ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮಳೆ, 31 ಮರಗಳು ಧರೆಗೆ, 1 ಸಾವು

|
Google Oneindia Kannada News

ಬೆಂಗಳೂರು, ಏಪ್ರಿಲ್ 17 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಸುರಿದ ಮಳೆಯಿಂದಾಗಿ ಜನರು ಸಂತಸಗೊಂಡಿದ್ದಾರೆ. ಮಳೆ, ಗಾಳಿಯಿಂದಾಗಿ ನಷ್ಟವೂ ಸಂಭವಿಸಿದೆ. ಬೈಕ್‌ ಮೇಲೆ ಮರ ಬಿದ್ದು, ಯುವಕನೊಬ್ಬ ಮೃತಪಟ್ಟಿದ್ದಾನೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬುಧವಾರ ಸಂಜೆ ಬೆಂಗಳೂರಿನಲ್ಲಿ ಅಲಿಕಲ್ಲು ಸಹಿತ ಮಳೆಯಾಗಿದೆ. ಗುಡುಗು, ಗಾಳಿಯ ಆರ್ಭಟವೂ ಜೋರಾಗಿತ್ತು. ಲುಂಬಿನಿ ಗಾರ್ಡನ್‌ನಲ್ಲಿ ಬೈಕ್ ಮೇಲೆ ಮರ ಬಿದ್ದ ಕಾರಣ ಕಿರಣ್ (27) ಎಂಬ ಯುವಕ ಸಾವನ್ನಪ್ಪಿದ್ದಾನೆ.

ಬೆಂಗಳೂರಲ್ಲಿ ಮಳೆ, ಒಂದು ಸಾವುಬೆಂಗಳೂರಲ್ಲಿ ಮಳೆ, ಒಂದು ಸಾವು

ಜಯನಗರ, ಬಾಣಸವಾಡಿ, ಲುಂಬಿನಿ ಗಾರ್ಡನ್, ಆರ್‌.ಟಿ.ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗಾಳಿಯ ಹೊಡೆತಕ್ಕೆ ಸಿಲುಕಿ 31 ಮರಗಳು ಬಿದ್ದಿವೆ. ಲೋಕಸಭಾ ಚುನಾವಣಾ ಕಾರ್ಯಕ್ಕೆ ಹೊರಟಿದ್ದ ಸಿಬ್ಬಂದಿಗಳು ಮಳೆಯಿಂದಾಗಿ ತೊಂದರೆಗೆ ಸಿಲುಕಿದರು.

31 Trees fall, one dead heavy rain in Bengaluru

ಶಾಂತಿನಗರ, ಪುಲಿಕೇಶಿ ನಗರ, ಯಲಹಂಕ, ಬಾಣಸವಾಡಿ, ಜೆ.ಸಿ.ನಗರ, ಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದ್ದವು. ಇನ್ನೂ ಎರಡು ದಿನ ನಗರದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿಮ್ಮ ರಾಜಕೀಯ ಜ್ಞಾನವನ್ನು ಒರೆಗೆ ಹಚ್ಚುವ ರಸಪ್ರಶ್ನೆ

ಬೆಂಗಳೂರಿನಲ್ಲಿ ಗುರುವಾರ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಮಳೆ ಬಂದಿದ್ದರಿಂದ ಚುನಾವಣಾ ಸಿಬ್ಬಂದಿಗಳು ಪರದಾಡಿದರು. ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸಿಬ್ಬಂದಿಗಳು ಮತಗಟ್ಟೆ ತಲುಪುವುದು ವಿಳಂಬವಾಗಲಿದೆ.

English summary
Heavy rain and strong wind in Bengaluru city on April 17, 2019. 31 trees fall down at different locations. 27 year old Kirankumar killed after tree felled on bike.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X