Bengaluru Traffic: ಸಂಚಾರ ದಟ್ಟಣೆ ಸಮಸ್ಯೆಗೆ ಹೊಸ ಪರಿಹಾರ ಕಂಡುಕೊಂಡ ವ್ಯಕ್ತಿ: ವಿಡಿಯೋ ವೈರಲ್
ಬೆಂಗಳೂರು, ಮಾರ್ಚ್ 02: ಬೆಂಗಳೂರಿನಂತಹ ಮಹಾನಗರದಲ್ಲಿ ಸಂಚಾರ ದಟ್ಟಣೆಯದ್ದೆ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರವೆಂಬಂತೆ ವ್ಯಕ್ತಿಯೊಬ್ಬರು ನವೀನ ಪರಿಹಾರ ಕಂಡುಕೊಂಡಿದ್ದಾರೆ. ಅದರ ವಿಡಿಯೋ ನೋಡಿದರವರು ಮಿಶ್ರ ಪ್ರತಿಕ್ರಿಯ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ರಸ್ತೆ ಸುರಕ್ಷತೆ ಬಗ್ಗೆ ಕಳವಳವು ಅದರಲ್ಲಿ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಹೊರ ವರ್ತುಲ್ ರಸ್ತೆಯಲ್ಲಿ ನಡೆದ ಘಟನೆಯು ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಗರಾದ್ಯಂತ ಸಂಚಾರ ದಟ್ಟಣೆ ತೀರಾ ಹಳೆಯ ಸಮಸ್ಯೆಯಂತಾಗಿದೆ. ನಗರದಲ್ಲಿ ಅಸ್ತವ್ಯಸ್ತವಾಗಿರುವ ಹೊರ ವರ್ತುಲ ರಸ್ತೆ (ORR) ಯಲ್ಲಿ ವ್ಯಕ್ತಿಯೊಬ್ಬ ಯುನಿಸೈಕಲ್ ಸವಾರಿ ಮಾಡಿದ್ದಾರೆ. ಇದನ್ನು ನೋಡಿದವರು ಬೆಂಗಳೂರಿನ ಟ್ರಾಫಿಕ್ ಜಾಮ್‌ಗೆ ಇದೊಂದು ಪರಿಹಾರ ಎಂದು ಹೇಳಿದ್ದಾರೆ. ವ್ಯಕ್ತಿಯ ಈ ಯುನಿ ಸೈಕಲ್ ಸವಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಬೆಂಗಳೂರು ವಿಷುವಲ್ಸ್ ಇನ್‌ಸ್ಟಾಗ್ರಾಮ್ ಪೇಜಿನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ಬೈಕ್ ಸವಾರನಂತೆ ಹೆಲ್ಮೆಟ್ ಧರಿಸಿ, ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸವಾರಿ ಮಾಡುತ್ತಿರುವುದು ಕಾಣಿಸುತ್ತದೆ. ಇದನ್ನು ವಾಹನದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟಿದ್ದಾರೆ.
ಈ ಯುನಿಸೈಕಲ್ ಸವಾರು, ಬೆಂಗಳೂರಿನ ಕುಖ್ಯಾತ ಸಂಚಾರ ಸಮಸ್ಯೆಗಳಿಗೆ ನವೀನ ಪರಿಹಾರವಾಗುತ್ತದೆಯೇ. ಇಲ್ಲ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆಯೋ ಎಂಬ ಚರ್ಚೆ ಹುಟ್ಟು ಹಾಕಿದೆ. ಒಂದು ವೇಳೆ ಇದು ಬೆಂಗಳೂರಿನ ಸಂಚಾರ ಭವಿಷ್ಯಕ್ಕೆ ನಾಂದಿ ಹಾಡಿದರೆ ಹೇಗೆ?. ಇಂತಹ ಆವಿಷ್ಕಾರಗಳು ಹಾನಿಕಾರ ಎಂದೆಲ್ಲ ಮಾತನಾಡುತ್ತಿದ್ದಾರೆ.
ಬೆಂಗಳೂರಿನ ಸಂಚಾರ ಸಮಸ್ಯೆಗೆ ಪೊಲೀಸರು, ಸರ್ಕಾರ ಏನೇ ಕ್ರಮ ಕೈಗೊಂಡರು ಸಮಸ್ಯೆ ಹೀಗೆ ಸಾಗುತ್ತದೆ ಎಂದು ಎಲ್ಲರಿಗೂ ಮನದಟ್ಟಾಗಿದೆ. ಬೇರಾವುದು ಪರಿಹಾರ ಇಲ್ಲ ಎಂದು ಗೊತ್ತಾದಾಗ ಇಂತಹ ಪರಿಹಾರಗಳನ್ನು ಜನರೇ ಕಂಡು ಕೊಳ್ಳುತ್ತಿದ್ದಾರೆ ಎಂದನಿಸುತ್ತದೆ.
ವಿಡಿಯೋ ನೋಡಿದವರ ಪೈಕಿ ಒಬ್ಬಾತ, ಈ ಯುನಿಸೈಕಲ್ ಸವಾರಿ ಬೆಂಬಲಿಸಿದ್ದಾರೆ. ಮತ್ತೊಬ್ಬರು ಪ್ರತಿ ಆವಿಷ್ಕಾರದಲ್ಲೂ ಅಪಾಯ ಇದ್ದೆ ಇರುತ್ತದೆ. ಈಚಿಕ್ಕ ಉನಿ ಸೈಕಲ್ ಒಂದು ವೇಳೆ ತೆರೆದ ಕೊಳವೆ ಬಾವಿಗೆ ಬಿದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ರಸ್ತೆಗುಂಡಿಗಳು ನಗರದಲ್ಲಿ ರಾರಾಜಿಸುತ್ತವೆ. ಒಂದು ವೇಳೆ ರಸ್ತೆಯಲ್ಲಿ ಮ್ಯಾನ್‌ಹೋಲ್ ತೆರೆದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.
ಈ ವಿಡಿಯೋದಲ್ಲಿನ ಸವಾರಿ ಅಸಂಬದ್ಧವಾಗಿದೆ. ಸಾಹಸಕ್ಕಾಗಿ, ಪ್ರಚಾರಕ್ಕೆ ಹೀಗೆ ಮಾಡಿರಲೂ ಬಹುದು ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ. ಇಂತಹ ಸಾಹಸಗಳು ಬೆಂಗಳೂರಿನ ರಸ್ತೆಗಳಲ್ಲಿ ಅಪಾಯಕಾರಿ. ರಸ್ತೆ ಗುಂಡಿ ಎದುರಾದರೆ ಏನು ಗತಿ! ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈತ ಇದರಲ್ಲಿ ಹೋದರೆ ಮುಂದಿನ ವರ್ಷವೇ ಗಮ್ಯಸ್ಥಾನ ತಲುಪತ್ತಾರೆ ಎಂದು ಕೆಲವರು ಹಾಸ್ಯ ಮಾಡಿದ್ದಾರೆ.












Click it and Unblock the Notifications