Liquor ban: 4 ದಿನ ಸರ್ಕಾರಕ್ಕೆ- ಹೋಟೆಲ್ ಉದ್ಯಮಕ್ಕಾಗುವ ನಷ್ಟದ ವಿವಿರ ಇಲ್ಲಿದೆ
ಬೆಂಗಳೂರು, ಫೆಬ್ರವರಿ 11: ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಲ್ಕು ದಿನ ಮದ್ಯ ಮಾರಾಟ ನಿಷೇಧಿಸಲಾಗಿದೆ. ಈ ನಿರ್ಧಾರದಿಂದ ಕರ್ನಾಟಕ ರಾಜ್ಯ ಸರ್ಕಾರದ ಉದ್ಯಮ ಮತ್ತು ಅಬಕಾರಿ ಇಲಾಖೆ ಭೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.
ಹೌದು, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆ ಆಗಿದ್ದು, ಅದು ಫೆಬ್ರವರಿ 14ರಿಂದ ನಡೆಯಲಿವೆ. ಈ ಕಾರಣದಿಂದ ಫೆಬ್ರವರಿ 14ರಿಂದ 16ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 300 ಕೋಟಿ ರೂಪಾಯಿ ನಷ್ಟವಾಗಲಿದೆ.

ಮದ್ಯ ಮಾರಾಟ ನಿಷೇಧಕ್ಕೆ ಹೋಟೆಲ್‌ಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇತ್ತ ನಿಷೇಧ ನಿರ್ಧಾರದಿಂದ ಸಾಕಷ್ಟು ಆಥಿರ್ಕ ನಷ್ಟ ಉಂಟಾಗುವ ಕಾರಣ ವಿವರಿಸಿ ಬೆಂಗಳೂರು ನಗರ ಜಿಲ್ಲಾ ಮದ್ಯ ವರ್ತಕರ ಸಂಘ (BDLTA) ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದೆ ಎಂದು ತಿಳಿದು ಬಂದಿದೆ.
ಪ್ರೇಮಿಗಳ ದಿನ ವಹಿವಾಟು ಏರಿಕೆ
ಮದ್ಯ ಮಾರಾಟ ದಿನವೇ ಪ್ರೇಮಿಗಳ ದಿನಾಚರಣೆಯು ಆಗಮಿಸುತ್ತದೆ. ಈ ಸಮಯದಲ್ಲಿ ಲಿಕ್ಕರ್ ಮಾರಾಟವು ಹೇರಳ ಪ್ರಮಾಣದಲ್ಲಿ ಹೆಚ್ಚಿರುತ್ತದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೇ ಇದೇ ದಿನ ಯುವ ಸಮೂಹ ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇದೆಲ್ಲ ಚಟುವಟಿಕೆಗಳಿಂದ ಆದಾಯವು ಶೇಕಡಾ 50 ರಷ್ಟು ಅಧಿಕವಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಚುನಾವಣೆ ಸಂಬಂಧ ಚುನಾವಣೆ ಆಯೋಗವು ಮದ್ಯ ಮರಾಟ ನಿಷೇಧ ನಿರ್ಧಾರ ಮಾಡಿದ್ದಾರೆ. ಇದರಿಂದ ಬೆಂಗಳೂರಿನಲ್ಲಿರುವ ಸುಮಾರು 3,700 ಮದ್ಯ ಮಾರಾಟ ಮಳಿಗೆಗಳಿಗೆ, ಸಂಸ್ಥೆಗಳಿಗೆ ತೊಂದರೆ ಆಗುತ್ತದೆ ಎನ್ನಲಾಗಿದೆ.
300 ಕೋಟಿ ರೂ. ನಷ್ಟ
ಅಬಕಾರಿ ಇಲಾಖೆ ಮಟ್ಟಿಗೆ ಫೆಬ್ರವರಿಯ ಈ ನಾಲ್ಕು ಡ್ರೈ ದಿನಗಳು ಸುಮಾರು 300 ಕೋಟಿ ರೂಪಾಯಿಗಳ ನಷ್ಟ ಮಾಡುತ್ತವೆ. ಅಲ್ಲದೆ ವ್ಯವಹಾರಗಳು ಸುಮಾರು 500 ಕೋಟಿ ರೂಪಾಯಿಗಳ ನಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
ಅನ್ಯಾಯವಾಗಿ ಬಾರ್‌ಗಳು ಮತ್ತು ಮದ್ಯದಂಗಡಿಗಳನ್ನು ಮುಚ್ಚಲಾಗಿದೆ ಎಂದು ಆರೋಪಿಸಿರುವ ಸಂಸ್ಥೆಯು ಈ ನಿರ್ಧಾರದ ಬಗ್ಗೆ ಸರ್ಕಾರ ಮತ್ತು ಚುನಾವಣಾ ಆಯೋಗ ಮರು ಪರಿಶೀಲಿಸಬೇಕೆಂದು ಮನವಿ ಮಾಡಲಾಗಿದೆ.

ಬ್ಯಾನ್ ನಿರ್ಧಾರ ಮರು ಪರಿಶೀಲಿಸುವಂತೆ ಆಗ್ರಹ
ಚುನಾವಣೆ ನಡೆಯುತ್ತಿರುವ ಕ್ಷೇತ್ರದಲ್ಲಿ ಕೇವಲ 16,000 ಮತದಾರರು ಇದ್ದಾರೆ. ಅವರೆಲ್ಲರೂ ವಿದ್ಯಾವಂತರು ಮತ್ತು ಬುದ್ಧಿವಂತರು. ಅವರು ಸ್ವಯಂ ಪ್ರೇರಿತ ನಿರ್ಧಾರ ಕೈಗೊಳ್ಳಲು ಶಕ್ತರಾದವರು. ಇದೆಲ್ಲ ಅಂಶಗಳನ್ನು ಗಮನಿಸಿ ಚುನಾವಣೆ ಅಧಿಕಾರಿಗಳು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಜೊತೆಗೆ ಆಹಾರ ಮತ್ತು ಪಾನೀಯ ಉದ್ಯಮದ ಉಳಿವಿಗೆ ಸಹಕರಿಸಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಇನ್ನೂ ಈ ಮದ್ಯ ಮಾರಾಟ ನಿಷೇಧ ವಿರುದ್ಧ ಬೃಹತ್ ಬೆಂಗಳೂರು ಹೋಟೆಲ್ ಮಾಲೀಕರ ಸಂಘವು ಸಹ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದೆ. ಅದರಲ್ಲಿ ಸಂಘದ ಅಧ್ಯಕ್ಷ ಪಿಸಿ ರಾವ್ ಅವರು, ನಾಲ್ಕು ದಿನ ಮದ್ಯ ಮಾರಾಟ ನಿಷೇಧವು ಅವೈಜ್ಞಾನಿಕವಾಗಿದೆ. ಇದೊಂದು ಅನಿರೀಕ್ಷಿತವಾಗಿದೆ ಎಂದು ತಿಳಿಸಿದ್ದಾರೆ.
ಹೋಟೆಲ್: 450 ಕೋಟಿ ರೂ.ವಹಿವಾಟು ನಿರೀಕ್ಷೆ
ಪ್ರೇಮಿಗಳ ದಿನ ಹಿನ್ನೆಲೆಯಲ್ಲಿ ಅನೇಕ ರೆಸ್ಟೋರೆಂಟ್‌ಗಳು ತಮ್ಮ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೆಲವು ಇವೆಂಟ್ ಹಮ್ಮಿಕೊಂಡಿರುತ್ತವೆ. ಈ ಮದ್ಯೆ ನಿಷೇದ ನಿರ್ಧಾರವು ಉದ್ಯಮದ ವ್ಯವಹಾರಗಳ ಮೇಲೆ ಪರಿಣಾಮ ಬೀರುತ್ತದೆ. ಈ ನಾಲ್ಕು ದಿನಗಳಲ್ಲಿ ಬರೋಬ್ಬರಿ 450 ಕೋಟಿ ರೂಪಾಯಿಗಳ ವಹಿವಾಟು ನಿರೀಕ್ಷೆ ಇದೆ.
ಇನ್ನೂ ಅಬಕಾರಿ ಇಲಾಖೆಗೂ ಸುಮಾರು 250-300 ಕೋಟಿ ರೂಪಾಯಿ ವಹಿವಾಟು ನಡೆಯಲಿದೆ. ಕೇವಲ ಹೋಟೆಲ್ ಮಾಲೀಕರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಭಾರಿ ನಷ್ಟವಾಗುತ್ತದೆ. ಅಂಕಿಅಂಶಗಳ ಪ್ರಕಾರ, ಸರ್ಕಾರವು ದಿನಕ್ಕೆ 60 ಕೋಟಿ ರೂ. ಅಬಕಾರಿ ಸಂಗ್ರಹವನ್ನು ಸಂಗ್ರಹಿಸುತ್ತದೆ ಎಂದು ಮಾಹಿತಿ ನೀಡಿದರು.
ಜತೆ ಈ ಮದ್ಯ, ಹೋಟೆಲ್ ಉದ್ಯಮದ ಉಳಿವಿಗಾಗಿ ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು. ಹೋಟೆಲ್ ಉದ್ಯಮಗಳ ಉಳಿವಿಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಚುನಾವಣಾಧಿಕಾರಿಗಳ ಈ ನಿರ್ಧಾರವು ಮರುಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಂಡರೆ, ಅತ್ಯಧಿಕ ವಹೀವಾಟಿನ ನಿರೀಕ್ಷೆಯಲ್ಲಿರುವ ಉದ್ಯಮಕ್ಕೆ ಅನುಕೂಲವಾಗಲಿದೆ. ಸಂಭವನೀಯ ನಷ್ಟ ತಪ್ಪಲಿದೆ ಎಂದು ಕೇಳಿಕೊಳ್ಳಲಾಗಿದೆ.












Click it and Unblock the Notifications