ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ: 7 ಮಂದಿ ಬಂಧನ, ದಾಳಿಗೆ ಕಾರಣ ತಿಳಿಯಿರಿ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 10: ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ಬೇಕರಿ ಸಿಬ್ಬಂದಿಯ ಮೇಲೆ ಪುಂಡರು ನಡೆಸಿದ ದಾಳಿಗೆ ಸಂಬಂಧಿಸಿದಂತೆ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೈಟ್‌ಫಿಲ್ಡ್‌ ಡಿಸಿಪಿ, 'ಹಲ್ಲೆ ಪ್ರಕರಣದಲ್ಲಿ 7 ಮಂದಿಯನ್ನು ಬಂಧಿಸಿಲಾಗಿದೆ' ಎಂದು ತಿಳಿಸಿದ್ದಾರೆ.

ವ್ಯಾಪಾರ ಮಾಡುವುದನ್ನು ಬಿಟ್ಟು ಹೋಗುವಂತೆ ಬೇಕರಿ ಸಿಬ್ಬಂದಿಗೆ ನೆರೆಯ ಅಂಗಡಿಯವರು ಒತ್ತಡ ಹೇರಿದ್ದಾರೆ. ಆ ಹಿನ್ನೆಲೆಯಲ್ಲಿ ಯುವಕರು ಬೇಕರಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಲು ಆರೋಪಿಗಳಿಗೆ ನೆರೆಯ ಅಂಗಡಿಯವರು ಸುಫಾರಿ ನೀಡಿದ್ದರು ಎಂದು ತಿಳಿದುಬಂದಿದೆ.

ಇದು ಕೇವಲ ಸೇಗರೇಟಿಗೆ ಸಂಬಂಧಿಸಿದ ಪ್ರಕರಣವಲ್ಲ. ಪೂರ್ವ ನಿಯೋಜಿತ ದಾಳಿಯಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

7 arrested in assault on bakery staff in Bengaluru; Know attack reason

ಘಟನೆಗೆ ಸಂಬಂಧಿಸಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಮದು ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?

ಸೇಗರೇಟಿಗೆ ಹಣ ಕೇಳಿದ್ದಕ್ಕಾಗಿ ಅಂಗಡಿಯವರ ಜೊತೆ ಪುಂಡರು ಜಗಳ ತೆಗೆದಿದ್ದಾರೆ. ಆ ಸಮಯದಲ್ಲಿ ಏಕಾಏಕಿ ಬೇಕರಿಯೊಳಗೆ ನುಗ್ಗಿದ ಯುವಕರು ಸಿಬ್ಬಂದಿಯ ಮೇಲೆ ಮಾರಣಾಂತಿವಾಗಿ ಹಲ್ಲೆ ನಡೆಸಿದ್ದಾರೆ. ಅವರಿಗೆ ಹೆಲ್ಮೆಟ್‌ನಿಂದ ಹೊಡೆದಿದ್ದಾರೆ. ಪ್ಲಾಸ್ಟಿಕ್‌ ಟ್ರೆ ಇಂದ ತೆಲೆಗೆ ಚಚ್ಚಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಂಗಡಿಯನ್ನು ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. 'ನಾವೇನು ತಪ್ಪು ಮಾಡಿಲ್ಲ ಅಣ್ಣಾ' ಎಂದು ಅಂಗಡಿಯವರು ಗೋಗರೆದರೂ ಕೇಳದ ಪುಂಡರು ಕಾಲಿನಿಂದ ಒದ್ದಿದ್ದಾರೆ. ಬೇಕರಿ ಸಿಬ್ಬಂದಿಯ ತಲೆಗೆ ಗಾಯಗಳಾಗಿವೆ.

7 arrested in assault on bakery staff in Bengaluru; Know attack reason

ಈ ಎಲ್ಲ ದೃಶ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಈ ವಿಡಿಯೊವನ್ನು ಅಂಗಡಿಯವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್‌ ಆಗಿದ್ದು, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಪುಡಿ ರೌಡಿಗಳ ಕಾಟ ಜಾಸ್ತಿಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಈ ತರಹದ ಘಟನೆಗಳು ನಡೆಯದಂತೆ ಪೊಲೀಸರು ತಡೆಯಬೇಕು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಒತ್ತಾಯಿಸಿದ್ದಾರೆ.

English summary
The police have given information regarding the attack by thugs on the bakery staff in Kammanahalli, Bangalore. Commenting on this, Whitefield DCP said that '7 people have been arrested in the assault case',
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X