ಅಬ್ಬಬ್ಬಾ ಒಂದೇ ರಾತ್ರಿ ಇಷ್ಟೊಂದು ಮದ್ಯ ಕುಡಿದರಾ ಬೆಂಗಳೂರಿಗರು?
ಬೆಂಗಳೂರು, ಜನವರಿ 01 : ಡಿಸೆಂಬರ್ 31ರ ರಾತ್ರಿ ಕರ್ನಾಟಕದಾದ್ಯಂತ ಹೊಸ ವರ್ಷಾಚರಣೆ ಜೋರಾಗಿ ನಡೆದಿದೆ. ಬೆಂಗಳೂರಲ್ಲೂ ಹೊಸ ವರ್ಷಾಚರಣೆ ನೆಪದಲ್ಲಿ ಮದ್ಯದ ನದಿಯೇ ಹರಿದಿದೆ.
ಮದ್ಯ ಮಾರಾಟಗಾರರ ಸಂಘ ನೀಡಿರುವ ಮಾಹಿತಿ ಪ್ರಕಾರ, ನಿನ್ನೆ ಒಂದೇ ದಿನ ಬೆಂಗಳೂರಲ್ಲಿ 80 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆಯಂತೆ.
ಹೌದು, ಇದು ಕೇವಲ ಬೆಂಗಳೂರು ನಗರದ ಒಳಗಿರುವ ಪರವಾನಗಿ ಹೊಂದಿರುವ ಬಾರುಗಳಲ್ಲಿ ಮಾರಾಟವಾಗಿರುವ ಮದ್ಯದ ಮೌಲ್ಯದ ಅಂಕಿ-ಅಂಶ. ಹೋಲ್-ಸೇಲ್ ಮಳಿಗೆಗಳಲ್ಲಿ ಮಾರಾಟವಾದ ಮದ್ಯದ ಪ್ರಮಾಣವನ್ನು ಇದರಿಂದ ಹೊರಗಿಡಲಾಗಿದೆ.

ಮದ್ಯ ಮಾರಾಟಗಾರರ ಮಳಿಗೆ ಸಂಘದ ಮಾಹಿತಿ ಪ್ರಕಾರ, ನಿನ್ನೆ ಒಂದೇ ದಿನ ಸುಮಾರು 80 ಕೋಟಿ ಮದ್ಯ ವ್ಯಾಪಾರವಾಗಿದ್ದು, ಮಳಿಗೆಗಳಿಗೆ 30% ಲಾಭಾಂಶ ಸಿಕ್ಕಿದೆ ಎಂದು ಹೇಳಲಾಗಿದೆ.
ಕಳೆದ ಬಾರಿಗಿಂತಲೂ ಈ ಬಾರಿ ಮದ್ಯ ಹೆಚ್ಚು ಮಾರಾಟವಾಗಿದೆ ಎಂದು ಮದ್ಯ ಮಾರಾಟಗಾರರ ಮಳಿಗೆ ಸಂಘದ ಉಪಾಧ್ಯಕ್ಷರು ಮಾಧ್ಯಮಗಳಿಗೆ ಹೇಳಿದ್ದು, ಕಳೆದ ಬಾರಿಗಿಂತಲೂ ಮದ್ಯ ಮಾರಾಟದಲ್ಲಿ ಶೇ 50ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.












Click it and Unblock the Notifications