ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಒಂದೇ ದಿನ 99 ಕೊರೊನಾ: ಸೋಂಕಿತರಲ್ಲಿ 21 ಮಕ್ಕಳು

|
Google Oneindia Kannada News

ಬೆಂಗಳೂರು, ಮೇ 18: ಕರ್ನಾಟಕದಲ್ಲಿ ಇಂದು ಒಂದೇ ದಿನ 99 ಮಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢವಾಗಿದೆ. ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ.

ಲಾಕ್ ಡೌನ್ ಬಹುತೇಕ ಸಡಲಿಗೊಳಿಸುವ ಮುನ್ನವೇ ಕೊರೊನಾ ತೀವ್ರ ಹರಡುವಿಕೆ ಹೆಚ್ಚಾಗಿದೆ. ಮೊದಲ ಬಾರಿ ಒಂದೇ ದಿನದಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳ ವರದಿಯಾಗಿವೆ. ಸೋಂಕಿತರಲ್ಲಿ 21 ಮಕ್ಕಳು ಸೇರಿದ್ದು, ಆತಂಕಕ್ಕೆ ಕಾರಣವಾಗಿದೆ.

ಈ 4 ರಾಜ್ಯದವರು ಕರ್ನಾಟಕಕ್ಕೆ ಎಂಟ್ರಿಯಾಗುವಂತಿಲ್ಲ!ಈ 4 ರಾಜ್ಯದವರು ಕರ್ನಾಟಕಕ್ಕೆ ಎಂಟ್ರಿಯಾಗುವಂತಿಲ್ಲ!

ಕಲಬುರಗಿ ಆರು ತಿಂಗಳ ಮಗು ಮಹಾರಾಷ್ಟ್ರದಿಂದ ಮರಳಿದ್ದು, ಆ ಮಗುವಿಗೆ ಕೊರೊನಾ ಪಾಸಿಟಿವ್ ಇದೆ. ಕಲಬುರಗಿಯಲ್ಲಿ 10 ವರ್ಷದ ಕೆಳಗಿನ ಐದು ಮಕ್ಕಳಿಗೆ ಸೋಂಕು ತಗುಲಿದೆ.

99 New Cases Coronavirus Reported In Karnataka Today

ಉಳಿದಂತೆ, ವಿಜಯಪುರದಲ್ಲಿ 10 ವರ್ಷದ ಮಗು, ಗದಗದಲ್ಲಿ 12 ವರ್ಷದ ಮಗು, ಉತ್ತರ ಕನ್ನಡದಲ್ಲಿ 2 ವರ್ಷದ ಮಗು, ಮಂಡ್ಯದಲ್ಲಿ 4 ವರ್ಷದ ಮಗುವಿಗೆ ಸೋಂಕು ದೃಢವಾಗಿದೆ.

ಹೊಸದಾಗಿ ರಾಯಚೂರಿಗೆ ಕೊರೊನಾ ಕಾಲಿಟ್ಟಿದೆ. ಆರು ಮಂದಿಗೆ ಸೋಂಕು ಇರುವುದು ಪತ್ತೆಯಾಗಿದೆ. ಇಂದು ಹಾಸನದ ನಾಲ್ಕು ಜನರಿಗೆ ಕೊರೊನಾ ಸೋಂಕು ತಗುಲಿದೆ.

ಕರ್ನಾಟಕದಲ್ಲಿ ಇಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 1246ಕ್ಕೆ ಏರಿಕೆಯಾಗಿದೆ. ಇಂದು 99 ಪಾಸಿಟಿವ್ ಕೇಸ್‌ಗಳು ಇಂದು ಹೊಸದಾಗಿ ಪತ್ತೆದಾಗಿದೆ. 37 ಸಾವು ಸಂಬವಿಸಿದೆ. 530 ಜನರು ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ ಅತಿ ಸೋಂಕಿತರು ಇದ್ದಾರೆ.

English summary
Coronavirus in karnataka: 99 new cases coronavirus reported in karnataka today total cases increased to 1246.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X