ವ್ಹೀಲ್ ಚೇರ್ ನೀಡದ ಏರ್ ಇಂಡಿಯಾಗೆ ಭಾರಿ ಮೊತ್ತದ ದಂಡ
ಬೆಂಗಳೂರು, ನವೆಂಬರ್ 2: ವಿಕಲಚೇತನ ದಂತ ವೈದ್ಯೆಯೊಬ್ಬರಿಗೆ ಗಾಲಿ ಕುರ್ಚಿ ಒದಗಿಸದ ಏರ್ ಇಂಡಿಯಾ ಸಂಸ್ಥೆಗೆ ಬರೋಬ್ಬರಿ 20 ಲಕ್ಷ ರೂ ದಂಡವನ್ನು ಹೈಕೋರ್ಟ್ ವಿಧಿಸಿದೆ.
ವಿದೇಶ ಪ್ರವಾಸ ಕೈಗೊಂಡಿದ್ದ ಅಂಗವಿಕಲ ದಂತವೈದ್ಯೆಯೊಬ್ಬರಿಗೆ ಗಾಲಿ ಕುರ್ಚಿ ಒದಗಿಸುವ ಪ್ರಕರಣ ಸಂಬಂಧ ಸಂತ್ರಸ್ತೆ ವೈದ್ಯೆ ಮತ್ತವರ ತಾಯಿಗೆ 20 ಲಕ್ಷ ರೂ ಪಾವತಿಸುವಂತೆ ಏರ್ ಇಂಡಿಯಾಗೆ ಆದೇಶಿಸಲಾಗಿದೆ.
ವ್ಹೀಲ್‌ಚೇರ್ ಒದಗಿಸದೆ ದೈಹಿಕ ಹಾಗೂ ಮಾನಸಿಕ ತೊಂದರೆ ಅನುಭವಿಸುವಂತೆ ಮಾಡಲಾಗಿದ್ದು, ಅದಕ್ಕಾಗಿ ತಮಗೆ ಪರಿಹಾರ ನೀಡಲು ಏರ್ ಇಂಡಿಯಾ ಲಿಮಿಟೆಡ್‌ಗೆ ನಿರ್ದೇಶಿಸುವಂತೆ ಕೋರಿ ಡಾ. ಎಸ್‌ಜೆ ರಾಜಲಕ್ಷ್ಮೀ ಮತ್ತವರ ತಾಯಿ ಡಾ. ಎಸ್. ಶೋಭಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಇತ್ತೀಚೆಗೆ ಈ ಆದೇಶ ಮಾಡಿದ್ದಾರೆ.

ಡಾ. ರಾಜಲಕ್ಷ್ಮೀ ಮತ್ತು ಅವರ ತಾಯಿ ಡಾ. ಶೋಭಾ 2016ರ ಜುಲೈ 19ರಂದು ಬೆಂಗಳೂರಿನಿಂದ ಲಂಡನ್‌ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದರು. ಅಂಗವಿಕಲೆಯಾದ ಕಾರಣ ಡಾ. ರಾಜಲಕ್ಷ್ಮೀ ಅವರು ವ್ಹೀಲ್‌ಚೇರ್ ತೆಗೆದುಕೊಂಡು ಹೋಗಿದ್ದರು. ಆದರೆ, ವಿಮಾನದಲ್ಲಿ ಪ್ರಯಾಣಿಸುವಾಗ ಏರ್ ಇಂಡಿಯಾ , ವ್ಹೀಲ್‌ಚೇರ್ ನೀಡಿರಲಿಲ್ಲ. ಲಂಡನ್ ತಲುಪಿದ ನಂತರವೂ ವ್ಹೀಲ್ ಚೇರ್ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದ ರಾಜಲಕ್ಷ್ಮೀ ಅವರು , ಲಂಡನ್‌ಗೆ ತೆರಳಿದ ನಂತರವೂ ವ್ಹೀಲ್ ಚೇರ್ ನೀಡಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಬೆಂಗಳೂರಿನಿಂದಲೇ ವ್ಹೀಲ್‌ಚೇರ್ ಕಳುಹಿಸಿಕೊಟ್ಟಿಲ್ಲ ಎಂದು ವಿಮಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದರು.ಹೀಗಿದ್ದರೂ ಬೇರೊಂದು ವ್ಹೀಲ್‌ಚೇರ್ ಒದಗಿಸದೆ ತಡರಾತ್ರಿವರೆಗೂ ಕಾಯಿಸಿದ್ದರು.ಇದರಿಂದ ಲಂಡನ್ ಸ್ಕಾಟ್‌ಲ್ಯಾಂಡ್ ಪ್ರವಾಸ ತಪ್ಪಿತ್ತು.
ಅಲ್ಲದೆ ಬೇರೊಂದು ಟ್ರಾವೆಲ್ ಏಜೆನ್ಸಿಗೆ ಹಣ ಪಾವತಿಸಿ ಬೆಂಗಳೂರಿಗೆ ಹಿಂದಿರುಗಿದೆ ಎಂದು ಹೇಳಿದ್ದರು.












Click it and Unblock the Notifications