ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯಗಳಿಗೆ 98.87 ಲಕ್ಷ ರೆಮ್‌ಡಿಸಿವಿರ್ ವೈಯಲ್ಸ್ ಹಂಚಿಕೆ

|
Google Oneindia Kannada News

ಬೆಂಗಳೂರು, ಜೂನ್ 2: ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಕೇಂದ್ರ ಸರಕಾರದ ಸತತ ಪ್ರಯತ್ನದಿಂದಾಗಿ ದೇಶಾದ್ಯಂತ ಕೋವಿಡ್-19 ಔಷಧಿಗಳ ಪೂರೈಕೆ - ಬೇಡಿಕೆಯ ಸಮತೋಲನ ಸ್ಥಿರವಾಗಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಹೇಳಿದ್ದಾರೆ.

ಏಪ್ರಿಲ್ 21 ರಿಂದ ಮೇ 30ರವರೆಗೆ ರೆಮ್‌ಡಿಸಿವಿರ್‌ನ ಒಟ್ಟು 98.87 ಲಕ್ಷ ಬಾಟಲುಗಳನ್ನು (ವೈಯಲ್) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದೇ ವೇಳೆ ರೆಮ್‌ಡಿಸಿವಿರ್ ಉತ್ಪಾದನೆಯು ಹತ್ತು ಪಟ್ಟು ಹೆಚ್ಚಾಗಿದೆ ಮತ್ತು ಬೇಡಿಕೆಗಿಂತ ಹೆಚ್ಚು ಪೂರೈಕೆಗೆ ಕಾರಣವಾಗಿದೆ ಎಂದು ತಿಳಿಸಿದರು.

ಮಾರುಕಟ್ಟೆಗೆ ನ್ಯಾನೋ ರಸಗೊಬ್ಬರದಿಂದ ಹೊಸ ಕೃಷಿ ಕ್ರಾಂತಿ- ಸದಾನಂದ ಗೌಡಮಾರುಕಟ್ಟೆಗೆ ನ್ಯಾನೋ ರಸಗೊಬ್ಬರದಿಂದ ಹೊಸ ಕೃಷಿ ಕ್ರಾಂತಿ- ಸದಾನಂದ ಗೌಡ

ತೀವ್ರಗತಿಯ ಉತ್ಪಾದನೆಯೊಂದಿಗೆ ಜೂನ್ ಅಂತ್ಯದವರೆಗೆ 91 ಲಕ್ಷ ಬಾಟಲುಗಳನ್ನು ಪೂರೈಸಲು ನಾವು ಯೋಜಿಸುತ್ತಿದ್ದೇವೆ ಎಂದು ಹೇಳಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, 2021ರ ಏಪ್ರಿಲ್ 25 ರಿಂದ ಮೇ 30ರವರೆಗೆ ಸಿಪ್ಲಾ 400 ಮಿ.ಗ್ರಾಂನ 11,000 ಬಾಟಲುಗಳು ಮತ್ತು 80 ಮಿ.ಗ್ರಾಂ ಟೋಸಿಲಿಜುಮಾಬ್‌ನ 50,000 ಬಾಟಲುಗಳನ್ನು ಆಮದು ಮಾಡಿಕೊಂಡಿದೆ ಎಂದು ಮಾಹಿತಿ ನೀಡಿದರು.

 98.87 Lakhs Of Remdesivir Vials Distributed To States: Union Minister DV Sadananda Gowda

ಇದಲ್ಲದೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 400 ಮಿ.ಗ್ರಾಂನ 1002 ಬಾಟಲುಗಳು ಮತ್ತು 80 ಮಿ.ಗ್ರಾಂನ 50,024 ಬಾಟಲುಗಳನ್ನು ಮೇ ತಿಂಗಳಲ್ಲಿ ದೇಣಿಗೆ ಮೂಲಕ ಸ್ವೀಕರಿಸಿದೆ. ಇದಲ್ಲದೆ, 80 ಮಿ.ಗ್ರಾಂನ 20,000 ಬಾಟಲುಗಳು ಮತ್ತು 200 ಮಿ.ಗ್ರಾಂನ 1000 ಬಾಟಲುಗಳು ಜೂನ್‌ನಲ್ಲಿ ಬರುವ ಸಾಧ್ಯತೆಯಿದೆ ಎಂದು ಡಿ.ವಿ ಸದಾನಂದಗೌಡ ತಿಳಿಸಿದರು.

2021 ಮೇ 11ರಿಂದ ಮೇ 30 ರವರೆಗೆ ಆಂಫೊಟೆರಿಸಿನ್-ಬಿಯ ಸುಮಾರು 2,70,060 ಬಾಟಲುಗಳನ್ನು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶ ಮತ್ತು ಕೇಂದ್ರ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಕೇಂದ್ರ ಸಚಿವ, ಇದಲ್ಲದೆ ಮೇ ಮೊದಲ ವಾರದಂದು ತಯಾರಕರು ರಾಜ್ಯಗಳಿಗೆಂದು ತಯಾರಿಸಿದ 81,651 ಬಾಟಲುಗಳ ಹೆಚ್ಚುವರಿ ಸರಬರಾಜಾಗಿದೆ ಎಂದರು.

ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ಇತರ ಔಷಧಿಗಳ ಉತ್ಪಾದನೆ, ಪೂರೈಕೆ ಮತ್ತು ದಾಸ್ತಾನಿನ ಪರಿಸ್ಥಿತಿ ಅಂದರೆ ಡೆಕ್ಸಮೆಥಾಸೊನ್, ಮೀಥೈಲ್ಪ್ರೆಡ್ನಿಸೋಲೋನ್, ಎನೋಕ್ಸಪರಿನ್, ಫಾವಿಪಿರವಿರ್, ಐವರ್ಮೆಕ್ಟಿನ್, ಡೆಕ್ಸಮೆಥಾಸೊನ್ ಮಾತ್ರೆಗಳನ್ನು ಸಹ ವಾರಕ್ಕೊಮ್ಮೆ ಪರಿಶೀಲಿಸಲಾಗುತ್ತಿದೆ. ಉತ್ಪಾದನೆಯನ್ನು ಹೆಚ್ಚಿಸಲಾಗಿದ್ದು, ಬೇಡಿಕೆಯನ್ನು ಪೂರೈಸಲು ಲಭ್ಯವಿದೆ ಎಂದು ಹೇಳಿದರು.

Recommended Video

ಖಡಕ್ ಜಿಲ್ಲಾಧಿಕಾರಿ Rohini Sindhuri ಇಂಟ್ರೆಸ್ಟಿಂಗ್ ಕಹಾನಿ | Oneinda Kannada

ಔಷಧದ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗುವಂತೆ ಅಸ್ತಿತ್ವದಲ್ಲಿರುವ ಮತ್ತು ಹೊಸ ತಯಾರಕರೊಂದಿಗೆ ಕೋವಿಡ್-19 ಔಷಧಿಗಳ ಲಭ್ಯತೆಯನ್ನು ಸರ್ಕಾರ ನಿರಂತರವಾಗಿ ಪರಿಶೀಲಿಸುತ್ತಿದೆ ಎಂದು ಕೇಂದ್ರ ರಸಗೊಬ್ಬರ ಹಾಗೂ ರಸಾಯನಿಕ ಸಚಿವ ಡಿ.ವಿ ಸದಾನಂದಗೌಡ ಭರವಸೆ ನೀಡಿದರು.

English summary
From April 21 to May 30, a total of 98.87 lakh vials of Remdesivir have been distributed to the States and Union Territories, Union Minister DV Sadananda Gowda said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X