Land Acquisition: ಬೆಂಗಳೂರು ಸಮೀಪದಲ್ಲಿ ಸೆಮಿಕಂಡಕ್ಟರ್ ನಿರ್ಮಾಣಕ್ಕೆ 94 ಎಕರೆ ಭೂಸ್ವಾಧೀನ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಹಲವು ಹೊಸ ಯೋಜನೆಗಳನ್ನು ರೂಪಿಸುತ್ತಿದೆ. ಇದರೊಂದಿಗೆ ಬೆಂಗಳೂರು ಹಾಗೂ ಬೆಂಗಳೂರು ಸಮೀಪದ ಜಿಲ್ಲೆಗಳ ಅಭಿವೃದ್ಧಿಗೂ ಯೋಜನೆ ರೂಪಿಸಲಾಗುತ್ತಿದೆ. ಇದೀಗ ಬೆಂಗಳೂರು ಹಾಗೂ ಮೈಸೂರು ಹೆದ್ದಾರಿ ಪಕ್ಕದಲ್ಲೇ ಬೃಹತ್ ಯೋಜನೆಯೊಂದನ್ನು ಜಾರಿ ಮಾಡುವುದಕ್ಕೆ ಸಂಬಂಧಿಸಿದಂತೆ ಬಿಗ್ ಅಪ್‌ಡೇಟ್ ಬಂದಿದೆ. ಈ ಯೋಜನೆಗೆ ಬರೋಬ್ಬರಿ 94 ಎಕರೆ ಭೂಸ್ವಾಧೀನ ನಡೆಸಲು ಸರ್ಕಾರ ಮುಂದಾಗಿದೆ.
ಬೆಂಗಳೂರು ಕೇಂದ್ರಿತ ಅಭಿವೃದ್ಧಿಯೊಂದಿಗೆ ಬೆಂಗಳೂರಿನ ಸುತ್ತಮುತ್ತ ಹಾಗೂ ರಾಜ್ಯದ ಟಯರ್ 2 ಸಿಟಿಯಲ್ಲೂ ಅಭಿವೃದ್ಧಿ ಯೋಜನೆಗಳನ್ನು ರಾಜ್ಯ ಸರ್ಕಾರವು ರೂಪಿಸಿಕೊಳ್ಳುತ್ತಿದೆ. ಇದೀಗ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಸೆಮಿ ಕಂಡಕ್ಟರ್ ಸ್ಥಾಪನೆ ಮಾಡುವುದಕ್ಕೆ ಮುಂದಾಗಿದೆ. ಇದೀಗ ಅಮೆರಿಕ ಮೂಲದ ಸ್ಯಾನ್ಸನ್ ಗ್ರೂಪ್ ಕಂಪನಿಯು ಸೆಮಿ ಕಂಡಕ್ಟರ್ ಫ್ಯಾಬ್ರಿಕೇಷನ್ ಯೂನಿಟ್ ಸ್ಥಾಪನೆಗೆ ಬೆಂಗಳೂರು-ಮೈಸೂರು ಹೆದ್ದಾರಿ ಪಕ್ಕದಲ್ಲೇ ಇರುವ ಜಾಗವನ್ನು ಗುರುತಿಸಲಾಗಿದೆ ಎಂದು Asianet Suvarna ವರದಿ ಮಾಡಿದೆ.

ಈ ಮೂಲಕ ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ ಮತ್ತೊಂದು ಪ್ರಮುಖ ಯೋಜನೆ ಜಾರಿ ಆಗಲಿದೆ. ಇದರಿಂದ ಎರಡೂ ನಗರಗಳಿಗೂ ಭಾರೀ ಲಾಭವಾಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಹೋಬಳಿ ರಾಗಿಮುದ್ದನಹಳ್ಳಿ ಗ್ರಾಮದ ಸರ್ವೆ ನಂ.81ರಲ್ಲಿ 72.31 ಎಕರೆ ಪ್ರದೇಶ ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಸರ್ವೆ ನಂ.93ರಲ್ಲಿ 21.22 ಎಕರೆ ಹುಲ್ಲುಬನ್ನಿ ಜಾಗ ಸೇರಿದಂತೆ ಒಟ್ಟು 94.13 ಎಕರೆ ಜಾಗವನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದ ಈ ಭಾಗದಲ್ಲಿ ಭೂಮಿ ಬೆಲೆ ಹೆಚ್ಚಳವಾಗುವುದರೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುವ ಸಾಧ್ಯತೆಯೂ ಇದೆ.
ಏನಿದು ಸೆಮಿ ಕಂಡಕ್ಟರ್
ಇನ್ನು ಬೆಂಗಳೂರು - ಮೈಸೂರು ಹೆದ್ದಾರಿ ಸಮೀಪದಲ್ಲೇ ನಿರ್ಮಾಣವಾಗುತ್ತಿರುವ ಸೆಮಿ ಕಂಡಕ್ಟರ್‌ನಲ್ಲಿ ಸಿಲಿಕಾನ್ ಕಾರ್ಬೈಡ್ ಸೆಮಿಕಂಡಕ್ಟರ್ ಚಿಪ್ಗಳು, ಫ್ಯಾಬ್ರಿಕೇಷನ್ ಯೂನಿಟ್‌ನಲ್ಲಿ ಇನ್ಫ್ರಾರೆಡ್ ಹಾಗೂ ಗ್ಯಾಲಿಯಂ ನೈಟ್ರೇಡ್ ಸೇರಿದಂತೆ ಹಲವು ಉತ್ಪನ್ನಗಳು ತಯಾರಾಗಲಿವೆ. ಕರ್ನಾಟಕದಲ್ಲಿ ಹೊಸ ಸೆಮಿಕಂಡಕ್ಟರ್‌ಗಳ ನಿರ್ಮಾಣ ಅಥವಾ ಅಭಿವೃದ್ಧಿಯಿಂದಾಗಿ ಉದ್ಯೋಗ ಸೃಷ್ಟಿ ಆಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕರ್ನಾಟಕದ ವಿವಿಧ ಪ್ರಮುಖ ಯೋಜನೆಗಳು
ಕರ್ನಾಟಕ ಸರ್ಕಾರವು ಬೆಂಗಳೂರಿನ ಬಳಿಯ KWIN ನಗರದಲ್ಲಿ 200 ಎಕರೆ ವಿಸ್ತೀರ್ಣದ ಹೊಸ ಸೆಮಿಕಂಡಕ್ಟರ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸುವ ಯೋಜನೆಗೂ ಮುಂದಾಗಿದೆ. ತೈವಾನ್‌ನ ಅಲೀಜಿಯನ್ಸ್ ಗ್ರೂಪ್‌ನಿಂದ 1,000 ಕೋಟಿ ಹೂಡಿಕೆಯೊಂದಿಗೆ ಹೊಸ ಭಾರತ - ತೈವಾನ್ ಕೈಗಾರಿಕಾ ಕಾರಿಡಾರ್ ಆರಂಭಕ್ಕೂ ಸಿದ್ಧತೆ ನಡೆದಿದೆ.
ಕ್ವಿನ್ ಸಿಟಿ ಸೆಮಿಕಂಡಕ್ಟರ್ ಪಾರ್ಕ್ ಜ್ಞಾನ, ಯೋಗಕ್ಷೇಮ ಮತ್ತು ಪ್ರಗತಿ ಆಧಾರ ಮೇಲೆ ನಗರದಲ್ಲಿ 200 ಎಕರೆ ಪಾರ್ಕ್ ಜಾಗವನ್ನು ಮೀಸಲಿರಿಸಲಾಗಿದೆ. ರಾಜ್ಯ ಸರ್ಕಾರವು 23,000 ಕೋಟಿಗೂ ಹೆಚ್ಚು ಹೂಡಿಕೆಯೊಂದಿಗೆ ಮೂರು ಮಹತ್ವದ ಯೋಜನೆಗಳನ್ನು ಜಾರಿ ಮಾಡುತ್ತಿದೆ.












Click it and Unblock the Notifications