Big Breaking: ಒಂದೇ ದಿನ ಕರ್ನಾಟಕದಲ್ಲಿ 515 ಕೊರೊನಾ ಕೇಸ್ ಪತ್ತೆ

ಬೆಂಗಳೂರು, ಜೂನ್ 5: ಕರ್ನಾಟಕದಲ್ಲಿ ಇಂದು ಒಂದೇ ದಿನ 515 ಜನರಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ.

Recommended Video

      ಪ್ರತಿನಿತ್ಯ ಸೈಕಲ್ ತುಳಿಯೋದ್ರಿಂದ ಪರಿಸರ ಹಾಗೂ ಆರೋಗ್ಯಕ್ಕೂ ಪ್ರಯೋಜನ | Oneindia Kannada

      ಇಂದು ವರದಿಯಾಗಿರುವ 515 ಪ್ರಕರಣಗಳ ಪೈಕಿ 473 ಜನರು ಮಹಾರಾಷ್ಟ್ರ ರಾಜ್ಯದಿಂದ ಪ್ರಯಾಣ ಮಾಡಿರುವ ಹಿನ್ನೆಲೆ ಹೊಂದಿದ್ದಾರೆ. ಉಡುಪಿಯಲ್ಲಿ 204 ಕೇಸ್, ಕಲಬುರಗಿಯಲ್ಲಿ 42 ಮಂದಿಗೆ ವೈರಸ್, ಯಾದಗರಿಯಲ್ಲಿ 74 ಜನರಿಗೆ ಸೋಂಕು, ವಿಜಯಪುರದಲ್ಲಿ 53 ಕೇಸ್ ಸೇರಿದಂತೆ ರಾಜ್ಯದಲ್ಲಿ 500 ರ ಗಡಿ ದಾಟಿದೆ.

      ಉಡುಪಿಯಲ್ಲಿ 204 ಕೇಸ್ ವರದಿಯಾಗುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 768ಕ್ಕೆ ಏರಿದೆ. ಕಲಬರುಗಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 552ಕ್ಕೆ ಜಿಗಿದಿದೆ. ಬೆಂಗಳೂರಿನಲ್ಲಿ ಒಟ್ಟು 434 ಜನರಿಗೆ ವೈರಸ್ ಅಂಟಿಕೊಂಡಿದೆ.

      515 New Coronavirus Cases Reported in Karnataka Today


      ಜಿಲ್ಲೆವಾರು ಇಂದು ವರದಿಯಾದ ಸೋಂಕಿನ ವಿವರ

      ಉಡುಪಿ 204

      ಕಲಬುರಗಿ 42

      ಬೆಂಗಳೂರು ನಗರ 10

      ಬೆಂಗಳೂರು ಗ್ರಾಮಾಂತರ 12

      ಯಾದಗಿರಿ 74

      ಮಂಡ್ಯ 13

      ಬೆಳಗಾವಿ 36

      ಬೀದರ್ 39

      ವಿಜಯಪುರ 53

      ಹಾಸನ 3, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ದಾವಣಗೆರೆ 1, ಬಾಗಲಕೋಟೆ 1, ಧಾರವಾಡ 3, ಬಳ್ಳಾರಿ 1, ಕೋಲಾರ 1, ಹಾವೇರಿ 2, ರಾಮನಗರ 2, ಚಿಕ್ಕಬಳ್ಳಾಪುರ 3 ಕೇಸ್ ಪತ್ತೆಯಾಗಿದೆ.

      ಇದುವರೆಗೂ ರಾಜ್ಯದಲ್ಲಿ 1688 ಸೋಂಕಿತರು ಗಣಮುಖರಾಗಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. 3088 ಸಕ್ರಿಯ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿದೆ. ಈವರೆಗೂ 57 ಜನರು ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು 13 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+