ಬೆಂಗಳೂರಿನಲ್ಲಿ ನಿಗೂಢವಾಗಿ ನಾಪತ್ತೆಯಾದ ಆರು ವಿದ್ಯಾರ್ಥಿಗಳು

ಬೆಂಗಳೂರು, ಜೂನ್ 19: ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಟ್ಯೂಷನ್ ಗೆಂದು ತೆರಳಿದ್ದ ಆರು ಮಕ್ಕಳು ನಾಪತ್ತೆಯಾದ ಘಟನೆ ನಡೆದಿದೆ.

ಟ್ಯೂಷನ್ ಗೆಂದು ಹೋಗಿದ್ದ ಮಕ್ಕಳು ಎಷ್ಟು ಸಮಯವಾದರೂ ಮನೆಗೆ ಬರದಿದ್ದಾಗ ಪಾಲಕರು ಟ್ಯೂಷನ್ ಕ್ಲಾಸಿಗೆ ಫೋನಾಯಿಸಿ ವಿಚಾರಿಸಿದ್ದಾರೆ. ಆದರೆ ಅವರು ಟ್ಯೂಷನ್ ಕ್ಲಾಸಿಗೂ ಬಂದಿರಲಿಲ್ಲ ಎಂಬುದು ಆಗ ತಿಳಿದುಬಂದಿದೆ. ಆರು ಮಕ್ಕಳಲ್ಲಿ ಒಬ್ಬ ಮಾತ್ರ ಮೊಬೈಲ್ ಫೋನ್ ಹೊಂದಿದ್ದು, ಆತನ ಮೊಬೈಲ್ ಫೋನ್ ಕಾಮಾಕ್ಷಿಪಾಳ್ಯದಲ್ಲಿ ಸ್ವಿಡ್ಚ್ ಆಫ್ ಆಗಿದೆ. ಇದರಿಂದಾಗಿ ಪಾಲಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

5 students missing in Bengalurus Kamaskhi Palya

ಸೇಂಟ್ ಕ್ಲಾರೆನ್ಸ್ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದ ಮಕ್ಕಳು ಇವರು ಎಂಬುದು ತಿಳಿದುಬಂದಿದ್ದು, ಅವರ ಪತ್ತೆಗೆ ಪೊಲೀಸರು ತೊಡಗಿದ್ದಾರೆ. ನಾಪತ್ತೆಗೆ ಕಾರಣ ತಿಳಿದುಬಂದಿಲ್ಲ.

ಮಕ್ಕಳನ್ನು ವರುಣ್, ರಾಕೇಶ್, ಅನೂಪ್, ಚಂದನ್, ರೇಣು, ಸುಜನ್ ಎಂದು ಗುರುತಿಸಲಾಗಿದೆ. ವಿಜಯನಗರ ಎಸಿಪಿ ಪರಮೇಶ್ವರ್ ನೇತ್ರತ್ವದಲ್ಲಿ ಮಕ್ಕಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ರೈಲ್ವೇ ಸ್ಟೇಶನ್, ಬಸ್ ಸ್ಟಾಪ್ ಮುಂತಾದೆಡೆ ಮಕ್ಕಳ ಪತ್ತೆಗೆ ಪೊಲೀಸರು ತೊಡಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+