ಮಕ್ಕಳಿಗಾಗಿ ಬೆಂಗಳೂರಿನಲ್ಲಿ ಕ್ವಾರಂಟೈನ್ ಹಾಗೂ ಕೋವಿಡ್ ಕೇಂದ್ರ ಆರಂಭ

ಬೆಂಗಳೂರು, ಮೇ 25: ಕೊರೊನಾ ಎರಡನೇ ಅಲೆ ಆತಂಕದ ನಡುವೆ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಒಂದು ಕೋವಿಡ್ ಮಕ್ಕಳ ಆರೈಕೆ ಕೇಂದ್ರ ಹಾಗೂ ಮೂರು ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಕೆಆರ್ ಪುರಂ, ಕಾಡುಗೊಂಡನಹಳ್ಳಿ ಹಾಗೂ ಕೆಂಗೇರಿಯಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದ್ದು, ಕೆಆರ್ ಪುರಂನಲ್ಲಿ ಕೋವಿಡ್ ಕೇಂದ್ರ ಆರಂಭಿಸಲಾಗಿದೆ.

ಕೊರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ ಇಲ್ಲವೇ ಕೊರೊನಾದಿಂದ ಸಾವನ್ನಪ್ಪಿದವರ ಮಕ್ಕಳ ಆರೈಕೆಗೆ ಬಹುಮುಖ್ಯವಾಗಿ ಈ ಕೇಂದ್ರಗಳನ್ನು ತೆರೆಯಲಾಗಿದೆ. ಕೊರೊನಾ ಸೋಂಕಿಗೆ ತುತ್ತಾಗಿ ಮಕ್ಕಳ ಆರೈಕೆ ಕೇಂದ್ರಗಳಲ್ಲಿರುವ ಮಕ್ಕಳಿಗೂ ಇಲ್ಲಿ ಅವಕಾಶ ನೀಡಲಾಗಿದೆ.

ಇಂಥ ಸೂಕ್ಷ್ಮ ಪರಿಸ್ಥಿತಿಯಲ್ಲಿ ಮಕ್ಕಳ ಕೇಂದ್ರ ತೆರೆಯುವುದು ಈ ಕ್ಷಣದ ತುರ್ತಾಗಿತ್ತು. ಈ ಸಮಯದಲ್ಲಿ ಮಕ್ಕಳಿಗೆ ಆರೈಕೆಯ ಅವಶ್ಯಕತೆಯೂ ಹೆಚ್ಚಿದೆ ಎಂದು ಕೋವಿಡ್ ಕೇಂದ್ರ ಸ್ಥಾಪನೆಯಲ್ಲಿ ತೊಡಗಿಕೊಂಡಿರುವ ಆಹನ್ ವಾಹನ್ ಸಂಸ್ಥೆ ಸದಸ್ಯೆ ತಲ್ಹಾ ಸಲಾರಿಯಾ ಹೇಳುತ್ತಾರೆ. ಕರ್ನಾಟಕ ಸರ್ಕಾರ ಮಕ್ಕಳ ಕಲ್ಯಾಣ ಸಮಿತಿ ಸಹಭಾಗಿತ್ವದಲ್ಲಿ ಮೂರು ಸ್ವಯಂ ಸೇವಾ ಸಂಸ್ಥೆಗಳು ಕೂಡಿ ಈ ಕೇಂದ್ರಗಳನ್ನು ತೆರೆದಿವೆ. ರಾಷ್ಟ್ರೀಯ ಮಕ್ಕಳ ಸಹಾಯವಾಣಿ 1098ರಿಂದ ಈ ಕೇಂದ್ರಗಳಿಗೆ ಮಕ್ಕಳನ್ನು ದಾಖಲಿಸಿಕೊಳ್ಳಲಾಗುತ್ತಿದೆ.

3 Quarantine Centres And Covid Care Centre Started For Children In Bengaluru

ಪ್ರಸ್ತುತ ಕೆಆರ್ ಪುರಂನಲ್ಲಿನ ಡಿವೈನ್ ಗ್ರೇಸ್ ಇನ್‌ಸ್ಟಿಟ್ಯೂಷನ್ ಕೋವಿಡ್ ಕೇಂದ್ರದಲ್ಲಿ 27 ಮಕ್ಕಳಿದ್ದಾರೆ. ಈ ಕೇಂದ್ರದಲ್ಲಿ 6-18 ವರ್ಷದ ಬಾಲಕ ಬಾಲಕಿಯರಿಗೆ ಆರೈಕೆ ನೀಡಲಾಗುತ್ತಿದೆ. 60 ಮಕ್ಕಳಿಗೆ ಇಲ್ಲಿ ಅವಕಾಶವಿದೆ. ಕ್ವಾರಂಟೈನ್ ಕೇಂದ್ರಗಳಲ್ಲಿರುವ ಮಕ್ಕಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಅವರಿಗೆ ಕೊರೊನಾ ಪಾಸಿಟಿವ್ ಬಂದರೆ ಕೋವಿಡ್ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ತಹ್ಲಾ ಮಾಹಿತಿ ನೀಡಿದರು.

ಡ್ರೀಮ್ ಇಂಡಿಯಾ ನೆಟ್‌ವರ್ಕ್, ವೈಟ್ ಫೀಲ್ಡ್ ರೈಸಿಂಗ್, ಆಹನ್ ವಾಹನ್ ಸಂಸ್ಥೆಗಳು ಈ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿವೆ. ಯಾವುದೇ ಮಕ್ಕಳಿಗೆ ಚಿಕಿತ್ಸೆಯ ಅವಶ್ಯಕತೆಯಿದ್ದರೆ ರೇನ್‌ಬೋ ಮಕ್ಕಳ ಆಸ್ಪತ್ರೆ ಸಂಪರ್ಕ ಸ್ಥಳವಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+