ರೈಲು ಪ್ರಯಾಣಿಕರ ಗಮನಕ್ಕೆ: 32 ರೈಲುಗಳು ಇಂದಿನಿಂದ ಯಶವಂತಪುರ ನಿಲ್ದಾಣಕ್ಕೆ ಆಗಮಿಸಲ್ಲ
ಬೆಂಗಳೂರು, ಆಗಸ್ಟ್ 21: ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ನಡೆಯುವ ಪ್ರಯುಕ್ತ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣಕ್ಕೆ ಆಗಮಿಸುವ ವಿವಿಧ ರೈಲುಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸುಮಾರು 32 ರೈಲುಗಳು ಈ ನಿಲ್ದಾಣಕ್ಕೆ ಆಗಮಿಸುವುದಿಲ್ಲ ಎಂದು ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹಾಗಾದರೆ ಯಾವ ಕಾಮಗಾರಿ ನಡೆಯುತ್ತಿದೆ. ಯಾವ ಮಾರ್ಗದ ರೈಲುಗಳಿಗೆ, ಪ್ರಯಾಣಿಕರಿಗೆ ತೊಂದರೆ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಯಶವಂತಪುರ ನಿಲ್ದಾಣಕ್ಕೆ ಇಂದು ಆಗಸ್ಟ್ 21 ಬುಧವಾರದಿಂದ ಮುಂದಿನ ಒಂದು ತಿಂಗಳ ಕಾಲ ಒಟ್ಟು 32 ರೈಲುಗಳು ಆಗಮಿಸುವುದಿಲ್ಲ. ಈ ಪೈಕಿ 24 ರೈಲುಗಳನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದು, 8 ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಯಶವಂತಪುರ ರೈಲು ನಿಲ್ದಾಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಯಶವಂತಪುರ ನಿಲ್ದಾಣದ 2, 3, 4, 5 ನೇ ಪ್ಲಾಟ್‌ಫಾರಂಗಳಲ್ಲಿ ಆಗಸ್ಟ್ 20 ರಿಂದ ಸೆಪ್ಟೆಂಬರ್ 19ವರೆಗೂ ಒಂದು ತಿಂಗಳು ಕಾಮಗಾರಿ ನಡೆಸಲಾಗುತ್ತಿದೆ. ಈ ಹಿನ್ನೆಲೆ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ.
ಇದೆಲ್ಲ ಕಾರಣದಿಂದ ಯಶವಂತಪುರ ರೈಲು ನಿಲ್ದಾಣಕ್ಕೆ ಬರುವ ರೈಲುಗಳಿಗೆ, ಇಲ್ಲಿಗೆ ಬಂದು ಇಳಿಯುವ ಸ್ಥಳೀಯ ಪ್ರಯಾಣಿಕರಿಗೆ ಕೊಂಚ ಕಿರಿ ಕಿರಿ ಆಗಬಹುದು.
ಯಾವೆಲ್ಲಾ ರೈಲು ಭಾಗಶಃ ರದ್ದು, ಪಟ್ಟಿ ಇಲ್ಲಿದೆ
* ಯಶವಂತಪುರ ಹೊಸೂರು ರೈಲು (ಸಂಖ್ಯೆ 06591) ಹೆಬ್ಬಾಳದಿಂದ ಆರಂಭ.
* ತುಮಕೂರು ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06574) ಚಿಕ್ಕಬಾಣಾವರಕ್ಕೆ ಕೊನೆ.
* ತುಮಕೂರು ಯಶವಂತಪುರ ರೈಲು (ಸಂಖ್ಯೆ 06580) ಚಿಕ್ಕಬಾಣಾವರಕ್ಕೆ ಕೊನೆ.
* ಚಿಕ್ಕಬಳ್ಳಾಪುರ ಯಶವಂತಪುರ ರೈಲು (ಸಂಖ್ಯೆ 06594) ಯಲಹಂಕಕ್ಕೆ ಕೊನೆ.
* ಯಶವಂತಪುರ ಹೊಸೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06393) ಹೆಬ್ಬಾಳದಿಂದ ಆರಂಭವಾಗಲಿದೆ.
* ಹೊಸೂರು ಯಶವಂತಪುರ ರೈಲು (ಸಂಖ್ಯೆ- 06394) ಹೆಬ್ಬಾಳಕ್ಕೆ ಕೊನೆಯಾಗಲಿದೆ.
* ಹೊಸೂರು ಯಶವಂತಪುರ ರೈಲು (ಸಂಖ್ಯೆ 06592) ಹೆಬ್ಬಾಳಕ್ಕೆ ಕೊನೆಯಾಗಲಿದೆ.
* ಯಶವಂತಪುರ ಚಿಕ್ಕಬಳ್ಳಾಪುರ ರೈಲು (ಸಂಖ್ಯೆ 06593) ಯಲಹಂಕದಿಂದ ಪ್ರಯಾಣಿಸಲಿದೆ.
* ಯಶವಂತಪುರ-ತುಮಕೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 06573) ಚಿಕ್ಕಬಾಣಾವಾರದಿಂದ ಆರಂಭ.
* ಚಿಕ್ಕಮಗಳೂರು -ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ- 16239) ಚಿಕ್ಕಬಾಣಾವಾರಕ್ಕೆ ಕೊನೆಯಾಗಲಿದೆ.
* ಯಶವಂತಪುರ- ಚಿಕ್ಕಮಗಳೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 16240) ಚಿಕ್ಕಬಾಣಾವಾರದಿಂದ ಆರಂಭವಾಗಲಿದೆ.
* ಮೈಸೂರು -ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 16208) ಚಿಕ್ಕಬಾಣಾವಾರಕ್ಕೆ ಕೊನೆಯಾಗಲಿದೆ.
* ಯಶವಂತಪುರ-ಸೇಲಂ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 16211) ಹೆಬ್ಬಾಳದಿಂದ ಆರಂಭ.
* ಸೇಲಂ -ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 16212) ಹೆಬ್ಬಾಳಕ್ಕೆ ಕೊನೆಯಾಗುತ್ತದೆ.
* ಯಶವಂತಪುರ- ಮೈಸೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 16207) ಚಿಕ್ಕಬಾಣಾವಾರದಿಂದ ಆರಂಭ.
* ಜಂಬಲ್‌ಪುರ್ ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 12194) ಯಲಹಂಕದಲ್ಲಿ ಕೊನೆ.
* ಯಶವಂತಪುರ-ಜಂಬಲ್‌ಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 12193) ಯಲಹಂಕದಿಂದ ಆರಂಭ.
* ಡಾ. ಅಂಬೇಡ್ಕರ್ ನಗರ್ -ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ- 19301) ಯಲಹಂಕಕ್ಕೆ ಕೊನೆ.
* ಯಶವಂತಪುರ-ಡಾ. ಅಂಬೇಡ್ಕರ್ ನಗರ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ - 19302) ಯಲಹಂಕದಿಂದ ಆರಂಭ.
* ಮಚಲೀಪಟ್ಟಣಂ-ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 17211) ಯಲಹಂಕದಲ್ಲಿ ಕೊನೆ.
* ಯಶವಂತಪುರ-ಮಚಲೀಪಟ್ಟಣಂ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 17212) ಯಲಹಂಕದಿಂದ ಆರಂಭ.
* ಯಶವಂತಪುರ-ತುಮಕೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ- 06579) ಚಿಕ್ಕಬಾಣಾವಾರಕ್ಕೆ ಕೊನೆ.
* ಪುರಿ-ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 22883) ಯಲಹಂಕದಿಂದ ಆರಂಭ.
* ಯಶವಂತಪುರ-ಪುರಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ - 22884) ಯಲಹಂಕಕ್ಕೆ ಕೊನೆ.

ಬದಲಾವಣೆಯಾದ ರೈಲುಗಳು ಯಾವುವು?
* ಬಾಣಸವಾಡಿ ತುಮಕೂರು ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06512)
* ತುಮಕೂರು ಬಾಣಸವಾಡಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 06511)
* ವಾಸ್ಕೋ ಡ ಗಾಮ ಯಶವಂತಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17310)
* ಹುಬ್ಬಳ್ಳಿ - ಚೆನ್ನೈ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22697)
* ಚೆನ್ನೈ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 22698)
* ಯಶವಂತಪುರ ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 17309)
* ಹಾಸನ ಸೊಲ್ಲಾಪುರ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 11312)
* ಸೊಲ್ಲಾಪುರ ಹಾಸನ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 11311)
ಇನ್ನೂ ಇನ್ನು ಹುಬ್ಬಳ್ಳಿಯಿಂದ ತೆರಳಲಿರುವ ರೈಲುಗಳು ಯಶವಂತಪುರ ಎ ಕ್ಯಾಬಿನ್ ನಿಲ್ದಾಣದ ಮೂಲಕ ಬೆಂಗಳೂರಿನ ಇತರೆ ಸಮೀಪದ ನಿಲ್ದಾಣಗಳಲ್ಲಿ ನಿಲುಗಡೆ ಆಗಲಿವೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.












Click it and Unblock the Notifications