• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಲ್ಲಿ ಹೆಚ್ಚಾಗ್ತಿದೆ ಮಕ್ಕಳ ಕಳ್ಳರ ಹಾವಳಿ

|

ಬೆಂಗಳೂರು, ಡಿಸೆಂಬರ್ 19: ಬೆಂಗಳೂರಲ್ಲಿ ಮಕ್ಕಳ ಕಳ್ಳರ ಹಾವಳಿ ವಿಪರೀತವಾಗುತ್ತಿದೆ. ದುಷ್ಕರ್ಮಿಗಳು ಬೆಳ್ಳಂಬೆಳಗ್ಗೆಯೇ ಕಾರಿನಲ್ಲಿ ಬಂದು ಮಕ್ಕಳನ್ನು ಅಪಹರಿಸುತ್ತಿದ್ದಾರೆ.

ಪೀಣ್ಯದ ಸಿದ್ಧಾರ್ಥ ನಗರದಲ್ಲಿ ಬಾಲಕನನ್ನು ಕಿಡ್ನ್ಯಾಪ್‌ ಮಾಡಿರುವುದು ಬೆಳಕಿಗೆ ಬಂದಿದೆ. ಸಾಗರ್(5) ಕಿಡ್ನ್ಯಾಪ್ ಆದ ಬಾಲಕ. ದುಷ್ಕರ್ಮಿಗಳ ಗುಂಪೊಂದು ಕೆಂಪು ಬಣ್ಣದ ಕಾರಿನಲ್ಲಿ ಬಂದು ಬಾಲಕನನ್ನು ಹತ್ತಿಸಿಕೊಂಡು ಹೋಗಿದ್ದಾರೆ. ಆ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ.

ಬೆಂಗಳೂರಿಂದ ಉತ್ತರ ಪ್ರದೇಶಕ್ಕೆ ಹೊರಟಿದ್ದ ತಾಯಿ-ಮಗಳು ಕಿಡ್ನ್ಯಾಪ್

ಸಾಗರ್ ಅಪಹರಣಕ್ಕೆ ಯಾವುದೇ ಕಾರಣಗಳು ತಿಳಿದುಬಂದಿಲ್ಲ, ಸಾಗರ್ ಅನುಕೂಲಸ್ಥ ಕುಟುಂಬದವನು ಕೂಡ ಅಲ್ಲ, ಆತನ ಪೋಷಕರು ಕಲಬುರಗಿ ಜಿಲ್ಲೆಯಿಂದ ಹೊಟ್ಟೆಪಾಡಿಗಾಗಿ ವಲಸೆ ಬಂದವರಾಗಿದ್ದಾರೆ. ಮಗನಿಲ್ಲದೆ ಕಣ್ಣೀರಿಡುವಂತಾಗಿದೆ. ತಂದೆ-ತಾಯಿ ಕೆಲಸಕ್ಕೆ ತೆರಳಿದ್ದಾಗ ಬಾಲಕನನ್ನು ಅಪಹರಿಸಲಾಗಿದೆ.

ಒಬ್ಬ ವ್ಯಕ್ತಿ ಆ ಪ್ರದೇಶಕ್ಕೆ ಪಾನಿಪುರಿ ಮಾರಲು ಬರುತ್ತಿದ್ದ, ಬಾಲಕ ಅಪಹರಣವಾದ ಬಳಿಕ ಪಾನಿಪುರಿ ಮಾರಾಟಗಾರ ಕೂಡ ಆ ಕಡೆ ಬಂದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ಸಾಲ ವಾಪಸ್ ನೀಡದ್ದಕ್ಕೆ ಸ್ನೇಹಿತನ ಹೆಂಡತಿಯನ್ನೇ ಮದುವೆಯಾದ ಭೂಪ

ಕೆಲಸದಿಂದ ಬಂದು ಮಗ ಎಲ್ಲಿದ್ದಾನೆ ಎಂದು ಹುಡುಕಿದ್ದಾರೆ, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ, ಅವರು ಆ ಪ್ರದೇಶದಲ್ಲಿರುವ ಸಿಸಿಕ್ಯಾಮರಾಗಳನ್ನು ಪರಿಶೀಲಿಸಿದಾಗ ಅಪಹರಣವಾಗಿರುವುದು ಬೆಳಕಿಗೆ ಬಂದಿದೆ.

English summary
5 year old boy Sagar kidnapped in Peenya industrial area bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X