ಸೋಮಸಂದ್ರ ಪಾಳ್ಯ ಮ್ಯಾನ್ ಹೋಲ್ ದುರಂತ: 8 ಮಂದಿ ಬಂಧನ

ಬೆಂಗಳೂರು, ಜನವರಿ 09: ನಗರದ ಸೋಮಸಂದ್ರ ಪಾಳ್ಯದಲ್ಲಿ ಅಪಾರ್ಟ್ ಮೆಂಟ್ ನ ಮ್ಯಾನ್ ಹೋಲ್ ಗೆ ಇಳಿದು ಉಸಿರುಗುಟ್ಟಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಲಕ್ಷ್ಯ ಆರೋಪದಡಿ 8 ಮಂದಿಯನ್ನು ಬಂಧಿಸಲಾಗಿದೆ

ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಜನರು ಮಾತ್ರ ಬುದ್ಧಿ ಕಲಿಯುತ್ತಿಲ. ಪರಿಣಾಮ ಮ್ಯಾನ್ ಹೋಲ್ ಗೆ ಇಳಿದು ಸಾವನ್ನಪ್ಪುವ ಕಾರ್ಮಿಕರ ಸರಣಿ ನಿಲ್ಲುತ್ತಿಲ್ಲ.

ಜನವರಿ 7 ರಂದು ಬೊಮ್ಮನಹಳ್ಳಿ ವ್ಯಾಪ್ತಿಯ ಬಂಡೇಪಾಳ್ಯ ಬಳಿಯ ಸೋಮಸಂದ್ರದ ಎನ್. ಡಿ ಸೆಫೆಲ್ ಅಪಾರ್ಟ್ ಮೆಂಟ್ ನಲ್ಲಿ ಮಧ್ಯಾಹ್ನ ವೇಳೆ 10 ಅಡಿ ಆಳದ ಒಳಚರಂಡಿ ನೀರು ಸಂಸ್ಕರಣಾ ಘಟಕಕ್ಕೆ ಇಳಿದಿದ್ದ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದರು. ಕೂಡಲೇ ಅಲ್ಲಿಗೆ ಬಂದ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟು ಮೂವರನ್ನು ಮೇಲಕ್ಕೆತ್ತಿದ್ದರು. ನಂತರ ಅವರನ್ನು ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

8 arrested in Manhole tragedy case

ಮೂವರು ಕಾರ್ಮಿಕರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ಸ್ಪಷ್ಟಪಡಿಸಿದ್ದರು. ಯಾವುದೇ ಭದ್ರತಾ ಕ್ರಮಗಳನ್ನು ಕೈಗೊಳ್ಳದೆ ಕಾರ್ಮಿಕರನ್ನು ಮ್ಯಾನ್ ಹೋಲ್ ಗೆ ಇಳಿಸಿದ್ದಾರೆ ಎಂದು ಬಂಡೆ ಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+