• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ್‌ ಗೌರವ್‌ ರೈಲು: ಕಾಶಿ ವಿಶ್ವನಾಥ ದರ್ಶನಕ್ಕೆ ₹5000 ಸಹಾಯಧನ

|
Google Oneindia Kannada News

ಬೆಂಗಳೂರು ನವೆಂಬರ್ 11: ಕಾಶಿ ವಿಶ್ವನಾಥ ದರ್ಶನ ತೆರಳುವ ಭಾರತ್‌ ಗೌರವ್‌ ರೈಲು ಪ್ರಯಾಣಿಕರಿಗೆ ಇನ್ನು ಮುಂದೆ ಮತ್ತಷ್ಟು ಅನುಕೂಲವಾಗಲಿದೆ. ಈ ವಿಶೇಷ ರೈಲು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಹಾಗೂ ಭಾರತೀಯ ರೈಲ್ವೆ ನೀತಿಯಡಿಯಲ್ಲಿ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ಹೇಳಿಕೊಂಡಿದೆ. ಕಾಶಿ ದರ್ಶನಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆ ಹಾಗೂ ದೇಶದ ಹಿಂದೂ ಧಾರ್ಮಿಕ ಕ್ಷೇತ್ರಗಳ ಪೂರ್ವ ಮಾಹಿತಿ, ಯೋಜನೆ ವಸತಿ ಸೌಲಭ್ಯಗಳ ಕುರಿತು ಸರ್ಕಾರದ ಮುಜರಾಯಿ ಇಲಾಖೆಯೇ ಯಾತ್ರಾರ್ಥಿಗಳಿಗೆ ಸಹಕರಿಸಲಿದೆ.

ಪ್ರಧಾನಿ ನರೇಂದ್ರ ಮೋದಿ ಇಂದು ದಕ್ಷಿಣ ಭಾರತ ಪ್ರವಾಸದಲ್ಲಿದ್ದಾರೆ. ಇಲ್ಲಿ ಪ್ರಧಾನಿ ದಕ್ಷಿಣ ಭಾರತಕ್ಕೆ ಮೊದಲ ವಂದೇ ಭಾರತ್ ರೈಲನ್ನು ಉಡುಗೊರೆಯಾಗಿ ನೀಡಿದರು. ಈ ರೈಲು ಮೈಸೂರಿನಿಂದ ಚೆನ್ನೈ ನಡುವೆ ಸಂಚರಿಸಲಿದೆ. ಇದೇ ವೇಳೆ ಬೆಂಗಳೂರಿನ ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ಈ ರೈಲಿಗೆ ಚಾಲನೆ ನೀಡಿದರು. ಕಾಸಿ ದರ್ಶನಕ್ಕೆ ಸಂಚರಿಸುವ ಬೆಂಗಳೂರು-ವಾರಣಾಸಿ ಭಾರತ ಗೌರವ್ ಕಾಶಿ ವಿಶ್ವನಾಥ ದರ್ಶನಕ್ಕೆ ಸಂಚರಿಸಲಿರುವ ರೈಲಿಗೆ ನರೇಂದ್ರ ಮೋದಿ ಚಾಲನೆ ನೀಡಿದರು.

ಭಾರತೀಯ ರೈಲ್ವೆಯ 'ಭಾರತ್ ಗೌರವ್' ರೈಲು ನೀತಿಯಡಿಯಲ್ಲಿ ಕರ್ನಾಟಕದ ಮುಜರಾಯಿ ಇಲಾಖೆಯು 'ಭಾರತ್ ಗೌರವ್ ಕಾಶಿ ದರ್ಶನ' ಈ ರೈಲನ್ನು ಓಡಿಸಲಿದೆ. ನೈಋತ್ಯ ರೈಲ್ವೆ ಪ್ರಕಾರ, "ಕಾಶಿಗೆ ಪ್ರಯಾಣಿಸಲು ಬಯಸುವ ಅನೇಕ ಪ್ರಯಾಣಿಕರ ಹಾಗೂ ಯಾತ್ರಾರ್ಥಿಗಳ ಕನಸನ್ನು ಇದು ಈಡೇರಿಸುತ್ತದೆ." ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

5000 subsidy for Bharat Gaurav Kashi Vishwanath Darshan

ಯಾತ್ರಾರ್ಥಿಗಳಿಗೆ 5,000 ರೂಪಾಯಿಗಳ ನಗದು ಸಹಾಯಧನ
ರೈಲ್ವೇಯ 'ಭಾರತ್‌ ಗೌರವ್‌' ರೈಲು ನೀತಿಯಡಿಯಲ್ಲಿ ಕರ್ನಾಟಕದ ಮುಜರಾಯಿ ಇಲಾಖೆಯು ನಡೆಸುವ 'ಭಾರತ ಗೌರವ್ ಕಾಶಿ ದರ್ಶನ' ರೈಲಿಗೆ ಪ್ರಧಾನಿ ಚಾಲನೆ ನೀಡಿದ್ದಾರೆ. ನೈಋತ್ಯ ರೈಲ್ವೆ ಪ್ರಕಾರ, "ಕಾಶಿಗೆ ಭೇಟಿ ನೀಡಲು ಬಯಸುವ ಅನೇಕ ಪ್ರಯಾಣಿಕರ ಕನಸನ್ನು ಇದು ಈಡೇರಿಸುತ್ತದೆ." ಈ ರೈಲು ಯಾತ್ರಿಕರಿಗೆ ರಿಯಾಯಿತಿ ದರದಲ್ಲಿ 8 ದಿನಗಳ ಪ್ರವಾಸ ಪ್ಯಾಕೇಜ್‌ನ್ನು ನೀಡುತ್ತಿದೆ. ಕರ್ನಾಟಕ ಸರ್ಕಾರವು ಕಾಶಿ ವಿಶ್ವನಾಥ ಯಾತ್ರಾರ್ಥಿಗಳಿಗೆ 5,000 ರೂಪಾಯಿಗಳ ನಗದು ಸಹಾಯಧನ ನೀಡುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ರೈಲು ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗರಾಜ್ ಸೇರಿದಂತೆ ಪವಿತ್ರ ಸ್ಥಳಗಳನ್ನು ಒಳಗೊಂಡಿದೆ.

English summary
Railway department claims that Bharat Gaurav train will be more convenient for Kashi Vishwanath darshan as this special train will run under Mujarai department of Karnataka government and Indian railway policy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X