Video Viral: ಬೆಂಗಳೂರು ಮೇಲ್ಸೇತುವೆ ಪಿಲ್ಲರ್ ಒಳಗೆ ಕೂತ ಭೂಪ: ಅಚ್ಚರಿಗೊಂಡ ಜನ
Bengaluru Viral Video: ಬೃಹತ್ ಬೆಂಗಳೂರು ಮಹಾನಗರದಲ್ಲಿ ನಿತ್ಯ ಒಂದಲ್ಲ ಒಂದು ಚಿತ್ರ, ವಿಚತ್ರ ಮತ್ತು ಆಶ್ಚರ್ಯಕಾರಿ ಸಂಗತಿಗಳು ನಡೆಯುತ್ತಲೇ ಇರುತ್ತವೆ. ಇದೀಗ ನಗರದ ಮೇಲ್ಸೇತುವೆ ವೊಂದರ ಪಿಲ್ಲರ್ ನಲ್ಲಿ ಒಳಗಡೆ ಟೊಳ್ಳಾದ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಮಲಗಿದ ವಿಡಿಯೋ ವೈರಲ್ ಆಗಿದೆ. ಇಷ್ಟು ಎತ್ತರ ಪಿಲ್ಲರ್ ಮತ್ತು ವೈಯಡಕ್ಟ್ ಮಧ್ಯ ಈತ ಹೋಗಿದ್ದೇಗೆ? ಎಂಬ ಚರ್ಚೆ ಜಾಲತಾಣದಲ್ಲಿ ಶುರುವಾಗಿದೆ.
ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನಲ್ಲಿರುವ ಫ್ಲೈಓವರ್ ಕಂಬದಲ್ಲಿ ವ್ಯಕ್ತಿಯೊಬ್ಬ ಕಾಣಿಸಿಕೊಂಡಿದ್ದಾರೆ. ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ4ರಲ್ಲಿ ನಿರ್ಮಿಸಲಾದ ಮೇಲ್ಸೇತುವೆ ಇದಾಗಿದೆ. ಈ ಮೇಲ್ಸೇತುವೆ ಒಂದು ಪಿಲ್ಲರ್ ಮೇಲೆ ವಯಡಕ್ಟ್ ಜೋಡಿದ್ದ ಸ್ಥಳದಲ್ಲಿ ಕೊಂಚ ಖಾಲಿ ಜಾಗ ಇರುತ್ತದೆ. ಆ ಟೊಳ್ಳಾದ ಪಿಲ್ಲರ್ ಒಳಗೆ ವ್ಯಕ್ತಿ ಕೂತಿರುವ ವಿಡಿಯೋವನ್ನು ಕರ್ನಾಟಕ ಪೋರ್ಟ್‌ಫೊಲಿಯೋ ಎಕ್ಸ್ ಖಾತೆ ಹಾಗೂ ಇತರ ಹ್ಯಾಂಡಲ್‌ಗಳಿಂದ ಹಂಚಿಕೊಳ್ಳಲಾಗಿದೆ.

ಫ್ಲೈಓವರ್ ಕಂಬದ ಕಿರಿದಾದ ಜಾಗದಲ್ಲಿ ಈ ವ್ಯಕ್ತಿ ಹೇಗೆ ಹೋಗಿ ಕೂತಿದ್ದಾನೆ ಎಂದು ಎಲ್ಲರು ಆಶ್ಚರ್ಯಗೊಂಡಿದ್ದಾರೆ. ಕಳೆಗೆ ಮತ್ತು ಮೇಲ್ಸೇತುವೆ ಮೇಲೆ ವಾಹನಗಳು ಓಡಾಡುತ್ತಿವೆ. ಆತ ಎಲ್ಲರಿಗೂ ಕಾಣವುಂತೆ ಮಲಗಿರುವುದು ವಿಡಿಯೋದಲ್ಲಿ ಕಾಣಿಸಿತ್ತದೆ. ಈ ವಿಡಿಯೋ ಸವಾರರು ಸೇರಿದಂತೆ ಸಾರ್ವಜನಿಕರನ್ನು ಆಘಾತಕ್ಕೀಡು ಮಾಡಿದೆ.
ಈ ಅಸಾಮಾನ್ಯ ದೃಶ್ಯವು ನೋಡುಗರನ್ನು ಗುಂಪನ್ನು ಆಕರ್ಷಿಸಿದೆ. ಇದು ಅಪಾಯಕಾರಿಯಾಗಿದ್ದು, ಇಂತಹ ವರ್ತನೆಯಿಂದ ಆತನ ಜೀವಕ್ಕೆ ಹಾಗೂ ಕೆಳಗೆ ಬಿದ್ದರೆ ಇತರರಿಗೆ ತೊಂದರೆ ಆಗುವ ಸಾಧ್ಯತೆ ಇದೆ. ಆತನನ್ನು ನೋಡದರೆ ಅಲ್ಲಿಯೇ ಕೂತು ವಿಶ್ರಾಂತಿ ಪಡೆಯುತ್ತಿರುವಂತೆ ಕಾಣುತ್ತದೆ. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪೊಲೀಸರಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಹಾಗೂ ಪೀಣ್ಯ ಸಂಚಾರಿ ಪೊಲೀಸರಿಗೆ ಟ್ಯಾಗ್ ಮಾಡಿ ತನಿಖೆಗೆ ಆಗ್ರಹಿಸಿದ್ದಾರೆ.
ಬೆಂಗಳೂರು: ಜಾಲಹಳ್ಳಿ ಕ್ರಾಸ್ನ ಫ್ಲೈಓವರ್ ನ ಕಿರಿದಾದ ಸ್ಥಳದೊಳಗೆ ಒಬ್ಬ ವ್ಯಕ್ತಿ ಮಲಗಿರುವ ದೃಶ್ಯ ವೈರಲ್.... #BengaluruFlyover #JalahalliCross #DangerousSpot #MadManIncident #PublicGathering #RoadSafety #BengaluruNews #KannadaNews #NewsUpdate #OIKannada #Oneindia pic.twitter.com/vSluuOkQGt
— oneindiakannada (@OneindiaKannada) November 13, 2025
ವಸತಿ ರಹಿತ ವ್ಯಕ್ತಿಯು ಪಿಲ್ಲರ್ ಅನ್ನು ಆಶ್ರಯ ತಾಣವಾಗಿ ಮಾಡಿಕೊಂಡಿರಬಹುದೆಂದು ಊಹಿಸಲಾಗಿದೆ. ಇದು ನಗರದ ಮೂಲಸೌಕರ್ಯ, ವಸತಿ ರಹಿತ ಜನರ ಪಾಡನ್ನು ವಿವರಿಸಿ ಹೇಳುವಂತಿದೆ ಎಂಬ ಮಾತುಗಳು ಕೇಳಿ ಬಂದಿವೆ. ಸದ್ಯ ಈ ಘಟನೆ ಪೊಲೀಸರ ಗಮನಕ್ಕೆ ಬಂದಿದ್ದು, ತನಿಖೆ ಬಳಿಕೆ ಆತ ಅಲ್ಲಿಗೆ ಹೋಗಿದ್ದು ಹೇಗೆ? ಏನು ಎಂಬೆಲ್ಲ ಮಾಹಿತಿ ಸಿಗಲಿದೆ.












Click it and Unblock the Notifications