Get Updates
Get notified of breaking news, exclusive insights, and must-see stories!

ಬೆಂಗಳೂರು: ಬಸವನಗುಡಿ ದೊಡ್ಡ ಗಣೇಶನ ದೇವಸ್ಥಾನದ ಗೋಪುರದಲ್ಲಿ ಬಿರುಕು

ಬೆಂಗಳೂರು, ಡಿಸೆಂಬರ್‌ 04: ಬೆಂಗಳೂರಿನ ಐತಿಹಾಸಿಕ ದೇವಾಲಯ ಬಸವನಗುಡಿ ದೊಡ್ಡ ಗಣಪನ ದೇವಸ್ಥಾನದ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಹೆಚ್ಚಾಗಿದೆ. ಕಳೆದ 8 ವರ್ಷಗಳಿಂದ ದೇವಸ್ಥಾನಕ್ಕೆ ಸುಣ್ಣ, ಬಣ್ಣವೇ ಆಗಿಲ್ಲ. ಹೆಸರಿಗೆ ಮಾತ್ರ ಇದು ಐತಿಹಾಸಿಕ ದೇವಾಲಯವಾಗಿದ್ದು, ಸರಿಯಾದ ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ.

ಬಸವನಗುಡಿ ದೊಡ್ಡ ಗಣೇಶ ದೇವಸ್ಥಾನದ ಗೋಪುರದಲ್ಲಿ ಬಿರುಕು ಬಿಟ್ಟಿದ್ದು, ಈ ಬಗ್ಗೆ ಮೂರು ತಿಂಗಳ ಹಿಂದೆಯೇ ದೇಗುಲದ ಆಡಳಿತ ಮಂಡಳಿ ಪುರಾತತ್ವ ಇಲಾಖೆಗೆ ಪತ್ರ ಬರೆದಿದೆ. ರಾಜ್ಯ ಸರ್ಕಾರದಿಂದಾಗಲೀ, ಇಲಾಖೆಯಿಂದಾಗಲೀ ಯಾವುದೇ ಕ್ರಮಕೈಗೊಂಡಿಲ್ಲ ಎಂದು ದೇವಸ್ಥಾನದ ಆಡಳಿತ ಮಂಡಳಿ ಆರೋಪಿಸಿದೆ.

A Crack In The Tower Of Basavanagudi Dodda Ganapathi Temple

ದೊಡ್ಡ ಬಸವಣ್ಣ ದೇವಾಲಯವು ಪುರಾತತ್ವ ಇಲಾಖಾ ವ್ಯಾಪ್ತಿಗೆ ಒಳಪಟ್ಟಿದೆ. ದೇವಾಲಯದ ಆಡಳಿತವನ್ನು ಧಾರ್ಮಿಕ ದತ್ತಿ ಇಲಾಖಾ ವತಿಯಿಂದ ಕೈಗೊಳ್ಳಲಾಗುತ್ತಿದೆ. ದೇವಾಲಯದ ವಿಮಾನ ಗೋಪುರ ದಕ್ಷಿಣ ದಿಕ್ಕಿನ ಕೆಲವು ಭಾಗದಲ್ಲಿ ಬಿರುಕು ಬಿಟ್ಟಿದೆ. ತಜ್ಞರ ಅಭಿಪ್ರಾಯದಂತೆ ದೇವಾಲಯದ ಸಣ್ಣ-ಪುಟ್ಟ ರಿಪೇರಿ ಕಾಮಗಾರಿಯನ್ನು ನಡೆಸುವಂತೆ ಪುರಾತತ್ವ ಇಲಾಖೆಗೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.

ಅಲ್ಲದೇ ದೇವಾಲಯದ ಗರ್ಭಗುಡಿ ಮತ್ತು ರಾಜಗೋಪುರ ಮೇಲ್ಬಾಗದಲ್ಲಿ ಗಿಡಗಳು ಬೆಳೆದಿದ್ದು, ಇದರಿಂದ ದೇವಸ್ಥಾನದ ಕಟ್ಟಡಕ್ಕೆ ಹಾನಿಯಾಗಲಿದೆ. ಹೀಗಾಗಿ ಗೋಪುರದ ದುರಸ್ಥಿ ಕಾಮಗಾರಿಯನ್ನು ಹಾಗೂ ದೇವಾಲಯದ ಗುಡಿ ಸ್ವಚ್ಛತೆ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಆಡಳಿತ ಮಂಡಳಿಯಿಂದ ಮನವಿ ಮಾಡಲಾಗಿದ್ದು, ಯಾವುದೇ ಕ್ರಮ ಈವರೆಗೂ ಆಗಿಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಲಿದೆ. ಈ ವೇಳೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಹೀಗಾಗಿ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಆತಂಕ ವ್ಯಕ್ತಪಡಿಸಿದೆ.

ಬಸವನಗುಡಿ ದೊಡ್ಡ ಗಣೇಶ ದೇವಸ್ಥಾನದ ಬಗ್ಗೆ ಮಾಹಿತಿ..!

ದೊಡ್ಡ ಗಣಪತಿ ದೇವಸ್ಥಾನವು ಬೆಂಗಳೂರಿನ ಬಸವನಗುಡಿ ದಕ್ಷಿಣ ಬೆಂಗಳೂರು ಪ್ರದೇಶದಲ್ಲಿದೆ. ಇದು ಗಣೇಶನ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ದೊಡ್ಡ ಗಣಪತಿಯು ಕರ್ನಾಟಕದ ದೊಡ್ಡ ಗಣೇಶನ ವಿಗ್ರಹವಾಗಿದೆ. ಈ ಜನಪ್ರಿಯ ದೇವಾಲಯದ ಬೃಹತ್ ಗಣೇಶ 18 ಅಡಿ ಎತ್ತರ ಮತ್ತು 16 ಅಡಿ ಅಗಲವಿದೆ. ದೊಡ್ಡ ಗಣೇಶ ದೇವಸ್ಥಾನವನ್ನು ಶಕ್ತಿ ಗಣಪತಿ ಮತ್ತು ಸತ್ಯ ಗಣಪತಿ ಎಂದು ಸಹ ಕರೆಯುತ್ತಾರೆ.

A Crack In The Tower Of Basavanagudi Dodda Ganapathi Temple

ಈ ದೇವಾಲಯದಲ್ಲಿ ನೂರು ಕೆ.ಜಿ ಬೆಣ್ಣೆಯನ್ನು ಬಳಸಿ ಮಾಡುವ ಅಲಂಕಾರ ಬಹಳ ವಿಶೇಷವಾಗಿದೆ. ಈ ದೇವಾಲಯವು ದೇಶಾದ್ಯಂತ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಬೆಳಗ್ಗೆ 6-30 ರಿಂದ ಮಧ್ಯಾಹ್ನ 1-00 ರವರೆಗೆ ಮತ್ತು ಮತ್ತೆ ಸಂಜೆ 4-30 ರಿಂದ ರಾತ್ರಿ 8-00 ರವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿದೆ. ಇಲ್ಲಿ ನಡೆಯುವ ಕಡಲೆ ಕಾಯಿ ಪರಿಷೆಯು ಬೆಂಗಳೂರಿನ ಅತಿ ದೊಡ್ಡ ಹಬ್ಬಗಳಲ್ಲಿ ಒಂದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+