ್ ಸಹಾಯ ಪಡೆದು ಆಕೆಯನ್ನು ಕೊಲ್ಲಲು ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆಗೆ ಪ್ರವಾಸಕ್ಕೆ ಹೋಗುವಂತೆ ಜ್ಯೋತಿ ಕುಮಾರಿಯನ್ನು ಒಪ್ಪಿಸಿದ್ದಾನೆ. ದಂಪತಿ ಮತ್ತು ಸಮೀರ್ ಆಗಸ್ಟ್ 1 ರಂದು ಮಲ್ಪೆಗೆ ತೆರಳಿದ್ದರು.

ದುಪ್ಪಟ್ಟಾ ಬಳಸಿ ಕತ್ತು ಹಿಸುಕಿ ಕೊಲೆ
ಬಳಿಕ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಶಿರಾಡಿ ಘಾಟ್‌ನಲ್ಲಿ ಕಾರು ನಿಲ್ಲಿಸಿದ ಪೃಥ್ವಿರಾಜ್ ಮತ್ತು ಸಮೀರ್ ಆಕೆಯ ದುಪ್ಪಟ್ಟಾ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದರು. ಬಳಿಕ ಆಕೆಯ ಶವವನ್ನು ಕಾಡಿನಲ್ಲಿ ಎಸೆದು ಬೆಂಗಳೂರಿಗೆ ಮರಳಿದರು. ವಿಚಾರಣೆ ನಡೆಸಿದ ಪೊಲೀಸರು ಸತ್ಯ ಗೊತ್ತಾದ ಮೇಲೆ ಆತನನ್ನು ಸ್ಥಳಕ್ಕೆ ಕರೆದೊಯ್ದು ಜ್ಯೋತಿ ಕುಮಾರಿ ಶವವನ್ನು ಪತ್ತೆಹಚ್ಚಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
Recommended Video