Get Updates
Get notified of breaking news, exclusive insights, and must-see stories!

ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ಬೆಂಗಳೂರಲ್ಲಿ ಕನ್ನಡಿಗರಿಗೆ ಭಾರೀ ಸಂಕಷ್ಟ ಸಾಧ್ಯತೆ!

5 New Corporations in Bengaluru: ಬೆಂಗಳೂರು ಅಭಿವೃದ್ಧಿಯ ಜೊತೆ ಜೊತೆಗೆ ಬೆಂಗಳೂರಿನಲ್ಲಿ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ಇದೀಗ ಬೆಂಗಳೂರಿನ ಅಭಿವೃದ್ಧಿಗಾಗಿ ಬೆಂಗಳೂರು ಪ್ರದೇಶವನ್ನು ಐದು ಮಹಾನಗರಗಳನ್ನಾಗಿ ವಿಭಜನೆ ಮಾಡಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕನ್ನಡಿಗರಿಗೆ ಸಮಸ್ಯೆ ಆಗಲಿದೆ ಎನ್ನುವ ಚರ್ಚೆ ಜೋರಾಗಿದೆ. ನೆನ್ನೆ ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ / ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯ ಬುಧವಾರ ಅಂಗೀಕಾರವಾಗಿರುವ ಬೆನ್ನಲೆಯಲ್ಲೇ ಈ ವಿಚಾರವಾಗಿ ಭಾರೀ ಚರ್ಚೆ ಶುರುವಾಗಿದೆ.

2025ನೇ ಸಾಲಿನ ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರಕಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ ಎಂಬ ಸ್ಪಷ್ಟನೆಗೆ ತಿದ್ದುಪಡಿ ತರಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಕರ್ನಾಟಕ ವಿಧಾನಸಭೆಯಲ್ಲಿ ಹೇಳಿದ್ದಾರೆ. ಆದರೆ, ಐದು ಹೊಸ ನಗರ ಪಾಲಿಕೆಗಳ ರಚನೆಯಿಂದಾಗಿ ಬೆಂಗಳೂರಿನ ವಿವಿಧ ಪ್ರದೇಶಗಳ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ. ಅಲ್ಲದೇ ತೆರಿಗೆ ಸಂಗ್ರಹದಲ್ಲಿ ಲೋಪವಾಗಲಿದೆ ಹಾಗೂ ಕನ್ನಡಿಗರಿಗೆ ಅನ್ಯಾಯವಾಗಲಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ (ಬಿಜೆಪಿ ನಾಯಕ) ಅವರು ಹೇಳಿದ್ದಾರೆ.

5 New Corporations in Bengaluru Spark Trouble for Kannadigas

ಈ ಸಂಬಂಧ ಅವರು ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಿಗೆ ಪತ್ರವನ್ನೂ ಬರೆದಿದ್ದಾರೆ. ಈಗ ಬೆಂಗಳೂರಿನಲ್ಲಿ ರಚಿಸಿರುವ 5 ಪಾಲಿಕೆಗಳಿಂದ ಕೆಲವು ಪಾಲಿಕೆಗಳ ಆಡಳಿತದಲ್ಲಿ ಕನ್ನಡ ಭಾಷೆ ಕಣ್ಮರೆಯಾಗುವ ಸಾಧ್ಯತೆಗಳು ಜಾಸ್ತಿ ಕಾಣಿಸುತ್ತಿವೆ. ಇದರಿಂದ ಮುಂದಿನ ದಿನಗಳಲ್ಲಿ ಕಾನೂನು

ಸುವ್ಯವಸ್ಥೆಗಳು ಹಾಳಾಗುವ ಸಂಭವವಿರುತ್ತೆ. ಈಗ ರಚಿಸಿರುವ 5 ಪಾಲಿಕೆಗಳಿಂದ ಕೆಲವು ಪಾಲಿಕೆಗಳು ಆರ್ಥಿಕ ಹಿನ್ನಡೆ, ಕೆಲವು ಪಾಲಿಕೆಗಳು ಆರ್ಥಿಕವಾಗಿ ಸದೃಢವಾಗುತ್ತವೆ. ಇದರಿಂದ ಸಮಗ್ರ ಬೆಂಗಳೂರು ಅಭಿವೃದ್ಧಿಗೆ ತೊಂದರೆಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ವಿವಿಧ ಭಾಷೆಯವರ ಪ್ರಭಾವ ಇದೆ. ಬೆಂಗಳೂರು ಮಹಾನಗರ ಪಾಲಿಕೆಯನ್ನು ಐದು ಪಾಲಿಕೆಗಳನ್ನು ಮಾಡುವುದರಿಂದಾಗಿ ಕನ್ನಡಿಗರಿಗೆ ಹಿನ್ನಡೆ ಆಗಲಿದೆ. ಅಲ್ಲದೇ ಕನ್ನಡಿಗರು ತಮ್ಮ ಅಸ್ತಿತ್ವ ಹಾಗೂ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಎಲ್ಲಾ ವಿರೋಧಗಳ ನಡುವೆಯೂ ಈ ತಿದ್ದುಪಡಿಯನ್ನು ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ. ಚುನಾವಣೆ ನಡೆಸಬೇಕಾಗಿರುವ ಉದ್ದೇಶದಿಂದ ಬೆಂಗಳೂರಿನಲ್ಲಿ ಈಗಾಗಲೇ ಇರುವ 198 ವಾರ್ಡ್‌ಗಳಿಗೆ ಚುನಾವಣೆಯನ್ನು ಮಾಡಿ ಮುಂದಿನ ದಿನಗಳಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಯೋಜನೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರ ಇದೆ.

ಇನ್ನು ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಬರೋಬ್ಬರಿ 6 ವರ್ಷಗಳಿಂದ ನಡೆಸಿಲ್ಲ. ಚುನಾವಣೆ ನಡೆಯದೆ ಬೆಂಗಳೂರಿನಲ್ಲಿ ಯಾವುದೇ ಪಾಲಿಕೆಯ ಸದಸ್ಯರು, ಮೇಯರ್ ಮತ್ತು ಉಪ ಮೇಯರ್ ಇಲ್ಲ. ಹೀಗಾಗಿ ಬೆಂಗಳೂರಿನ ಜನ ಎಲ್ಲಾ ಸಮಸ್ಯೆಗಳಿಗೂ ಆಯಾ ವಿಧಾನಸಭಾ ಕ್ಷೇತ್ರದ ಶಾಸಕರನ್ನೇ ಅವಲಂಬಿಸುವಂತಾಗಿದೆ. ಬೆಂಗಳೂರಿನ ಜನರಿಗೆ ಪಾಲಿಕೆಯ ಚುನಾವಣೆ ಇತ್ತು ಹಾಗೂ ಪಾಲಿಕೆಯ ಸದಸ್ಯರು ಇದ್ದರು ಎನ್ನುವುದೇ ಮರೆತು ಹೋಗುವಂತೆ ಆಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+