ಅಕ್ಟೋಬರ್ 1 ರಿಂದ ನೂತನ ರನ್‌ವೇನಲ್ಲಿ ವಿಮಾನಗಳ ಕಾರ್ಯಾಚರಣೆ
ಅಬೆಂಗಳೂರು, ಜನವರಿ 11: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿಗಾಗಿ 13 ಸಾವಿರ ಕೋಟಿ ಮೀಸಲಿಡಲಾಗಿದ್ದು ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ.
ದೇಶದ ಮೂರನೇ ಅತಿ ದಟ್ಟಣೆಯ ವಿಮಾನ ನಿಲ್ದಾಣ ಇದಾಗಿದೆ. ಸಂಪೂರ್ಣ ಹಸಿರು ಹೊದಿಕೆ ಹೊದ್ದಿರುವಂತೆ , ಕಟ್ಟಡದೊಳಗೂ ಹಸಿರಿಗೆ ಆದ್ಯತೆ ನೀಡಿ ಎರಡನೇ ಟರ್ಮಿನಲ್ ಅಭಿವೃದ್ಧಿ ಪಡಿಸುತ್ತಿರುವುದು ವಿಶೇಷವಾಗಿದೆ.
ಉದ್ಯಾನ ನಗರಿ ಹೆಸರಿಗೆ ತಕ್ಕಂತೆ ಕೆಐಎ ಹಚ್ಚ ಹಸಿರು ಹಾಗೂ ಜಲಮೂಲಗಳಿಂದ ಕಂಗೊಳಿಸಲಿದೆ. ನಿಲ್ದಾಣ ಆವರಣದಿಂದಲೇ ಹಚ್ಚ ಹಸುರಿನ ಸ್ವಾಗತ ದೊರೆಯಲಿದೆ. ನಿಲ್ದಾಣದ ಒಳಭಾಗ, ನಿರ್ಗಮನದವರೆಗೂ ಎಲ್ಲೆಡೆ,ಗಿಡ, ಮರ ಬೆಳೆಸಲು ಆದ್ಯತೆ ನೀಡಲಾಗುತ್ತದೆ.

ನಿಲ್ದಾಣದ ಕಾರ್ಯಾಚರಣೆಗೆ ಬಳಸಿದ ನೀರು ಮರು ಬಳಕೆ ಮಾಡಲು ಸುಮಾರು 70 ಎಕರೆಯಷ್ಟು ಜಾಗದಲ್ಲಿ ಅಲ್ಲಲ್ಲಿ ಕೆರೆಯಂತಹ ಹೊಂಡಗಳನ್ನು ಸ್ಥಾಪಿಸಿ ನೀರು ಮರುಪೂರಣ ಮಾಡಲಾಗುತ್ತದೆ.
2ನೇ ಟರ್ಮಿನಲ್ ನಿರ್ಮಾಣ , ಎರಡನೇ ರನ್ ವೇ, ಸಂಪರ್ಕ ರಸ್ತೆಗಳು, ಆಂತರಿಕ ರಸ್ತೆ ಮೂಲ ಸೌಕರ್ಯ ಅಭಿವೃದ್ಧಿ, ಮಲ್ಟಿ ಮಾಡೆಲ್ ಟ್ರಾನ್ಸ್‌ಪೋರ್ಟ್ ಹಬ್, ತಂತ್ರಜ್ಞಾನ ಅಳವಡಿಕೆ ಸೇವೆ ಒದಗಿಸಲು 13 ಸಾವಿರ ಕೋಟಿ ರು ವೆಚ್ಚವಾಗಲಿದೆ ಎಂದು ಬಿಐಎಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್ ತಿಳಿಸಿದ್ದಾರೆ.












Click it and Unblock the Notifications