ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಕೆಆರ್ ಪುರಂ ಸಮೀಪ 6 ಪ್ರತ್ಯೇಕ ಬಸ್‌ ಪಥ ನಿರ್ಮಾಣ

|
Google Oneindia Kannada News

ಬೆಂಗಳೂರು,ಫೆಬ್ರವರಿ 03: ಬೆಂಗಳೂರಿನ ಕೆಆರ್ ಪುರಂ ಸಮೀಪ ಶೀಘ್ರ 6 ಪ್ರತ್ಯೇಕ ಬಸ್‌ ಪಥ ನಿರ್ಮಾಣವಾಗಲಿದೆ.

ಔಟರ್‌ ರಿಂಗ್ ರಸ್ತೆ ಹಾಗೂ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ರಸ್ತೆಯಲ್ಲಿ ರಸ್ತೆಗಳು ಕಿರಿದಾಗಿವೆ. ಬಿಎಂಆರ್‌ಸಿಎಲ್ ಹಾಗೂ ಬಿಬಿಎಂಪಿಯು ಈ ಮಾರ್ಗದಲ್ಲಿ ಆರು ಪ್ರತ್ಯೇಕ ಬಸ್ ಪಥವನ್ನು ನಿರ್ಮಾಣ ಮಾಡಲು ಮುಂದಾಗಿದೆ.

ಈ ವರ್ಷ ನಮ್ಮ ಮೆಟ್ರೋ, ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್ಈ ವರ್ಷ ನಮ್ಮ ಮೆಟ್ರೋ, ಬಿಎಂಟಿಸಿಗೆ ಒಂದು ದೇಶ ಒಂದು ಕಾರ್ಡ್

ಈ ಪ್ರತ್ಯೇಕ ಬಸ್ ಪಥವು ಬೆನ್ನಿಗಾನಹಳ್ಳಿ-ಟಿನ್ ಫ್ಯಾಕ್ಟರಿ-ಕೆಆರ್‌ ಪುರಂ ಮೆಟ್ರೋ ಮಾರ್ಗದಲ್ಲಿಯೇ ಬರಲಿದೆ. ಇದರಿಂದಾಗಿ ಮಧ್ಯ ರಸ್ತೆಯಲ್ಲಿ ಬಸ್‌ಗಳನ್ನು ನಿಲುಗಡೆ ಮಾಡುವುದು ತಪ್ಪುತ್ತದೆ.

ಬಿಎಂಆರ್‌ಸಿಎಲ್ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಕಾರ್ಯ ನಡೆಯಲಿದೆ. ಹಾಗೆಯೇ ಬೆನ್ನಿಗಾನಹಳ್ಳಿಯಲ್ಲಿ ಬಸ್‌ ನಿಲ್ದಾಣ ನಿರ್ಮಿಸುವ ಗುರಿಯನ್ನೂ ಕೂಡ ಹೊಂದಿದೆ.

ಮಾರ್ಗದಲ್ಲಿ ಎರಡು ದೇವಸ್ಥಾನಗಳು

ಮಾರ್ಗದಲ್ಲಿ ಎರಡು ದೇವಸ್ಥಾನಗಳು

ಆ ಮಾರ್ಗದಲ್ಲಿ ಎರಡು ದೇವಸ್ಥಾನಗಳು ಬರಲಿದ್ದು, ಅವುಗಳನ್ನು ಕೆಡವಿ ಪರಿಹಾರವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.ಇದರಿಂದಾಗಿ ರಸ್ತೆಯ ಅಗಲೀಕರಣವೂ ಸುಲಭವಾಗಲಿದೆ.

91 ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ

91 ಮರಗಳನ್ನು ಕಡಿಯಬೇಕಾದ ಪರಿಸ್ಥಿತಿ

ಬೆನ್ನಿಗಾನಹಳ್ಳಿಯಲ್ಲಿ 91 ಮರಗಳನ್ನು ಕಡಿಯಲು ಅನುಮತಿ ಡತವಾಗುತ್ತಿರುವ ಕಾರಣ ರಸ್ತೆ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗುತ್ತಿದೆ. ಟಿನ್ ಫ್ಯಾಕ್ಟರಿಯಲ್ಲಿ ರಾತ್ರಿ ಹೊತ್ತು ಕ್ರಾಸಿಂಗ್ ಮಾಡುವುದು ಬಹಳ ಕಷ್ಟ, ಖಾಸಗಿ ಬಸ್‌ಗಳು, ಟ್ಯಾಕ್ಸಿಗಳು ಮಧ್ಯ ರಸ್ತೆಯಲ್ಲಿ ನಿಂತಿರುತ್ತವೆ.

ಎಲ್ಲೆಲ್ಲಿ ಬಸ್ ಪ್ರತ್ಯೇಕ ಪಥ

ಎಲ್ಲೆಲ್ಲಿ ಬಸ್ ಪ್ರತ್ಯೇಕ ಪಥ

ನಾಲ್ಕು ಪಥಗಳು ಬೆನ್ನಿಗಾನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಇರುವ ಜ್ಯೋತಿಪುರದಲ್ಲಿ ಬರಲಿದೆ. ಬಸ್‌ಗಳು ಕೆಆರ್ ಪುರಂ ಮೆಟ್ರೋ ನಿಲ್ದಾಣದಿಂದ ಹೆಬ್ಬಾಳಕ್ಕೆ ಹೋಗಲಿದೆ. ಬಸ್‌ ಬೇ (ಸಿ) ಬಸ್‌ಗಳು ಕೆಆರ್ ಪುರಂನಿಂದ ಬರಲಿದ್ದು ಹೊಸಕೋಟೆಗೆ ಹೋಗಲಿದೆ ಹಾಗೆಯೇ ಮುಂದೆ ಎಸ್‌ವಿ ರಸ್ತೆ ತಲುಪಲಿದೆ. ಬಸ್‌ ಬೇ (ಡಿ) ಬಸ್‌ಗಳು ಎಸ್‌ವಿ ರಸ್ತೆಯಿಂದ ಹೊಸಕೋಟೆ ಮಾರ್ಗವಾಗಿ ಬರಲಿದ್ದು ಮುಂದೆ ಕೆಆರ್ ಪುರಂ ನಿಲ್ದಾಣಕ್ಕೆ ತೆರಳಲಿದೆ.

Recommended Video

ರೈತರ ಪ್ರತಿಭಟನಾ ಸ್ಥಳದಲ್ಲಿ ಬ್ಯಾರಿಕೇಡ್, ಸಿಮೆಂಟ್ ಗೋಡೆ ನಿರ್ಮಾಣ! ಪ್ರಿಯಾಂಕಾ ಗಾಂಧಿ ಆಕ್ರೋಶ | Oneindia Kannada
ಇನ್ನೆರೆಡು ಬಸ್‌ ಬೇ ಗಳು ಎಲ್ಲಿನಿರ್ಮಾಣ

ಇನ್ನೆರೆಡು ಬಸ್‌ ಬೇ ಗಳು ಎಲ್ಲಿನಿರ್ಮಾಣ

ಬಸ್‌ ಬೇ (ಇ) ಬಸ್‌ಗಳು ಹೆಬ್ಬಾಳದಿಂದ ಕೆಆರ್ ಪುರಂ ರೈಲ್ವೆ ನಿಲ್ದಾಣಕ್ಕೆ ತೆರಳಲಿದೆ. ಬಸ್‌ ಬೇ (ಎ) ಕೆಆರ್ ಪುರಂ ಮೆಟ್ರೋ ನಿಲ್ದಾಣದ ಬಳಿ ಬರಲಿದೆ. ಬಸ್ ಬೇ (ಎಫ್) ಟಿನ್‌ ಫ್ಯಾಕ್ಟರಿಯಿಂದ ಬಸ್‌ಗಳು ಮಾರತ್ತಹಳ್ಳಿ ಹಾಗೂ ವೈಟ್‌ಫೀಲ್ಡ್ ಕಡೆಗೆ ತೆರಳಲಿದೆ.

English summary
The bus bays will come up in Benniganahalli-Tin Factory-KR Puram section as part of Metro work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X