ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

50% ದಂಡ ರಿಯಾಯಿತಿ: 5 ದಿನದಲ್ಲಿ ಸಂಗ್ರಹವಾದ ಮೊತ್ತವೆಷ್ಟು?

ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) ಮಂಗಳವಾರ 8.13 ಕೋಟಿ ರೂಪಾಯಿ ದಂಡಗಳನ್ನು ಸಂಗ್ರಹಿಸಿ ಇದುವರೆಗೆ ಒಟ್ಟು 14,71,593 ಪ್ರಕರಣಗಳನ್ನು ತೆರವುಗೊಳಿಸಿದ್ದಾರೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 8: ಸಂಚಾರಿ ಪೊಲೀಸರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವಾಹನ ಸಾವರರು ದಂಡ ಪಾವತಿಸಲು ಶೇಕಡ 50ರಷ್ಟು ರಿಯಾಯಿತಿ ನೀಡಿದ್ದು ಈ ಪರಿಣಾಮವಾಗಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಹರಿದು ಬರುತ್ತಿದೆ.

ಸಂಚಾರಿ ನಿಯಮ ಉಲ್ಲಂಘಟನೆಯಿಂದ ಬಾಕಿ ಉಳಿದಿರುವ ಟ್ರಾಫಿಕ್ ಚಲನ್‌ಗಳ ಮೇಲೆ ಸರ್ಕಾರವು 50% ರಿಯಾಯಿತಿಯನ್ನು ಪರಿಚಯಿಸಿದ ಐದು ದಿನಗಳ ನಂತರ ಮಂಗಳವಾರ ಟ್ರಾಫಿಕ್ ದಂಡ ಸಂಗ್ರಹದಲ್ಲಿ ಹೆಚ್ಚಳ ಮುಂದುವರೆಯಿತು.

ಬೆಂಗಳೂರಿನಲ್ಲಿ ಜನವರಿಯಲ್ಲಿ ದಾಖಲಾದ ಹಿಟ್‌ ಆಂಡ್‌ ರನ್‌ ಪ್ರಕರಣಗಳು, ವಿವರಬೆಂಗಳೂರಿನಲ್ಲಿ ಜನವರಿಯಲ್ಲಿ ದಾಖಲಾದ ಹಿಟ್‌ ಆಂಡ್‌ ರನ್‌ ಪ್ರಕರಣಗಳು, ವಿವರ

ಬೆಂಗಳೂರು ಟ್ರಾಫಿಕ್ ಪೊಲೀಸರು (ಬಿಟಿಪಿ) ಮಂಗಳವಾರ 8.13 ಕೋಟಿ ರೂಪಾಯಿ ದಂಡಗಳನ್ನು ಸಂಗ್ರಹಿಸಿ ಒಟ್ಟು 5 ದಿನದಲ್ಲಿ 41.20 ಕೋಟಿ ರೂಪಾಯಿಯಷ್ಟು ದಂಡವನ್ನು ಸಂಗ್ರಹಿಸಿದ್ದಾರೆ. ಮಂಗಳವಾರ ಒಟ್ಟು 3,14,285 ಪ್ರಕರಣಗಳನ್ನು ತೆರವುಗೊಳಿಸುವುದರೊಂದಿಗೆ ಇದುವರೆಗೆ ಒಟ್ಟು 14,71,593 ಪ್ರಕರಣಗಳನ್ನು ತೆರವುಗೊಳಿಸಿದ್ದಾರೆ.

50 percent fine discount: 41 crore fine collected in 5 days

ದಂಡವನ್ನು ಕರ್ನಾಟಕ ರಾಜ್ಯ ಪೊಲೀಸ್ ಅಪ್ಲಿಕೇಶನ್ ಬಳಸಿಯೂ ಪಾವತಿಸಬಹುದು. Android ಫೋನ್‌ಗಳಲ್ಲಿ https://play.google.com/store/apps ಮತ್ತು iPhone ಗಳಲ್ಲಿ https://itunes.apple.com/in/app/karnataka-state-police ನಿಂದ ಲಿಂಕ್‌ಗಳನ್ನು ಡೌನ್‌ಲೋಡ್ ಮಾಡಬಹುದು.

ಬೆಂಗಳೂರಿನಲ್ಲಿ ರಸ್ತೆ ನಿಯಮ ಉಲ್ಲಂಘನೆ ದಂಡ ಸಂಗ್ರಹದಲ್ಲಿ ಶೇ.120ರಷ್ಟು ಹೆಚ್ಚಳಬೆಂಗಳೂರಿನಲ್ಲಿ ರಸ್ತೆ ನಿಯಮ ಉಲ್ಲಂಘನೆ ದಂಡ ಸಂಗ್ರಹದಲ್ಲಿ ಶೇ.120ರಷ್ಟು ಹೆಚ್ಚಳ

ಬೆಂಗಳೂರಿನಲ್ಲಿ ದಂಡದಲ್ಲಿ ಅರ್ಧದಷ್ಟು ರಿಯಾಯಿತಿ ಘೋಷಿಸಿದ ನಂತರ 3 ದಿನದಲ್ಲಿ ಹೆಚ್ಚು ವಾಹನಗಳಿಂದ ಕೂಡಿರುವ ಸಿಲಿಕಾನ್ ಸಿಟಿ ಬೆಂಗಳೂರು ಒಂದರಲ್ಲೇ ಭಾನುವಾರ (ರಾತ್ರಿ 8.30ರ ತನಕ) ಭರ್ಜರಿ ದಂಡ ಪಾವತಿಯಾಗಿತ್ತು. ಬೆಂಗಳೂರು ನಗರ ಪೊಲೀಸರು ನಿಯಮ ಉಲ್ಲಂಘಿಸಿದವರಿಂದ ಭಾನುವಾರ 6.31 ಕೋಟಿ ರೂಪಾಯಿ ಸಂಗ್ರಹಿಸಿ, ಒಟ್ಟಾಗಿ 22,32,47,491 ರೂಪಾಯಿ ಸಂಗ್ರಹಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

50 percent fine discount: 41 crore fine collected in 5 days

ಭಾನುವಾರ ವಿವಿಧ ಪಾವತಿ ವಿಧಾನಗಳ ಮೂಲಕ ಒಟ್ಟು ಸುಮಾರು 6,31,77,750 ರೂಪಾಯಿ ಪಾವತಿಯಾಗಿತ್ತು. ಇದರಿಂದಾಗಿ ಇದುವರೆಗೆ ಬಾಕಿ ಉಳಿದಿದ್ದ ಸಂಚಾರ ನಿಯಮ ಉಲ್ಲಂಘಿಸಿದ್ದ 2,06,326 ಪ್ರಕರಣಗಳು ವಿಲೇವಾರಿಯಾಗಿದ್ದವು. ಸಂಚಾರ ನಿಯಮಗಳ ದಂಡದಲ್ಲಿ ಶೇ.50 ರಿಯಾಯಿತಿ ಘೋಷಿಸಿತು. ಇದಾದ ಬೆನ್ನಲ್ಲೆ ಕೇವಲ ಎರಡೇ ದಿನದಲ್ಲಿ 13.8 ಕೋಟಿ ರೂ. ಹಣ ಸಂಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ದಂಡ ಕಟ್ಟುವ ಅವಧಿಯನ್ನು ಮೂರು ತಿಂಗಳವರೆಗೆ ವಿಸ್ತರಿಸುವಂತೆ ಎಎಪಿ ಆಗ್ರಹಿಸಿದೆ.

ಆದರೆ ಸಾರಿಗೆ ಇಲಾಖೆ ರಿಯಾಯಿತಿ ದಂಡದ ಬಾಕಿ ಪಾವತಿಗೆ ಫೆಬ್ರುವರಿ 11ರವರೆಗೆ ಅವಕಾಶ ನೀಡಲಾಗಿದೆ. ಈ ಅವಧಿ ವಿಸ್ತರಣೆಗೆ ಆಮ್‌ ಆದ್ಮಿ ಪಕ್ಷದ ಮುಖಂಡ ಹಾಗೂ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಅವರು ಮನವಿ ಮಾಡಿದ್ದಾರೆ.

English summary
The traffic police has given a 50 percent discount to pay fines to motorists who have violated traffic rules, resulting in crores of rupees flowing to the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X