ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕರ್ನಾಟಕದಲ್ಲಿ ಬಿಜೆಪಿಯಿಂದ ತ್ರಿಶೂಲ ವ್ಯೂಹ

Recommended Video

      Lok Sabha Elections 2019 : ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕರ್ನಾಟಕದಲ್ಲಿ ಬಿಜೆಪಿಯಿಂದ ತ್ರಿಶೂಲ ವ್ಯೂಹ

      ಬೆಂಗಳೂರು, ಮಾರ್ಚ್ 13: ಈ ಬಾರಿಯ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿಯ ಮೂರು ತಂತ್ರಗಳೇನು ಎಂಬ ಬಗ್ಗೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮಾಹಿತಿ ಹಂಚಿಕೊಂಡಿದ್ದಾರೆ. ಇಡೀ ದೇಶದ ಪಾಲಿಗೆ ಕರ್ನಾಟಕ ಅತಿ ಮುಖ್ಯವಾದದ್ದು. ಏಕೆಂದರೆ, ಮಹಾಘಟಬಂಧನ್ ಎಂಬ ಪ್ರಯೋಗ ಇಲ್ಲಿ ಯಶಸ್ವಿ ಆಗಿದೆ ಹಾಗೂ ಇದು ದೇಶಕ್ಕೇ ಮಾದರಿ ಎಂಬ ಅಭಿಪ್ರಾಯ ಇದೆ.

      ಆದ್ದರಿಂದ ಕರ್ನಾಟಕಕ್ಕೆ ಅನ್ವಯ ಆಗುವಂತೆ ಮೂರು ತಂತ್ರವನ್ನು ಅನುಸರಿಸಲಾಗುತ್ತದೆ ಎಂದಿದ್ದಾರೆ ರಾಜೀವ್ ಚಂದ್ರಶೇಖರ್.

      * ಕಳೆದ ಬಾರಿಯ ಚುನಾವಣೆಗೂ ಮುನ್ನ ಹತ್ತು ವರ್ಷದ ಆಡಳಿತದಲ್ಲಿ ಯುಪಿಎ ಮಾಡಿದ್ದೇನು? ಬೆಳವಣಿಗೆ ಇಲ್ಲ. ಅತಿಯಾದ ಭ್ರಷ್ಟಾಚಾರ. ಜನರಿಗೆ ಅನುಕೂಲ ಇಲ್ಲ. ಅತಿ ಹೆಚ್ಚು ಎನ್ ಪಿಎ (ಅನುತ್ಪಾದಕ ಆಸ್ತಿ). ಭಾರೀ ವಂಚನೆಯಿಂದ ಬ್ಯಾಂಕಿಂಗ್ ವ್ಯವಸ್ಥೆಯೇ ಹಾಳಾಯಿತು. ಇವೆಲ್ಲವನ್ನೂ ಜನರ ಮುಂದಿಡಲಾಗುವುದು. ಕಾಂಗ್ರೆಸ್ ನ ಗತವನ್ನು ಮರೆಯುವಂತೆ ಮಾತನಾಡುತ್ತಿರುವ ರಾಹುಲ್ ಗಾಂಧಿ ಒಂದು ಕಡೆ ಇದ್ದರೆ, ಅವೆಲ್ಲ ನೆನಪಿಸಬೇಕಿದೆ.

      3 Broad Campaign Strategy of BJP Karnataka for LS 2019: MP Rajeev Chandrasekhar

      * ನರೇಂದ್ರ ಮೋದಿ ಅವರ ಸರಕಾರದ ಆಡಳಿತದ ಆರಂಭವಾಗಿದ್ದೇ ಭ್ರಷ್ಟಾಚಾರರಹಿತವಾಗಿ. ಅದರಿಂದಲೇ ಈ ಸರಕಾರ ಏನೆಂಬುದರ ಅಳತೆಗೋಲಾಗುತ್ತದೆ. ಈ ಐದು ವರ್ಷಗಳಲ್ಲಿ ಸಾಲು ಸಾಲಾಗಿ ಕಾರ್ಯಕ್ರಮಗಳನ್ನು ಪರಿಚಯಿಸಿದ್ದು, ಅದು ಪ್ರತಿ ವ್ಯಕ್ತಿಗೂ ತಲುಪಿದೆ. ಮಧ್ಯಮ ವರ್ಗದಿಂದ ರೈತರ ತನಕ. ಬಡವರಿಂದ ಮೇಲ್ಮಧ್ಯಮ ವರ್ಗದ ತನಕ. ಸೇನೆಯಿಂದ ಸರಕಾರಿ ನೌಕರರ ತನಕ. ಇದು ಸರಕಾರದ ಸಾಧನೆ.

      ಈ ಚುನಾವಣೆಯು ನರೇಂದ್ರ ಮೋದಿ ಜೀ ಸರಕಾರದ ಅಭಿವೃದ್ಧಿ ಹಾಗೂ ಆಡಳಿತದ ವೈಖರಿ ವರ್ಸಸ್ ಹತ್ತು ವರ್ಷದ ಯುಪಿಎ ಸರಕಾರದ ಆಡಳಿತ ವೈಖರಿಯ ಮಧ್ಯದ ವಿಷಯವಾಗಿರುತ್ತದೆ.

      * ನರೇಂದ್ರ ಮೋದಿ ಅವರ ವಿರುದ್ಧ ಮೈತ್ರಿಗೆ ಮುಂದಾಗುತ್ತಿರುವವರು ಮೋದಿ ಅವರ ಮೇಲಿನ ದ್ವೇಷದಿಂದಷ್ಟೇ ಒಂದಾಗುತ್ತಿದ್ದಾರೆ. ಅವರ ಮಧ್ಯೆ ಸಮಾನವಾದ ಆರ್ಥಿಕ ನೀತಿ ಇಲ್ಲ. ಸಮಾನ ಸಿದ್ಧಾಂತವಿಲ್ಲ. ಈ ವಿಚಾರ ಕರ್ನಾಟಕದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಆಡಳಿತದಲ್ಲೇ ಬಯಲಾಗಿದೆ. ಮಹಾ ಮೈತ್ರಿ ಅಂತೇನಾದರೂ ಆಗಿ, ಸರಕಾರ ರಚನೆ ಆದರೆ ಎಂಥ ಪರಿಸ್ಥಿತಿ ಉದ್ಭವಿಸುತ್ತದೆ ಎಂಬುದಕ್ಕೆ ಕರ್ನಾಟಕ ಸರಕಾರವೇ ಉದಾಹರಣೆ.

      ವಿಪಕ್ಷಗಳು ಅರ್ಧ ಸತ್ಯ ಅಥವಾ ಸುಳ್ಳು ಹೇಳುತ್ತಿವೆ. ನರೇಂದ್ರ ಮೋದಿ ಅವರ ಸರಕಾರ ಕರ್ನಾಟಕಕ್ಕಾಗಿ ನೀಡಿದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆ, ಅನುದಾನ ಹಂಚಿಕೆ ಈ ಎಲ್ಲದರ ಬಗ್ಗೆ ಚರ್ಚೆಗೆ ಕೂಡ ಈ ಮೈತ್ರಿ ಸರಕಾರ ಸವಾಲು ಸ್ವೀಕರಿಸಲಾರದು. ಯಡಿಯೂರಪ್ಪ ಮತ್ತು ಬಿಜೆಪಿಯ ಇತರ ನಾಯಕರ ನೇತೃತ್ವದಲ್ಲಿ ಕರ್ನಾಟಕದಿಂದ ಅತಿ ಹೆಚ್ಚು ಬಿಜೆಪಿ ಸಂಸದರನ್ನು ಇಲ್ಲಿನ ಮತದಾರರು ಆರಿಸಿ, ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಿ ಮಾಡುತ್ತೀರಿ ಎಂಬ ನಂಬಿಕೆ ಇದೆ ಎಂದು ಹೇಳಿದ್ದಾರೆ ರಾಜೀವ್ ಚಂದ್ರಶೇಖರ್.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+