• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತ ಬಂದ್: ರಾಷ್ಟ್ರಪತಿಗೆ 9 ಲಕ್ಷ ರೈತರಿಂದ ಪೋಸ್ಟ್‌ಕಾರ್ಡ್ ರವಾನೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 08: ಒಟ್ಟು 9 ಲಕ್ಷ ರೈತರು ರಾಷ್ಟ್ರಪತಿಗೆ ಪೋಸ್ಟ್‌ಕಾರ್ಡ್ ಕಳುಹಿಸಿದ್ದು, ಇದರ ಮೂಲಕ ಭಾರತ ಬಂದ್‌ಗೆ ಹಾಗೂ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

   9 ಲಕ್ಷ ರೈತರಿಂದ ಸಹಿ ಹಾಕಲಾದ ಪೊಸ್ಟ್ ಕಾರ್ಡ್ ನಲ್ಲಿ ಏನಿತ್ತು | Oneindia Kannada

   ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ರೈತ ವಿರೋಧಿ ಕರಾಳ ಕಾಯ್ದೆಗಳನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಸಹಿ ಸಂಗ್ರಹ' ಅಭಿಯಾನದಲ್ಲಿ, ರಾಜ್ಯದ ವಿವಿಧ ಮೂಲೆಗಳ ರೈತರಿಂದ ಸಂಗ್ರಹಿಸಲಾದ ಸಹಿ ಪತ್ರಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷರಾದ ಸಚಿನ ಮಿಗಾ ಅವರು ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಹಸ್ತಾಂತರಿಸಿದರು.

   ಡಿ.ಕೆ.ಶಿವಕುಮಾರ್, ಪೋಸ್ಟ್ ಕಾರ್ಡ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ರಾಷ್ಟ್ರಪತಿಗೆ ತಲುಪಿಸಲಿದ್ದಾರೆ. ಎಪಿಎಂಸಿ, ಕಾರ್ಮಿಕ ಕಾಯ್ದೆ ಹಾಗೂ ಭೂ.ಸುಧಾರಣೆ ಕಾಯ್ದೆ ರದ್ದು ಪಡಿಸುವಂತೆ ಸಹಿ ಸಂಗ್ರಹ ಮಾಡಲಾಗಿದೆ ಎಂದರು

   ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಕೆಪಿಸಿಸಿ ಐಟಿ ವಿಭಾಗದ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಇದ್ದರು.ಕಾರ್ಮಿಕರು ನಾಳೆ ಭಾರತ ಬಂದ್ ಬೆಂಬಲಿಸಿ ಕರ್ತವ್ಯದಲ್ಲಿರುವಾಗ ಕಪ್ಪು ಪಟ್ಟಿಗಳನ್ನು ಧರಿಸಲಿದ್ದಾರೆ ಮತ್ತು ಕೆಲಸದ ಸಮಯದ ನಂತರ ಅಥವಾ ಮೊದಲು ವೇದಿಕೆಯು ಪ್ರತಿಭಟನೆ ಮತ್ತು ಮೆರವಣಿಗೆಗಳನ್ನು ನಡೆಸಲಿದೆ ಎಂದು ಅವರು ಹೇಳಿದ್ದಾರೆ.

   ಭಾರತ ಬಂದ್‌ದಿನ ಅಗತ್ಯ ವಸ್ತುಗಳಿಗೆ ವಿನಾಯಿತಿ ಇದೆ. ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹಾಲು ದೊರೆಯುತ್ತದೆ ಮತ್ತು ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ ಸಂಚಾರ ಎಂದಿನಂತೆ ಇರುತ್ತದೆ.

   ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಭಾರತ್ ಬಂದ್‌ ಬೆಂಬಲಿಸಿರುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟಾಗಬಹುದು. ಅಲ್ಲದೆ ಬ್ಯಾಂಕ್ ಒಕ್ಕೂಟಗಳು ರೈತರಿಗೆ ಬೆಂಬಲ ನೀಡಿದ್ದು, ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು.

   English summary
   In a unique form of protest, the President of India will be flooded with nearly nine lakh postcards from Karnataka to voice the concern of farmers against the new agri-bills passed by the Union government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X