ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಭೂಮಿ ಸಿಗುವ ಟಾಪ್ 5 ಪ್ರದೇಶಗಳ ವಿವರ !
ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಇದೆ. ಅದೇ ರೀತಿ ಬೆಂಗಳೂರಿನಲ್ಲಿ ಕೆಲವು ಕಡೆಗಳಲ್ಲಿ ಕಡಿಮೆ ಬೆಲೆಗೆ ಭೂಮಿ/ ಜಾಗ ಸಿಗುತ್ತಿವೆ. ಈ ರೀತಿ ಸಿಗುವ ಜಾಗಗಳಲ್ಲಿ ನೀವು ಈಗಲಿಂದಲೇ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ನಿಮ್ಮ್ ಆದಾಯ ಹಾಗೂ ಜಾಗದ ಬೆಲೆಯೂ ಕೋಟ್ಯಾಂತರ ರೂಪಾಯಿಗೆ ತಲುಪಲಿದೆ. ಬೆಂಗಳೂರಿನಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಈ ಹಿಂದೆ ಕಡಿಮೆ ಬೆಲೆಗೆ ಜಾಗ ಖರೀದಿ ಮಾಡಿರುವವರು ಇದೀಗ ತಮ್ಮ ಆಸ್ತಿಯ ಬೆಲೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಜಾಗ ಸಿಗುವ 5 ಪ್ರದೇಶಗಳ ಲಿಸ್ಟ್ ಇಲ್ಲಿದೆ.
ನಗರದ ಈ ಐದು ಪ್ರದೇಶದಲ್ಲಿ ಕಡಿಮೆ ಬೆಲೆಗೆ ಜಾಗ ಸಿಗುತ್ತದೆ. ಇಲ್ಲಿ ನೀವು ಜಾಗ ಖರೀದಿ ಮಾಡಿದರೆ ಮುಂದಿನ ದಿನಗಳಲ್ಲಿ ಅದೃಷ್ಟ ಅಂತಲೇ ಹೇಳಬಹುದು. ಹಾಗಾದರೆ ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಜಾಗ ಸಿಗುವ ಐದು ಪ್ರದೇಶಗಳ ಲಿಸ್ಟ್ ಇಲ್ಲಿದೆ. ಈ ಬಗ್ಗೆ Housing.com ವರದಿ ಮಾಡಿದೆ.

1. ಸರ್ಜಾಪುರ ರಸ್ತೆ: ಬೆಂಗಳೂರಿನಲ್ಲಿ ಕಡಿಮೆ ಬೆಲೆ ಹಾಗೂ ಉತ್ತಮ ಜಾಗ ಸಿಗುವ ಪ್ರದೇಶಗಳಲ್ಲಿ ಸರ್ಜಾಪುರ ರಸ್ತೆಯೂ ಒಂದಾಗಿದೆ. ಈ ಭಾಗದಲ್ಲಿ ಇತ್ತಿಚಿನ ದಿನಗಳಲ್ಲಿ ರಿಯಲ್ ಎಸ್ಟೇಟ್‌ಗೆ ಬಿಗ್ ಧಮಾಕ ಸಿಕ್ಕಿದೆ. ಅಲ್ಲದೆ ಇಲ್ಲಿಂದ ವೈಟ್‌ಫೀಲ್ಡ್, ಮಾರತ್ತಹಳ್ಳಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ವಿವಿಧ ಪ್ರಮುಖ ಭಾಗಗಳಿಗೆ ಸಂಪರ್ಕ ಸಿಗುತ್ತದೆ. ಉದ್ಯೋಗ ಪ್ರದೇಶಗಳಿಗೆ ಸಮೀಪದಲ್ಲಿ ಇರುವುದರಿಂದ ಇಲ್ಲಿ ಭೂಮಿಗೆ ಒಳ್ಳೆಯ ಬೇಡಿಕೆ ಇದೆ. ಅಲ್ಲದೆ ಇಲ್ಲಿ ಹೆಬ್ಬಾಳ - ಸರ್ಜಾಪುರ ಮೆಟ್ರೋ ಮಾರ್ಗವು ಬರುವುದರಿಂದ ಟ್ರಾನ್ಸ್‌ಪೋರ್ಟ್ ಸಿಸ್ಟಂಗೆ ಅನುಕೂಲಕಾರಿಯಾಗಿದೆ.
ಸರ್ಜಾಪುರ ಭೂಮಿ ಬೆಲೆ ಹೇಗಿದೆ: ಪ್ರತಿ ಚದರ ಮೀಗೆ / (Per Sqft) 8,200 ರೂಪಾಯಿಯಿಂದ 9000 ಸಾವಿರ ರೂಪಾಯಿಯ ವರೆಗೆ ಇದೆ.
2. ವೈಟ್‌ಫೀಲ್ಡ್: ಇನ್ನು ವೈಟ್‌ಫೀಲ್ಡ್‌ನ ಬಗ್ಗೆ ಹೇಳುವುದೇ ಬೇಡ. ಇದು ಐಟಿ - ಬಿಟಿಯ ಕೇಂದ್ರ ಬಿಂದುವಾಗಿದೆ. ಈ ಭಾಗದಲ್ಲಿ ಉತ್ತಮ ಕನೆಕ್ಟಿವಿಟಿ ಇದೆ. ಅಲ್ಲದೆ ಇಲ್ಲಿ ಪ್ರಮುಖ ಎಂಜಿನಿಯರಿಂಗ್ ಕಾಲೇಜುಗಳು, ಸ್ಕೂಲ್ ಹಾಗೂ ಆಸ್ಪತ್ರೆಗಳು ಸೇರಿದಂತೆ ಹಲವು ಪ್ರಮುಖ ಸೌಲಭ್ಯಗಳು ಇವೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್ ಹಂತ 2 ಹಂತದ ಮೆಟ್ರೋ ಸೇವೆಯೂ ಇದೆ. ಅಲ್ಲದೆ ಮುಖ್ಯವಾಗಿ ಇಲ್ಲಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೇವಲ 35 ಕಿ.ಮೀ ದೂರ ಮಾತ್ರ ಇದೆ.
ವೈಟ್‌ಫೀಲ್ಡ್ ಭೂಮಿ ಬೆಲೆ ಹೇಗಿದೆ: ಪ್ರತಿ ಚದರ ಮೀಗೆ / (Per Sqft) ವೈಟ್‌ಫೀಲ್ಡ್‌ನಲ್ಲಿ 10,000 ಸಾವಿರದಿಂದ 10,200 ರೂಪಾಯಿಯ ವರೆಗೆ ಇದೆ.
3. ಹೆಬ್ಬಾಳ: ಉತ್ತರ ಬೆಂಗಳೂರಿನಲ್ಲಿ ಕೆಲವು ಕಡೆ ಭೂಮಿಗೆ ಕಡಿಮೆ ಬೆಲೆ ಇದೆ. ಅಲ್ಲದೆ ಹೆಬ್ಬಾಳ, ಬಳ್ಳಾರಿ ರಸ್ತೆ ಹಾಗೂ ಹೊರ ವರ್ತುಲ ರಸ್ತೆಯು ಅಭಿವೃದ್ಧಿಯಾಗಿದೆ. ಇಲ್ಲಿಂದ ಯಲಹಂಕ ಹಾಗೂ ಮಾರತ್ತಹಳ್ಳಿ ಭಾಗಗಳಿಗೆ ಒಳ್ಳೆಯ ಸಂಪರ್ಕ ಇದೆ. ಮಾಲ್‌ಗಳು ಹಾಗೂ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಪ್ರಮುಖವಾಗಿ ಈ ಮಾರ್ಗದಲ್ಲಿ ಮೆಟ್ರೋ ರೈಲು ಅಭಿವೃದ್ಧಿಯಾಗುತ್ತಿದೆ. ಅಲ್ಲದೆ ಇಲ್ಲಿಂದ ಕಚೇರಿಗಳು ಸಮೀಪದಲ್ಲಿಯೇ ಇವೆ.
ಹೆಬ್ಬಾಳದಲ್ಲಿ ಭೂಮಿ ಬೆಲೆ ಹೇಗಿದೆ: ಪ್ರತಿ ಚದರ ಮೀಗೆ / (Per Sqft) ಹೆಬ್ಬಾಳದಲ್ಲಿ 7,900ರಿಂದ 8,500 ರೂಪಾಯಿ ವರೆಗೆ ಇದೆ.
4. ಯಲಹಂಕ: ಯಲಹಂಕದಲ್ಲಿ ಭೂಮಿಯ ಬೆಲೆ ಹೊರ ವಲಯದಲ್ಲಿ ಕಡಿಮೆ ಇದೆ. ಅಲ್ಲದೆ ಹಲವು ಕಾರಣಕ್ಕೆ ಇಲ್ಲಿ ಭೂಮಿ ಬೆಲೆ ಬೂಮ್ ಆಗುತ್ತಿದೆ. ಈ ಭಾಗದಿಂದ NH-44 ಹಾಗೂ ಪ್ರತಿಷ್ಠಿತ ಉದ್ಯೋಗ ಸಂಸ್ಥೆಗಳು. ಬಳ್ಳಾರಿ ರಸ್ತೆಗೆ ಇಲ್ಲಿಂದ ಸಂಪರ್ಕ ಸಿಗುವುದು ಉತ್ತಮವಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 17 ಕಿ.ಮೀ ದೂರದಲ್ಲಿದೆ.
ಯಲಹಂಕದಲ್ಲಿ ಭೂಮಿ ಬೆಲೆ ಹೇಗಿದೆ: ಇನ್ನು ಯಲಹಂಕದಲ್ಲಿ ಭೂಮಿಯ ಬೆಲೆಯು ಪ್ರತಿ ಚದರ ಮೀ.ಗೆ / (Per Sqft) 9,500 ರೂಪಾಯಿಯಿಂದ 10,500 ರೂಪಾಯಿ ಇದೆ.
5. ಬೊಮ್ಮನಹಳ್ಳಿ: ಬೆಂಗಳೂರಿನ ದಕ್ಷಿಣ ಭಾಗದಲ್ಲೂ ಭೂಮಿಗೆ ಒಳ್ಳೆಯ ಬೆಲೆ ಇದೆ. ಅಲ್ಲದೆ ಈ ಭಾಗದಿಂದಲೂ NH-44, ಹೊಸೂರು ರಸ್ತೆ, ಹೊರ ಔಟರ್ ರೋಡ್ ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ ವಿವಿಧ ಭಾಗಗಳಿಗೆ ಉತ್ತಮ ಸಂರ್ಪಕವನ್ನು ಕಲ್ಪಿಸುತ್ತದೆ. ವಿಮಾನ ನಿಲ್ದಾಣಕ್ಕೂ ಈ ಭಾಗದಿಂದ ಕೇವಲ 43 ಕಿ.ಮೀ ದೂರದಲ್ಲಿದೆ. ಬಿಟಿಎಂ ಲೇಔಟ್, ಕೋರಮಂಗಲ ಹಾಗೂ ಎಚ್‌ಎಸ್‌ಆರ್ ಲೇಔಟ್‌ಗೆ ಇಲ್ಲಿಂದ ಸುಲಭ ಸಂಪರ್ಕ ಸಾಧ್ಯವಿದೆ.
ಬೊಮ್ಮನಹಳ್ಳಿ ಭೂಮಿ ಬೆಲೆ ಹೇಗಿದೆ: ಪ್ರತಿ ಚದರ ಮೀಗೆ / (Per Sqft) ಬೊಮ್ಮನಹಳ್ಳಿಯಲ್ಲಿ 8,500 ರೂಪಾಯಿಯಿಂದ 10,000 ಸಾವಿರ ರೂಪಾಯಿಯ ವರೆಗೂ ಸಹ ಇದೆ.












Click it and Unblock the Notifications